ಸರ್ಕಾರಕ್ಕೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ‌ನೀಡಿದ ಎಚ್ಚರಿಕೆ ಏನು?

ರಾಜ್ಯ

ಇಳಕಲ್: ರಾಜ್ಯದಲ್ಲಿ ಯಾವುದೇ ಸಕಾ೯ರವಿರಲಿ ಯಾರೇ ಮುಖ್ಯಮಂತ್ರಿಗಳಿರಲಿ ನಮಗೆ ನ್ಯಾಯಬದ್ಧವಾದ ಮೀಸಲಾತಿ ಹೆಚ್ಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಕಾ೯ರಕ್ಕೆ ಎಚ್ಚರಿಕೆ ನೀಡಿದರು.

 

 

What swamiji  gave to government
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ
ಮೂರನೇ ವಷ೯ದ ವಾಲ್ಮೀಕಿ ಜಾತ್ರೆ ಹಾಗೂ ಜನಜಾಗೃತಿ ಸಭೆ ಯಲ್ಲಿ‌ಮಾತನಾಡಿ,ಶ್ರೀ ಮಹಷಿ೯ ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಸಮುದಾಯದ ಜನರಲ್ಲಿ ಸ್ವಾಭಿಮಾನವನ್ನು ಹುಟ್ಟುಹಾಕುವ ಒಂದು ವೇದಿಕೆ. ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಚಿವ ಸಂಪುಟ  ಉಪಸಮಿತಿಯು  ಶೀಘ್ರವೇ ಜಾರಿಗೆ ತರಬೇಕು. ಮೀಸಲಾತಿ ವಿಚಾರದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಸ್ವಾಭಿಮಾನಿ ಸಿಂಹದ ಮರಿಗಳಾಗಿ ಘಜ೯ನೆಮಾಡಬೇಕಾಗಿದೆ ಎಂದರು. ಅಂದು ಸಂವಿಧಾನಕ್ಕೆ ಗೌರವಿಸಿ ನಮ್ಮ ಕುಲಕಸುಬನ್ನೇ ಬಿಟ್ಟೆವು ಆದರೆ ಅದೇ ಸಂವಿಧಾನದಡಿಯಲ್ಲಿ ನಮಗೆ ಸಿಗಬೇಕಾದ ಮೀಸಲಾತಿ ಹಚ್ಚಿಸದಿದ್ದರೆ 1857 ರ ದಂಗೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕಾಗುತ್ತದೆ. ನಂತರ ಮೂರನೇ ವರ್ಷದ ಜಾತ್ರೆಯ ವಾಲ್ಮೀಕಿ ಸೇವಾ ಸಮಿತಿ,[VSS] ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಜಾತ್ರೆ ವಾಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಇಳಕಲ್ ತಾಲ್ಲೂಕಿನ ಸಮಸ್ತ ಸಮಾಜದ ಮುಖಂಡರು ಯುವಕರು ಹಾಜರಿದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *