ಕೃಷ್ಣಯಾದವಾನಂದ ಶ್ರೀಗಳು ಮೀಸಲಾತಿಗೆ ಬದ್ಧರಾಗಿ, ಇಲ್ಲ ಪೀಠತ್ಯಾಗಕ್ಕೆ ಸಿದ್ದರಾಗಿ ..!

ಜಿಲ್ಲಾ ಸುದ್ದಿ

ಕೃಷ್ಣಯಾದವಾನಂದ ಶ್ರೀಗಳು ಮೀಸಲಾತಿಗೆ ಬದ್ಧರಾಗಿ, ಇಲ್ಲ ಪೀಠತ್ಯಾಗಕ್ಕೆ ಸಿದ್ದರಾಗಿ ..

ಚಿತ್ರದುರ್ಗ : ದಶಕಗಳಿಂದ ಎಸ್ಟಿ ಮೀಸಲಾತಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕಾಡುಗೊಲ್ಲರ ಹೋರಾಟದ ನೇತೃತ್ವವಹಿಸಿಲಿ, ಇಲ್ಲವಾದರೆ ಮಠದ ಪೀಠತ್ಯಾಗ ಮಾಡಲು ಸಿದ್ಧರಾಗಿ ಎಂದು ಚಿತ್ರದುರ್ಗ ಗೊಲ್ಲಗಿರಿ ಮಠದ ಯಾದವಾನಂದಶ್ರೀಗಳ ವಿರುದ್ಧ ಕಾಡುಗೊಲ್ಲ ಮುಖಂಡರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ 30 ಕ್ಕೂ ಹೆಚ್ಚು ಕಾಡುಗೊಲ್ಲ ಮುಖಂಡರು ಸಭೆ ನಡೆಸಿ, ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಾಡುಗೊಲ್ಲ ಒಳಪಂಗಡ ಮೀಸಲಾತಿ ಬೆಂಬಲವಿಲ್ಲ ಎಂಬ ಶ್ರೀಗಳ ಹೇಳಿಕೆಯನ್ನು ಖಂಡಿಸಿದರು.

 

 

ಕಾಡುಗೊಲ್ಲ ಸಮಾಜ ಒಂದು ಉಪಜಾತಿಯಲ್ಲ, ಪ್ರತ್ಯೇಕ ಅಸ್ಮಿತೆ ಹೊಂದಿರುವ ಜಾತಿಯಾಗಿದ್ದು, ನಾವು ಒಳಮೀಸಲಾತಿ ಕೇಳುತ್ತಿಲ್ಲ, ಕಾಡುಗೊಲ್ಲರೇ ಬೇರೆ, ಊರುಗೊಲ್ಲರೇ ಬೇರೆಯಾಗಿದ್ದು ನಮ್ಮ ಆಚರಣೆಗೂ ಅವರ ಆಚರಣೆಗಳಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಸ್ವಾಮೀಜಿಯವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮಧ್ಯ ಕರ್ನಾಟಕದಲ್ಲಿ ಕಾಡುಗೊಲ್ಲರು ಹೆಚ್ಚಾಗಿ ಇರುವುದರಿಂದ ಮುರುಘಾ ಶರಣರು ಜಾಗವನ್ನು ನೀಡಿ ಮಠ ಸ್ಥಾಪನೆಗೆ ಕೈಜೋಡಿಸಿದರು. ಕಾಡುಗೊಲ್ಲರು ದೇಣಿಗೆ ಸಂಗ್ರಹಿಸಿ ಯಾದವಾನಂದ ಸ್ವಾಮೀಜಿಗೆ ಪಟ್ಟವನ್ನು ಕಟ್ಟಲಾಯಿತು. ಎ. ಕೃಷ್ಣಪ್ಪ ಆಗಲಿ ಅಥವಾ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಆಗಲಿ ನಿಮ್ಮನ್ನು ಆಯ್ಕಮಾಡಿಲ್ಲ. ತಾವುಗಳು ಕಾಡುಗೊಲ್ಲ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ನೀವುಗಳು ಕಾಡುಗೊಲ್ಲ ಸಮಾಜ ಶ್ರೀಗಳು, ಮಾಗಡಿಯಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಹೇಳಿಕೆ ನೀಡಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಆ ಹೇಳಿಕೆಯನ್ನು ಹಿಂಪಡೆದು, ಇಂದಿನಿಂದಲೇ ಬೆಂಗಳೂರು ಹಾಗೂ ದೆಹಲಿ ಕಾಡುಗೊಲ್ಲ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಇಲ್ಲದಿದ್ದರೆ ನೀವು ಪೀಠತ್ಯಾಗ ಮಾಡಲು ಸಿದ್ಧರಾಗಿ, ಮಠದ ಪೀಠಾಧಿಪತಿಯಾಗಲು ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಶ್ರೀಗಳನ್ನು ಒತ್ತಾಯಿಸಿದರು.

ಯಾದವರಿಗೂ ಹಾಗೂ ಕಾಡುಗೊಲ್ಲರಿಗೂ ಸಂಬಂಧವಿಲ್ಲ. ಬುಡಕಟ್ಟು ಸಮಾಜವಾದ ಕಾಡುಗೊಲ್ಲರ ಬಗ್ಗೆ
ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ, ಶಾಸಕರಾದ ಡಾ. ರಂಗನಾಥ್, ಶಿವಲಿಂಗೇಗೌಡ ಅವರು ಕಾಡುಗೊಲ್ಲರ ಬಗ್ಗೆ ಸಾಕಷ್ಟು ವಿಚಾರ ತಿಳಿದು ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಪ್ರಸ್ತಾಪ ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ಸಮುದಾಯದ ಸ್ವಾಮೀಜಿಯವರು ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಜೊತೆಗೆ ಕಾಡುಗೊಲ್ಲ ಎಂಬ ಪದ ಪೀಡೆ ಎಂದಿರುವುದು ಮನಸಿಗೆ ನೋವುಂಟು ಮಾಡಿದೆ ಎಂದರು. ಕಾಡುಗೊಲ್ಲ ಪೀಡೆ ಪದವಾದರೆ, ನಮ್ಮ ಸಹೋದರಿ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ನೀವುಗಳು ನಿಮ್ಮ ತಾಯಿ ಪೀಡೆಯಾಗಿದ್ದಿರಾ ಎಂದು ಶ್ರೀಗಳಿಗೆ ಪ್ರಶ್ನೆ ಹಾಕಿದರು. ಇನ್ನಾದರೂ ದಯಮಾಡಿ ಶ್ರೀಗಳು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತಾಡಬಾರದು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ಪ್ರಯತ್ನದಿಂದ ನಮಗೆ ಮೀಸಲಾತಿ ದೊರೆಯುತ್ತದೆ. ಸ್ವಾಮೀಜಿಯವರು ಆಡಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್, ಮಾಜಿ ಜಿಪಂ ಸದಸ್ಯ ಸಿಬಿ. ಪಾಪಣ್ಣ, ಮುಖಂಡರಾದ ಪಾತಣ್ಣ, ಕೂಡ್ಲಹಳ್ಳಿ ಚಿದಾನಂದ್, ಎಸ್. ಆರ್. ತಿಪ್ಪೇಸ್ವಾಮಿ, ಕರಿಯಣ್ಣ, ತಮ್ಮಣ್ಣ, ಮಹಾಲಿಂಗಪ್ಪ, ಮೂಡಲಗಿರಿಯಪ್ಪ, ಎಜಿ. ತಿಮ್ಮಯ್ಯ, ನಿವೃತ್ತ ಶಿಕ್ಷಕ ನಾಗಪ್ಪ, ಚಿತ್ರಜಿತ್ ಯಾದವ್, ಬಿಡಿ ಬಸವರಾಜ್, ಪಿಆರ್. ದಾಸ್, ಅಧ್ಯಕ್ಷ ರಂಗಪ್ಪ, ಸಂಪತ್, ಕೃಷ್ಣ ಪೂಜಾರ್, ಗೋಪಿ ಯಾದವ್, ಮಂಜುನಾಥ್, ವಿದ್ಯಾಧರ, ತಿಮ್ಮಯ್ಯ, ಮಂಜುನಾಥ್, ಚಂದ್ರಹಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *