ಭಾರತ್ ಜೋಡೋ‌ ಕಾರ್ಯಕ್ರಮವು ದೇಶವನ್ನು ಒಗ್ಗೂಡಿಸುವ ಕಾರ್ಯಕ್ರಮ

ರಾಜಕೀಯ

ಭಾರತ್ ಜೋಡೋ‌ ಕಾರ್ಯಕ್ರಮವು ದೇಶವನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ‌ ಹೇಳಿದರು.
ಅವರು ಸೋಮವಾರ ಶಾಸಕರ ಭವನದಲ್ಲಿ ಭಾರತ್ ಜೋಡೋ‌ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ‌ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ‌ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಭಾಗವಹಿಸಲಿದ್ದಾರೆ. ಎಐಸಿಸಿ ಉಪಾಧ್ಯಕ್ಷರು ವಾಸ್ತವ್ಯ ಮಾಡುವ ಸಂಭವವಿದ್ದು, ಮುಂದಿನ‌ ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು ಎಂದು‌ ಹೇಳಿದರು. ಇದೇ ಯದಲ್ಲಿ ಮಾತನಾಡಿದ ಮಾಜಿ ಸಂಸದ ಚಂದ್ರಪ್ಪ, ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ‌ಕಾರ್ಯಕ್ರಮವು ದೇಶದಲ್ಲಿ‌ಹೊಸ ಆಯಾಮವನ್ನು ಸೃಷ್ಠಿ‌ಮಾಡಲಿದೆ ಎಂದರು. ಬಿಜೆಪಿ ಪಕ್ಷದ ದುರಾಡಳಿತ, ಭ್ರಷ್ಠಾಚಾರದಿಂದ ದೇಶದ ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಮನಸ್ಸು ಮತದಾರರು ಮಾಡಿದ್ದು, ಇದಕ್ಕೆ ಪೂರಕವಾಗಿ ಭಾರತ್ ಜೋಡೋ‌ ಕಾರ್ಯಕ್ರಮ ದೇಶದ ಹಿತಕ್ಕಾಗಿ ಮಾಡಲಾಗುತ್ತಿದೆ ಎಂದರು.
ಈ ಸಮಯದಲ್ಲಿ ಜಯಸಿಂಹ, ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ಮಾಜಿ ಶಾಸಕರುಗಳಾದ ರಾಜೇಶ್, ತಿಪ್ಪೇಸ್ವಾಮಿ, ಶಿವಮೂರ್ತಿ‌ನಾಯ್ಕ್, ಮತ್ತು ಜಿಲ್ಲಾಧ್ಯಕ್ಷ ತಾಜ್ ಪೀರ್, ಜಿಲ್ಲಾ ಹಿಂದುಳಿದ ವರ್ಗಗಳ‌ ಅಧ್ಯಕ್ಷ ಎನ್ ಡಿ‌ ಕುಮಾರ್, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಶಿವುಯಾದವ್, ಮೈಲಾರಪ್ಪ, ಯೋಗೇಶ್ ಬಾಬು, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತಿಪ್ಪೇಸ್ವಾಮಿ,ಪರುಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ಎನ್ ಕಿರಣ್ ಶಂಕರ್,ನಗರಸಭೆ ಸದಸ್ಯರುಗಳಾದ ವೀರಭದ್ರಪ್ಪ, ರಾಘವೇಂದ್ರ, ಜಿಪಂ ಮಾಜಿ‌ ಸದಸ್ಯ ಪ್ರಕಾಶ್ ಮೂರ್ತಿ, ವಿಶ್ವ ಕರ್ಮ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಅನ್ವರ್ ಮಾಸ್ಟರ್, ಅಂಜನಪ್ಪ, ಖಾದರ್, ಪ್ರಕಾಶ್, ಜಿಲ್ಲಾ ಕಿಸಾನ್ ಜಿಲ್ಲಾಧ್ಯಕ್ಷ ನಾಗರಾಜ್, ದೊಡ್ಡ ರಂಗಪ್ಪ ಇನ್ನಿತರರು ಇದ್ದರು,

 

 

Leave a Reply

Your email address will not be published. Required fields are marked *