ರಾಹುಲ್ ಗಾಂಧಿ‌ ಸನ್ನೆಯನ್ನು ಪರಿಪಾಲಿಸಿದ ಡಿಕೆಶಿ

ರಾಜಕೀಯ

ದಾವಣಗೆರೆ: 75ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಅಭಿಮಾನೋತ್ಸವದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಪಠಿಸಿ ಒಬ್ಬರೊನ್ನೊಬ್ಬರು ಆಲಿಂಗಿಸಿಕೊಂಡಿದ್ದರು. ಆ ಮೂಲಕ ನಮ್ಮ ಮಧ್ಯೆ ಯಾವುದೇ ಬಿರುಕು, ಭಿನ್ನಾಭಿಪ್ರಾಯ ಇಲ್ಲ ಅಂತಾ ಸ್ಪಷ್ಟಪಡಿಸಿದ್ದರು.
ಈ ನಡುವೆ ವೇದಿಕೆಯಲ್ಲೇ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡ ಡಿಕೆ ಶಿವಕುಮಾರ್, ಗೆಲುವಿನ ಚಿಹ್ನೆ ತೋರಿಸಿ ನಗೆ ಬೀರಿದ್ದರು. ಸದ್ಯ ವಿಡಿಯೋ ಸಖತ್ ಸೌಂಡ್​ ಮಾಡುತ್ತಿದ್ದು, ರಾಹುಲ್​ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಸನ್ನೆ ಮಾಡಿ ಅಪ್ಪಿಕೊಳ್ಳಲು ಸೂಚಿಸಿರೋ ದೃಶ್ಯಗಳು ಕಂಡು ಬಂದಿದೆ.

 

 

ಹೌದು, ರಾಹುಲ್ ಗಾಂಧಿ ಜೊತೆ ವೇದಿಕೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್​, ಸಾವಿರಾರು ಜನರ ಸಮ್ಮುಖದಲ್ಲಿ ತುಂಬು ಹೃದಯದಿಂದ ಸಿದ್ದರಾಮಯ್ಯರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಶಾಲು ಹೊದಿಸಿ ಸನ್ಮಾನ ಮಾಡಿದ ಶಿವಕುಮಾರ್ ಮುಂದೇ ಹೆಜ್ಜೆ ಹಾಕಿದರು. ಆದರೆ ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ರಾಹುಲ್ ಗಾಂಧಿ ಅಪ್ಪಿಕೊಳ್ಳುವಂತೆ ಸನ್ನೆ ಮಾಡಿದ್ರು. ಕೂಡಲೇ ಹಿಂದಕ್ಕೆ ಹೆಜ್ಜೆ ಹಾಕಿದ ಡಿಕೆ ಶಿವಕುಮಾರ್ ಸಿದ್ದರಾಮಯ್ಯರನ್ನ ಆತ್ಮೀಯವಾಗಿ ತಬ್ಬಿಕೊಂಡರು.

Leave a Reply

Your email address will not be published. Required fields are marked *