ತಪ್ಪಿದ ಅನಾಹುತ ಪೋಲಿಸ್ ಬಚಾವ್

ಜಿಲ್ಲಾ ಸುದ್ದಿ

ಚಿತ್ರದುರ್ಗ: ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ವಿರೋಧಿಸಿ ಮಾಡುತ್ತಿರುವ ಬಂದ್ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಕೋಟೆ ನಾಡಿನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ದ ವೇಳೆ ಪೋಲಿಸರು ಅದನ್ನು ಕೆಡಿಸಲು ಬಂದಾಗ ಬೆಂಕಿ‌ ಹಚ್ಚಿದ್ದ ಟಯರ್ ಪೋಲಿಸ್ ತಗಲಿ ಆಗುವ ಅನಾಹುತ ಸ್ವಲ್ಪದರಲ್ಲಿ ತಪ್ಪಿದ ಘಟನೆ ನಡೆಯಿತು.

Chitradurga police safe from firing tyre

ಬೆಳಗಿನಿಂದಲೇ ಆರಂಭವಾಗಿದ್ದ ಪ್ರತಿಭಟನೆ ಕಾವು ಏರುತ್ತಾ, ಗಾಂಧಿ ವೃತ್ತದಲ್ಲಿ ಕಾರ್ಯಕರ್ತರು ಬಸ್ ಗಳನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಪೋಲಿಸರು ಹಾಗೂ ಪ್ರತಿಭಟನಾ ನಿರತ ಕಾರ್ಯಕರ್ತರ ನಡುವೆ ಮಾತಿನ ವಾಗ್ವಾದ ನಡೆಯಿತು. ನಂತರ ಬಿಡಿ ರಸ್ತೆಯ ಉಪಾದ್ಯ ಹೊಟೇಲ್ ಬಳಿ ಕಾರ್ಯಕರ್ತರು ಪೋಲಿಸರ ಕಣ್ಣು ತಪ್ಪಿಸಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೋಲಿಸರು ಟೈರ್ ಗೆ ಹಚ್ಚಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು
ಇದರ ನಡುವೆ ಪೋಲಿಸ್ ಒಬ್ಬರ ಮೇಲೆ ಟೈಯರ್ ಹಾರಿ ಬಂದಿದ್ದು ಬೆಂಕಿ ಹಚ್ಚಿದ ಟಯರ್ ನಿಂದ ಪೋಲಿಸ್ ತಪ್ಪಿಸಿಕೊಂಡಿದ್ದು ಕಂಡು ಬಂತು.

 

 

Chitradurga police safe from firing tyre

 

ಇದರ‌ ನಡುವೆ ಸುಮಾರು 15 ಕ್ಕೂ ಹೆಚ್ಚು ಜನ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ, ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಸರ್ಕಾರ ಕನ್ನಡಿಗರ ಹೋರಾಟವನ್ನು ಹತ್ತಿಕ್ಕುತ್ತಿದೆ. ಆದರು ಬಂದ್ ಯಶ್ವಿಯಾಗುತ್ತದೆ. ಯಾವುದೇ ಕಾರಣಕ್ಕು ಮರಾಠ ಅಭಿವೃದ್ದಿ ನಿಗಮ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *