ಸರ್ಕಾರಿ ಕಚೇರಿ ಲಂಚ ಮುಕ್ತಕ್ಕೆ ಮಹ್ವತದ ಆದೇಶ

ರಾಜ್ಯ

BREAKING NEWS : ಸರ್ಕಾರದಿಂದ ಮಹತ್ವದ ಆದೇಶ : ಸರ್ಕಾರಿ ಕಚೇರಿ ಲಂಚ ಮುಕ್ತಕ್ಕೆ ಖಡಕ್ ಕ್ರಮ

ಬೆಂಗಳೂರು: ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಿಂದ ಮಹತ್ವದ ಆದೇಶ ಮಾಡಲಾಗಿದೆ.

 

 

ಅಕ್ಟೋಬರ್ 2ರಿಂದ 20ರವರೆಗೆ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ಹಮ್ಮಿಕೊಂಡಿರುವ ರಾಜ್ಯ ಸರ್ಕಾರ ತನ್ನ ಮೇಲಿನ ಆರೋಪಮುಕ್ತವಾಗಲು ಹೊರಟಿದೆ. ಈ ಅಭಿಯಾನ ವರ್ಷವಿಡಿ ನಡೆಯಲಿ ಎಂಬ ಬಗ್ಗೆ ಜನ ಆಗ್ರಹ ವ್ಯಕ್ತವಾಗುತ್ತಿದೆ.

ಎಲ್ಲಾ ಕಡೆ ಲಂಚದ ಅವತಾರ

ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಲಂಚದ ಅವತಾರ ಹೆಚ್ಚಾಗಿದೆ. ಯಾವುದೇ ಒಂದು ಕೆಲಸ ಆಗಲು ಲಂಚ ಕೊಡಲೇಬೇಕು ಎಂಬ ಸ್ಥಿತಿ ಇದೆ. ಗುತ್ತಿಗೆ, ಸರ್ಕಾರಿ ಪ್ರಾಜೆಕ್ಟ್ ಅಲ್ಲೂ ಕಮಿಷನ್ ದಂಧೆ ಹೆಚ್ಚಾಗಿರುವ ಹಿನ್ನೆಲೆ ಸರ್ಕಾರ ಆದೇಶ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *