ಭ್ರಷ್ಟಾಚಾರದಲ್ಲಿ ಡಿಕೆಶಿ ಬ್ರಾಂಡ್ ಅಂಬಾಸಿಡರ್

ರಾಜ್ಯ

ಆರ್ ಎಸ್ ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ತಿರುಗೇಟು ನೀಡಿದ ಸಾರಿಗೆ ಸಚಿವ ಶ್ರೀರಾಮುಲು,ಆರ್ ಎಸ್ ಎಸ್ ದೇಶದವಿಚಾರದಲ್ಲಿ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಅವರು ಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ಮಾತನಾಡಿದರು
ದೇಶಕ್ಕೆ ಕುತ್ತು ಬಂದಾಗ ದೇಶ ಕಟ್ಟುವ ಕೆಲಸ ಮಾಡಿದೆ, ದೇಶಕ್ಕೆ ಅಪಾಯ ತಂದಿಲ್ಲ. ಪಿಎಫ್ ಐ ಸಂಘಟನೆಯ ಜೊತೆ ಆರ್ ಎಸ್ ಎಸ್ ಜೊತೆ ಹೋಲಿಕೆ ಮಾಡಲುಸಾಧ್ಯವಿಲ್ಲ.ದೇಶದ ಭವಿಷ್ಯದ ಸಲುವಾಗಿ ಆರ್ ಎಸ್ ಎಸ್ ಕೆಲಸ ಮಾಡಿದೆ, ದೇಶದ ಯುವಕರಿಗೆ ಸ್ಪೂರ್ತಿ , ಶಕ್ತಿ ನೀಡುವ ಕೆಲಸ ಮಾಡಿದೆ. ಪಿಎಪ್ ಐ ದೇಶದಲ್ಲಿಉಗ್ರಗಾಮಿಗಳನ್ನ ಹುಟ್ಟು ಹಾಕುವ ಕೆಲಸ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಆರ್ ಎಸ್ ಎಸ್ ಕುರಿತು ಮಾಜಿ ಪ್ರಧಾನಿ ನೆಹರೂ ಕೂಡಾ ಉಲ್ಲೇಖಿಸಿದ್ದಾರೆ. ಬ್ಯಾನರ್ಸ್, ಪ್ಲೇಕ್ಸ್ ಹರಿದು ಹಾಕಿರುವ ಪ್ರಕರಣಕ್ಕೆ ಸಂಬಂಧ ಮಾತನಾಡಿ,ನಮ್ಮ ಪಕ್ಷದ ನರನಾಡಿಯಲ್ಲೂ ಇಂಥದ್ದೇಲ್ಲಾ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಗೋಡೆ ಮೇಲೆ ಪೇ ಸಿಎಂ ಎಂದು ಹಚ್ಚುವುದು ಚೀಪ್ ಪಾಲಿಟಿಕ್ಸ್.ಈ ಡ್ರಾಮಾ ಬಿಟ್ಟು ತಾಖತ್ ಇದ್ದರೆ, ಸದನದಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು. ಆರ್ ಎಸ್ ಎಸ್ ಭಾರತದ ಮಣ್ಣನ ಕೂಸು ಆರ್ ಎಸ್ ಎಸ್ ಯಾರ ಪಾಪದ ಕೂಸಲ್ಲ ಎಂದರು.
ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್ ಆಹ್ವಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಶಾಸಕ ನಾಗೇಂದ್ರಗೆ ಟಾಂಗ್ ನೀಡಿದ ಸಚಿವ ಶ್ರೀರಾಮುಲು.ದಾರಿಯಲ್ಲಿ ಹೋಗುವವರಿಗೆ ನಾನು ಉತ್ತರ ಕೊಡಲ್ಲ ಎಂದರು. ಇನ್ನು ಬಿಬಿಎಂಪಿ ಎಲೆಕ್ಷನ್ ಹೈಕೋರ್ಟ್ ಆದೇಶದಂತೆ ನಮ್ಮ ಸರ್ಕಾರ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸಿದ್ದತೆ ಮಾಡಿದ್ದೇವೆ, ನಾವು ಚುನಾವಣೆಗೆ ತಯಾರು ಇದ್ದೇವೆ. ಸಿಎಂ ಇದಕ್ಕಿಂತ ಮುನ್ನವೇ ಸೂಚನೆ ಅಧಿಕಾರಿಗಳಿಗೆ ನೀಡಿದ್ದರು. ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಲೆಕ್ಷನ್ ಎದುರಿಸಲು ಸಿದ್ದವಾಗಿದೆ. ಭಾರತ್ ಜೋಡೋ ಭಾರತಕ್ಕೆಎಂಟ್ರಿಯಾಗಿದ್ದು,ರಾಹುಲ್ ಗಾಂಧಿ ಇಂದು ರಾಜ್ಯಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ- ಡಿಕೆಶಿ ಅವರನ್ನ ಪಕ್ಕದಲ್ಲಿ ಇಟ್ಟುಕೊಂಡುಭ್ರಷ್ಟಾಚಾರ ಉಲ್ಲೇಖಮಾಡುತ್ತಿದ್ದಾರೆ.ಸಿದ್ದರಾಮಯ್ಯ ಸಿಎಂ ಇದ್ದಾಗಲೂ ಹಲವು ಹಗರಣಗಳುನಡೆದಿವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅವರ ಕುಟುಂಬಸ್ಥರುಭಾಗಿಯಾಗಿದ್ದರು.ಶಿಕ್ಷಕರನೇಮಕಾತಿ ವಿಚಾರದಲ್ಲಿ ಕೂಡಾ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಿದೆ ಎಂದರು.

 

 

ಭ್ರಷ್ಟಾಚಾರದ ವಿಷಯದಲ್ಲಿ ಡಿಕೆಶಿ ಬ್ರಾಂಡ್ ಅಂಬಾಸಿಡರ್ ಇದ್ದ ಹಾಗೆ: ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಪಕ್ಷವು ದೇಶ ಮುಳುಗಿಸಿದ ಪಕ್ಷ ಕಾಂಗ್ರೆಸ್ ವಾಗಿದೆ,ಬೇಲ್ ಮೇಲೆ ಹಲವು ಕಾಂಗ್ರೆಸ್ ನಾಯಕರು ಇದ್ದಾರೆ.
ಜಾಮೀನು ಪಡೆದು ಹೊರಗಿರುವ ವ್ಯಕ್ತಿಗಳು ನಮ್ಮ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ.ಪೇ ಸಿಎಂ ಎಂದು ಪಬ್ಲಿಸಿಟಿಯನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ,ಡಿಕೆಶಿ ಕೂಡಾ ಬೇಲ್ ಮೇಲೆ ಇದ್ದಾರೆ.ಇಷ್ಠೆಲ್ಲಾ ಇದ್ದರೂ ಕೂಡಾ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.  ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಲೋಕಾಯುಕ್ತಕ್ಕೆ ತನಿಖೆ ನೀಡುವ ಹಂತದಲ್ಲಿ ಸರ್ಕಾರ ಇದೆ. ಸಿದ್ದರಾಮಯ್ಯ ಕೂಡಾ ಅನೇಕ ಹಗರಣಗಳನ್ನ ಮಾಡಿ ಮುಚ್ಚಿ ಹಾಕಿದ್ದಾರೆ.ನಮ್ಮ ಮೇಲೆ ಸತ್ಯವಿಲ್ಲದಆರೋಪಗಳನ್ನ ಮಾಡುತ್ತಿದ್ದಾರೆ. ಸದನದಲ್ಲಿ ಚರ್ಚೆ ಮಾಡಲು ತಾಖತ್ ಇಲ್ಲದೆ ಓಡಿ ಹೋದವರು ಕಾಂಗ್ರೇಸ್ಸಿಗರು. ಹೊರಗಡೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.
ಸಿದ್ದರಾಮಯ್ಯ ಅನೇಕ ಹಗರಣ ಮಾಡಿಕೊಂಡು ಸತ್ಯವಂತರಂತೆಮಾತನಾಡುತ್ತಿದ್ದಾರೆ ಎಂದು‌ ಅವರು ಕಿಡಿ ಕಾರಿದರು.

Leave a Reply

Your email address will not be published. Required fields are marked *