30 ತಿಂಗಳ ಒಳಗೆ ಮೆಡಿಕಲ್ ಕಾಲೇಜ್ ಪೂರ್ಣಗೊಳಿಸುತ್ತೇವೆ

ಆರೋಗ್ಯ ರಾಜ್ಯ

ಚಿತ್ರದುರ್ಗ:ಬಹುನಿರೀಕ್ಷಿತ ಕೋಟೆ ನಾಡು ಮೆಡಿಕಲ್ ಕಾಲೇಜಿನ ಸ್ಥಳ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಸುಧಾಕರ್, ಮುಂದಿನ ಮುವತ್ತು ತಿಂಗಳಲ್ಲಿ ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳುತ್ತಾ, ಸರ್ಕಾರಿ ಆಸ್ಪತ್ರೆಯ ಸುಮಾರು 25 ಎಕೆರೆ ಜಮೀನಿನನಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಲು ನಿನ್ನೆ ತಾನೆ ಮುಖ್ಯ ಮಂತ್ರಿ ಯಡಿಯೂರಪ್ಪ 50 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ನೆರವು ಇದಕ್ಕೆ ಇರುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರ ವೇ ಭರಿಸಲಿದೆ. ಜಿಲ್ಲೆಯ ಖನಿಜ ಸಂಪತ್ತಿನ ಹಣವನ್ನು ಇದಕ್ಕೆ ಬಳಕೆ ಮಾಡಿಕೊಂಡು ಕಾಲೇಜ್ ನಿರ್ಮಾಣ ಮಾಡಲಾಗುತ್ತದೆ. ಮೆಡಿಕಲ್ ಕಾಲೇಜ್ ಜೊತೆಗೆ ಪ್ಯಾರಾ ಮೆಡಿಕಲ್ ಕಾಲೇಜು ಕೂಡ ಸ್ಥಾಪಿಸಲಾಗುತ್ತದೆ.

Chitradurga medical college place visit

 

 

ಹಾಗೂ ಎಲ್ಲಾ ಮಾದರಿಯ ಅರೆ ವೈದ್ಯಕೀಯ ಕೋರ್ಸ್ ಆರಂಭಿಸಲಾಗುತ್ತದೆ. ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನ ನೀಡಲು ಬದ್ದವಾಗಿದೆ. ಕೋರೋನಾ ಲಸಿಕೆ ಕೂಡ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಇದನ್ನು ಪ್ರತಿಷ್ಠಿತ ಸಂಸ್ಥೆಗಳಿಂದ ಸ್ಪಷ್ಟನೆ ನೀಡಿವೆ. ಮಾರ್ಚ್ ಏಪ್ರಿಲ್ ಒಳಗೆ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದರು.

Chitradurga medical college place visitಸ್ಥಳ ಪರಿಶೀಲನೆ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸ್ಥಳೀಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಟಿ. ರಘು ಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಜಿಪಂ ಅದ್ಯಕ್ಷೆ ಶಶಿಕಲಾ ಸುರೇಶ್ ಬಾಬು ಡಿಸಿ ಕವಿತಾ ಮನ್ನಿಕೇರಿ ಸೇರಿದಂತೆ ರಾಜಕೀಯ ಮುಖಂಡರು ಭಾಗಿಯಾಗಿದ್ದರು.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *