ಕೋಟೆ ನಾಡಿನಲ್ಲಿ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್

ರಾಜ್ಯ

ಎಸ್ಸಿ ಎಸ್ಟಿ ಜನಾಂಗದ ಸಂಘಟನೆಯಲ್ಲಿ ಒಗ್ಗಟ್ಟು ಇಲ್ಲದೆ ಹೋದ್ರೆ ನಿಮ್ಮನ್ನು ಈ ದೇಶದಲ್ಲಿ ಯಾರು ಕೇಳೋಲ್ಲ, ಬ್ರಿಟಿಷ್ ಆಡಳಿತದ ವ್ಯವಸ್ಥೆಯಲ್ಲಿ ಆಳುವಂತ ರಾಜಕೀಯ ವ್ಯಕ್ತಿಗಳಿದ್ದಾರೆ ಎಂದು ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

 

 

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಆವರಣದಲ್ಲಿ ಆಯೋಜಿಸಿದ ಎಸ್ಸಿ,ಎಸ್ಟಿ,ಐಕ್ಯತಾ ಸಮಾವೇಶವನ್ನು ದೀಪ ಬೆಳೆಗಿಸುವುದರ ಮೂಲಕ ಚಾಲನೆ ನೀಡಿ ಅವರು ಮತಾನಾಡಿದರು

ಪ್ರಜಾಪ್ರಭುತ್ವದ ದೇಶದ ಸಂವಿಧಾನದವನ್ನು ಉಳಿಸಬೇಕು ಸಂವಿಧಾನದವನ್ನು ದಿಕ್ಕರಿಸಿ ರಾಜಕೀಯ ಮಾಡುತ್ತೀರುವ ರಾಜಕೀಯ ಇದೆ. ರಾಹುಲ್ ಗಾಂಧಿಯವರ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಲಕ್ಷಾಂತರ ಜನರು ಅವರ ಜೊತೆಗೆ ಇದ್ದರು. ನಾವು ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕಿದೆ. ದೇಶದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ ಅದ್ರೆ ಈ ಹುದ್ದೆಗಳನ್ನು ಬಡವರಿಗೆ ನೀಡಿದರೆ, ಅವರು ಶ್ರೀಮಂತರಾಗುತ್ತಾರೆ ಅನ್ನುವ ನಿಟ್ಟಿನಲ್ಲಿ ಹುದ್ದೆಗಳು ನೀಡುತ್ತಿಲ್ಲ .ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಅಲ್ಪಸಂಖ್ಯಾತ ರ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾರ್ಥಿವೇತನ ನೀಡುತ್ತಿಲ್ಲ, ಇವುಗಳ ವಿರುದ್ದವಾಗಿ ಧ್ವನಿ ಎತ್ತಬೇಕು. ಸಂವಿಧಾನದ ಮೂಲ ಭೂತ ಹಕ್ಕುಗಳ ಹಾಗೂ ದೇಶದ ರಕ್ಷಣೆ ಮಾಡಬೇಕಾಗಿದೆ.ಬಿಜೆಪಿ ಯಲ್ಲಿ ದಲಿತರಿಗೆ ವಾಕ್ ಸ್ವಾತಂತ್ರ್ಯ ಇಲ್ಲ,ಹಾಗಾಗಿ ಈ ಮಣ್ಣಿನ ಮಕ್ಕಳನ್ನ ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಸರ್ಕಾರ ರಚಿಸಬೇಕು ಎಂದರು.
ಕಾಂಗ್ರೆಸ್ ನವರು ಸ್ವಾತಂತ್ರ್ಯಗಾಗಿ ಪ್ರಾಣ ಕೊಟ್ಟಿದ್ದಾರೆ ಅದ್ರೆ ಬಿಜೆಪಿ ಯವರು ಕೆಲಸ ಮಾಡದೆ ಸುಮ್ಮೆ ಇದ್ದಾರೆ,
ಬಿಜೆಪಿ ಯಲ್ಲಿ ಜಾತೀಯತೆ ಇದೆ.ಬಿಜೆಪಿಯು ಹಿಮಾಲಯ ಪ್ರದೇಶಲ್ಲಿ ಸೋತಿದೆ,ಕಾಂಗ್ರೆಸ್ ಗೆದ್ದು ಅಲ್ಲಿ ಸರ್ಕಾರ ರಚನೆಯಾಗಿದೆ ಅದರಂತೆ ಕರ್ನಾಟಕದಲ್ಲಿ ಕೂಡ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕು ಎಂದರು.ಮಾಜಿ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮಾತಾನಾಡಿ ಎಲ್ಲಾ ಶೋಷಿತ ಎಲ್ಲಾರಿಗೂ ನ್ಯಾಯ ಕೊಡಿಸುವ ಬದ್ದತೆ ಕಾಂಗ್ರೇಸ್ ಪಕ್ಷಕ್ಕೆ ಇದೆ. ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯ ಮತ್ತು ಬದ್ದತೆ ಹಾಗೂ ಸಂವಿಧಾನದ ಸಮಾನತೆಯಲ್ಲಿ ನಂಬಿಕೆ ಇಲ್ಲ.ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತ್ ಕುಮಾರ್ ಹೆಗ್ಗಡೆ ಸಂವಿಧಾನದ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು, ಇದರ‌ ವಿರುದ್ಧ ಅಮಿತ್ ಷಾ, ನರೇಂದ್ರ ಮೋದಿಯವರು ಅನಂತ್ ಕುಮಾರ್ ಹೆಗ್ಗಡೆ ಯವರಿಗೆ ನೋಟಿಸ್ ಕೂಡ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷವು ಮಹಿಳೆಯರು ಕೃಷಿಕರ ಬಗ್ಗೆ ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ.
ಮೀಸಲಾತಿ ಭಿಕ್ಷೆ ಅಲ್ಲ ಅದು ದಲಿತರ ಹಕ್ಕು, ಈ ದೇಶದಲ್ಲಿ ಶೋಷಿತರಿಗೆ ಎಲ್ಲಿಯ ವರೆಗೂ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಹೇಳಿದ್ದಾರೆ.ಎಸ್ಸಿ ಎಸ್ಟಿ ಜನಾಂಗದವರಿಗೆ ಮೀಸಲಾತಿ ಹೆಚ್ಚು ಮಾಡಲು ನಾಗ ಮೋಹನ್ ದಾಸ್ ಆಯೋಗವನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಅಂದರೆ ಬಿಜೆಪಿಯು ನಾವು ಮಾಡಿದ್ರು ಎಂದು ಬೀಗುತ್ತಿದ್ದಾರೆ.ಬಿಜೆಪಿಯಲ್ಲಿ ಇರುವ ಎಸ್ಸಿ ಎಸ್ಟಿ ಜನಾಂಗದ ವ್ಯಕ್ತಿಗಳು ಮೀಸಲಾತಿಯ ವಿಚಾರದ ಬಗ್ಗೆ ಬಾಯಿ ಬಿಡಲಿಲ್ಲ, ಜನವರಿ 31 ರ ಒಳಗೆ ಕೇಂದ್ರ ಸರ್ಕಾರ ಮೀಸಲಾತಿಯನ್ನು ನೀಡಬೇಕು ಇಲ್ಲವಾದ್ರೆ ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಚಿವರಾದ ,
ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ , ಪ್ರಿಯಾಂಕ್ ಖರ್ಗೆ,ಎಚ್.ಕೆ ಪಾಟೀಲ್,ಆರ್.ವಿ ದೇಶ್ ಪಾಂಡೆ,ಎಂ.ಬಿ ಪಾಟೀಲ್,ರಾಮಲಿಂಗ ರೆಡ್ಡಿ ,ಶಿವರಾಜ್ ತಂಗಡಗಿ, ಬಿ.ಕೆ ಹರಿಪ್ರಸಾದ್,ಮಹಾದೇವಪ್ಪ,ಡಿ.ಸುಧಾಕರ್ ,ಶಾಸಕರಾದ ರಘುಮೂರ್ತಿ, ಯತೀಂದ್ರ ಮುಖಂಡರಾದ ಟಿ.ಬಿ ಜಯಚಂದ್ರ,ತುಕಾರಾಂ,ಉಗ್ರಪ್ಪ, ಧರ್ಮಸೇನ, ಬಿ.ಎನ್ ಚಂದ್ರಪ್ಪ, ಮೋಟಮ್ಮ ,ರಘು ಆಚಾರ್,ಎಸ್.ಕೆ ಬಸವರಾಜನ್, ಹನುಮಲಿ ಷಣ್ಮುಖಪ್ಪ , ಜಿ.ಎಸ್ ಮಂಜುನಾಥ್ ,ತಾಜ್ ಪೀರ್, ಸಂಪತ್ ಕುಮಾರ್,ಗೀತಾ ನಂದಿನಿ ಗೌಡ, ಎನ್.ಡಿ ಕುಮಾರ್ ಇತರರು ಇದ್ದರು.

Leave a Reply

Your email address will not be published. Required fields are marked *