ಡಾ.‌ರೂಪಾ‌ರವಿ ಸಾವಿನ ಸುತ್ತ ಅನುಮಾನದ ಹುತ್ತ

ಕ್ರೈಂ

ಚಿತ್ರದುರ್ಗ ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರೂಪಾ ರವಿ ಅವರ ಸಾವಿನ ಸುತ್ತ ಅನುಮಾನದ ಹುತ್ತಗಳು ಕಂಡು ಬರುತ್ತಿವೆ.
ಇಂದು‌ ಬೆಳಗ್ಗೆ ಅವರು ಬಾತ್ ರೂಂ ನಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿದೆ. ರಕ್ತ ಸ್ರಾವವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆಯನ್ನು ಕೊಡಿಸಲಾಗಿತ್ತು.ಆದರೆ ಇದು ಫಲಕಾರಿಯಾಗದೆ ನಿಧನರಾದರು ಎಂದು ಸುದ್ದಿ ಬಂದಿತ್ತು. ಇವರ ಸಾವು, ಅನುಮಾನದ ಹುತ್ತಗಳನ್ನು ಸೃಷ್ಠಿಸಿವೆ.‌ ಕಳೆದ ವಾರದ ಅವರ ಸಹೋದ್ಯೋಗಿಗಳ ಜೊತೆಗೆ ಮೈಸೂರಿಗೆ ಹೋಗಿದ್ದು, ಅಲ್ಲಿ ತಮ್ಮ ತಂದೆ ತಾಯಿಯವರ ಸಮಾಧಿ‌ ಬಳಿ ನಾನು ಕೂಡ ನಿಮ್ಮ ಜೊತೆ ಬರಬೇಕಿತ್ತು. ಎಂದು ತುಂಬಾ ಅತ್ತುಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳುತ್ತಾರೆ. ಇವರ ಪತಿ ಸಾಕಷ್ಟು ಸಾಲ‌ ಮಾಡಿದ್ದರು, ಆ ಸಾಲವನ್ನು ತೀರಿಸಲು ಅನೇಕ ಆಸ್ತಿಯನ್ನು ಮಾರಾಟ ಮಾಡಿದ್ದರು, ಇದರಲ್ಲಿ ತೋಟ ಜಮೀನು ಹಾಗು ಆಸ್ಪತ್ರೆ ಕೂಡ ಸೇರಿತ್ತು ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಘಟನೆ ನಡೆಯುವ ಹಿಂದಿನ ದಿನ ಅವರ ಪತಿಗೆ ಜ್ಯೂಸ್ ಕೊಟ್ಟು ತಮ್ಮ ಕೊಠಡಿ ಕಡೆಗೆ ಹೋಗಿದ್ದರು ಎಂದು ಮನೆಯಲ್ಲಿರುವವರು ಹೇಳುತ್ತಾರೆ, ಘಟನೆಯ ನಂತರ ಅವರ ತೆಲೆಗೆ ದೊಡ್ಡದಾದ ಗಾಯವಾಗಿದೆ. ಅವರಿಗೆ ಶೂಟ್ ಮಾಡಲಾಗಿದೆ. ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಅನುಮಾನ ಎಂದರೆ ಅವರ ಪತಿ ಡಾ. ರವಿ ಅವರು ಒಬ್ಬ ಮೂಳೆ ರೋಗ ತಜ್ಞರಾಗಿರುವ ಅವರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕಿತ್ತು. ಹಾಗೂ ಪೋಲಿಸರಿಗೆ ಮಾಹಿತಿ‌ ಕೊಡಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೆ ಮೂಳೆ ರೋಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಕೂಡ ಅನುಮಾನಕ್ಕೆ ಎಡೆ ಮಾಡಿದೆ. ಇದರ ಜೊತೆಗೆ ಅವರ ಬೆಡ್ ರೂಂ ನಲ್ಲಿ ಅವರ ಡೆತ್ ನೋಟ್ ಕೂಡ ಸಿಕ್ಕಿದೆ. ಆದರೆ ಅದರಲ್ಲಿರುವ ಮಾಹಿತಿ ಬಹಿರಂಗಗೊಂಡಿಲ್ಲ, ಇದೆಲ್ಲವೂ ಕೂಡ ಡಾ. ರೂಪಾ‌ರವಿ ಅವರ ಸಾವಿನ ಬಗ್ಗೆ ಅನುಮಾನಗಳನ್ನು ಹುಟ್ಟಿ ಹಾಕಿವೆ. ಇದೆಲ್ಲದರ ನಡುವೆ ಬಸವೇಶ್ವರ ಆಸ್ಪತ್ರೆಯ ವೈದ್ಯರುಗಳು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ ತಲೆಗೆ ತೀವ್ರತರವಾದ ಗಾಯವಾಗಿದ್ದು, ಅದನ್ನು ಪರೀಕ್ಷಿಸಿದಾಗ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲು ಹೋದಾಗ ತಲೆಯಲ್ಲಾದ ಗಾಯವನ್ನು ಪರೀಕ್ಷಿಸಿದ್ದು, ಅದರಲ್ಲಿ ಅನುಮಾನ ಮೂಡಿ ಬಂದಿದೆ. ಇದರಿಂದಾಗಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಇತ್ತ ಕಡೆ ಅವರ ಸಹೋದರರಿಗೆ ಸಿಕ್ಕ ಡೆತ್ ನೋಟ್ ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಇದೆಲ್ಲವನ್ನು ಇಟ್ಟುಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬೆಂಗಳೂರಿನಿಂದ ಎಫ್ ಎಸ್ ಎಲ್ ತಂಡವನ್ನು ಬರುವಂತೆ ಮನವಿ‌ ಮಾಡಿದ್ದು, ತಂಡವು ಚಿತ್ರದುರ್ಗಕ್ಕೆ ಆಗಮಿಸುತ್ತಿದೆ.  ಎಂದು ಎಸ್ಪಿ ಕೆ.‌ಪರುಶುರಾಮ್ ಹೇಳಿದ್ದಾರೆ. ಎಫ್ ಎಸ್‌ಎಲ್ ತಂಡ ಬಂದು‌‌ ಪರೀಕ್ಷಿಸಿ ಅವರ ಫಲಿತಾಂಶ ಬಂದ ಮೇಲೆ ನಾಳೆ ಮರಣೋತ್ತರ ಪರೀಕ್ಷೆ ನಡೆಸಿ ಇದು ಕೊಲೆಯೋ‌, ಆತ್ಮಹತ್ಯೆಯೋ ಅಥವ ಅಕಾಸ್ಮಾತಾಗಿ‌ ನಡೆದಿರುವ ಘಟನೆಯೋ ಎಂದು ತಿಳಿಸಬೇಕಿದೆ. ಅಲ್ಲಿಯವರೆಗೂ ಕೂಡ ಅನುಮಾನಗಳು ಅನುಮಾನಗಳಾಗಿಯೇ ಉಳಿದಿರುತ್ತವೆ.

 

 

Leave a Reply

Your email address will not be published. Required fields are marked *