ಪೊಲೀಸ್ ಸರ್ಪಗಾವಲಿನಲ್ಲಿ ಒತ್ತುವರಿ‌ ತೆರವುಗೊಳಿಸಿದ ತಹಶೀಲ್ದಾರ್

ಜಿಲ್ಲಾ ಸುದ್ದಿ

ಸರ್ಕಾರಿ ಜಮೀನಿನ ಒತ್ತುವರಿ ತೆರವು ಮತ್ತು ಸರ್ಕಾರಿ ಜಮೀನಿನ ಅಳತೆಗೆ ಯಾರೇ ಅಡ್ಡಿ ಪಡಿಸಿದರೆ ಕಾನೂನು ಕ್ರಮ ಕೈ ಗೊಳ್ಳಲಾಗುವುದೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಎಚ್ಚರಿಕೆ ನೀಡಿದರು.
ಅವರು ತುಳುಕು ಹೋಬಳಿ ಓಬನಹಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ ಆರು ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ನೀಡಿದ ಪೈಪ್ ಲೈನ್ ಮತ್ತು ದಾರಿಗೆ ಅಡ್ಡಿಪಡಿಸಿದ್ದು ಇದನ್ನು ಅಳತೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು,ಈ ಹಿನ್ನೆಲೆಯಲ್ಲಿ ಇಂದು ಸರ್ವೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ‌ ನೀಡಿದ್ದರು.
ತಹಶೀಲ್ದಾರ್ ಪೊಲೀಸ್ ಸರ್ಪಗಾವಲಿನಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಅಳತೆ ಕಾರ್ಯವನ್ನು ಮಾಡಲು ಮುಂದಾದಾಗ ಕೆಲವು ಒತ್ತುವರಿದಾರರು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದರು. 50 ಜನ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಡ್ಡಿಪಡಿಸುವುದವರನ್ನು ವಶಕ್ಕೆ ಪಡೆದು ಒತ್ತುರಿಯಾಗಿರುವ 6 ಎಕರೆ 12 ಗುಂಟೆ ಸರ್ಕಾರಿ ಜಮೀನನ್ನು ಸಂಪೂರ್ಣವಾಗಿ ಸರ್ವೇ ಮಾಡಿಸಿ ಸರ್ಕಾರಿ ಸ್ವಾಮ್ಯದ ಗೋಮಾಳ ಕೆರೆ ಕುಂಟೆ ರಾಜಕಾಲುವೆ ಇವುಗಳನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡಕೂಡದು ಮುಂದಿನ ದಿನಗಳಲ್ಲಿ ಉದ್ದೇಶಿತ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೈಪ್ ಲೈನ್ ದಾರಿ ಮುಂತಾದ ಬಳಕೆಗೆ ಯಾರೂ ಕೂಡ ಅಡ್ಡಿ ಮಾಡಕೂಡದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಆರಕ್ಷಕರು ನಿರೀಕ್ಷಕ ಸಮೀವುಲ್ಲಾ ಪೊಲೀಸ್ ಉಪನಿರೀಕ್ಷಕ ಸತೀಶ್ ನಾಯ್ಕ ಬಸವರಾಜು ರಾಜಸ್ವ ನಿ ರಿಕ್ಷಾದ ತಿಪ್ಪೇಸ್ವಾಮಿ ಸರ್ವೆಯರ್ ಪ್ರಸನ್ನ ಸರ್ವೇ ಸೂಪರ್ ಡೆಂಟ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *