ಮ್ಯಾರಥಾನ್ ನಲ್ಲಿ 42 ಕಿಲೋಮೀಟರ್ ಕ್ರಮಿಸಿದ ಭಾರತದ ಮೊದಲ‌ ಮಹಿಳೆ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಮ್ಯಾರಥಾನ್ ಓಟದಲ್ಲಿ 42 ಕಿಲೋ ಮೀಟರ್ ಓಡಿದ ಭಾರತದ ಮೊದಲ ಮಹಿಳೆ ಎಂದು ಖ್ಯಾತಿಯನ್ನು ಹೊಂದಿರುವ ಚಿತ್ರದುರ್ಗ ಜಿಲ್ಲಾ ಎಸ್ಪಿ ಜಿ. ರಾಧಿಕಾ ಇಂದಿಗೂ ಕೂಡ 30 ರಿಂದ 35 ಕಿಲೋಮೀಟರ್ ವಾಕಿಂಗ್ ಸೈಕ್ಲಿಂಗ್ ಮಾಡುತ್ತಾರೆ.

Chitradurga Sp radhika cycling

ಚಿತ್ರದುರ್ಗ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಜಿ. ರಾಧಿಕಾ ಹೈದರಾಬಾದ್ ನಲ್ಲಿ ನಡೆದಿದ್ದ ಮ್ಯಾರಥಾನ್ ಓಟದಲ್ಲಿ ಸುಮಾರು 42 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದಾರೆ. ಇದನ್ನ‌ ಮುಂದುವರೆಸಿಕೊಂಡು ಬಂದಿರುವ ರಾಧಿಕಾ ಕೋವಿಡ್ ಸಮಯದಿಂದ ಪ್ರತೀ ದಿನವೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಫಿಟ್ನೆಸ್ ಗಾಗಿ ದಿನವೂ ಚಿತ್ರದುರ್ಗದ ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿದು ಸುಮಾರು 25 ರಿಂದ 30 ಕಿಲೋಮೀಟರ್ ವಾಕಿಂಗ್ ಮಾಡುತ್ತಾರೆ. ಜೊತೆಗೆ ಸಿಬ್ಬಂದಿಯನ್ನು ಕರೆದುಕೊಂಡು ಅವರಿಗೂ ಕೂಡ ಫಿಟ್ನೇಸ್ ಬಗ್ಗೆ ಅರಿವು ಮೂಡಿಸುತ್ತಾರೆ.

 

 

Chitradurga sp  radhika cycling

ಇದಕ್ಕಾಗಿ ಪ್ರತೀ ವಾರವೂ 30 ರಿಂದ 35 ಕಿಲೋಮೀಟರ್ ಸೈಕ್ಲಿಂಗ್ ಹೋಗುತ್ತಾರೆ. ಜೊತೆಗೆ ದಿನವೂ ವಾಕಿಂಗ್, ಜಾಗಿಂಗ್, ಟ್ರಕ್ಕಿಂಗ್ ಹೀಗೆ ಒಂದಲ್ಲಾ ಒಂದು ಕಾರ್ಯಕ್ರಮವನ್ನು ಇನ್ನಿತರೇ ಅಧಿಕಾರಿಗಳು ಸಿಬ್ಬಂದಿಗಳ ಜೊತೆ ಮಾಡಿ ಅವರನ್ನು ಉತ್ತೇಜಿಸುತ್ತಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *