ನಾವಿದ್ದೇವೆ ಧೈರ್ಯಗೆಡಬೇಡಿ ಬರವಣಿಗೆ ಮುಂದುವರೆಸಿ

ಜಿಲ್ಲಾ ಸುದ್ದಿ

ಚಿತ್ರದುರ್ಗದ ಖ್ಯಾತ ಸಾಹಿತಿ ಬಿಎಲ್ ವೇಣು ಅವರಿಗೆ ನಿರಂತರ ಬೆದರಿಕೆ ಪತ್ರ ಬರುತ್ತಿರುವ ಹಿನ್ನೆಲೆಯಲ್ಲಿ ನೈತಿಕ ಬೆಂಬಲ ನೀಡಲು ಮಾಜಿ ಸಚಿವ ‌ಹೆಚ್. ಆಂಜನೇಯ ಹಾಗೂ ಚಳ್ಳಕೆರೆ ಶಾಸಕ ರಘು ಮೂರ್ತಿ ಅವರುಗಳು ಮನೆಗೆ ತೆರಳಿ ಧೈರ್ಯ ಹೇಳುವ ಮೂಲಕ ಸಾಂತ್ವಾನ ಹೇಳಿದರು.

 

 


ಯಾವುದೇ ಕಾರಣಕ್ಕೂ ಎದೆಗುಂದದೆ ಬರವಣಿಗೆಯನ್ನು ಮುಂದುವರೆಸಿ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯವನ್ನು ಹೇಳಿದರು. ಇದರ ಜೊತೆಯಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ ಎಸ್ಪಿ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ವೇಣು ಅವರ ಪ್ರಕರಣದ ಬಗ್ಗೆ ವಿಚಾರಿಸಿದರು. ಎಸ್ಪಿ ಅವರು ಇದಕ್ಕೆ ಉತ್ತರಿಸಿ ಈಗಾಗಲೇ ಎಲ್ಲ ರೀತಿಯ ತನಿಖೆಗಳನ್ನು ನಡೆಸಲಾಗುತ್ತಿದೆ.‌ ಎರಡು ಪತ್ರಗಳು ಚಿಕ್ಕಮಗಳೂರು ತಾಲೂಕಿನ ಅಜ್ಜಂಪುರ ಹಾಗೂ ದಾವಣಗೆರೆ ಮತ್ತು ಮೂರನೇ ಪತ್ರವು ಶಿವಮೊಗ್ಗದಿಂದ ಬಂದಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ದೂರವಾಣಿ ಕರೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಎಂದರು, ಇದಕ್ಕೆ ಶೀಘ್ರವಾಗಿ ಕ್ರಮ ತೆಗೆದುಕೊಂಡು ಬಂಧಿಸುವಂತೆ ರಘು ಮೂರ್ತಿ ಹೇಳಿದರು. ನಂತರ ಬಿ ಎಲ್ ವೇಣು ಅವರಿಗೆ ಧೈರ್ಯದಿಂದ ಇರಬೇಕು, ಹೊರಗೆ ಹೋಗುವಾಗ ಹೇಳಿ ಹೋಗಬೇಕು, ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *