ಆರ್.ಸಿ.ಬಿ. ಗೆಲ್ಲಲು  ತೇರು ಮಲ್ಲೇಶನಿಗೆ  ಯುವಕನ ವಿನೂತನ   ಹರಕೆ!!!!!

ಜಿಲ್ಲಾ ಸುದ್ದಿ

ಆರ್.ಸಿ.ಬಿ. ಗೆಲ್ಲಲು  ತೇರು ಮಲ್ಲೇಶನಿಗೆ  ಯುವಕನ ವಿನೂತನ   ಹರಕೆ!!!!!

ಚಿತ್ರದುರ್ಗ- ಭಕ್ತನೊಬ್ಬ “ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ” ಮೇಲೆ “ಜೈ ಆರ್.ಸಿ.ಬಿ.” ಎಂದು ಬರೆದು ದೇವರಿಗೆ ಅರ್ಪಿಸುವ ಮೂಲಕ ಹರಕೆ ಹೊತ್ತಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ  ಬಹಳ ಅದ್ದೂರಿಯಾಗಿ ನಡೆಯಿತು.  ಭಕ್ತರು ಬಾಳೆ ಹಣ್ಣುಗಳನ್ನು ರಥದ ತೇರಿಗೆ ಎಸೆಯುವ ಮೂಲಕ ತನ್ನ ಹರಕೆ ತೀರಿಸಿದರು. ಆದರೆ ಇಲ್ಲೊಬ್ಬ ಭಕ್ತ ಈ ಬಾರಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಐ.ಪಿ.ಎಲ್. ಟ್ವಿ 20 ಟೂರ್ನಿಯಲ್ಲಿ ಕಪ್ ಗೆಲ್ಲಬೇಕೆಂದು  ಆರ್.ಸಿ.ಬಿ. ಅಭಿಮಾನಿಯಾಗಿ ವಿಶಿಷ್ಟವಾಗಿ ಹರಕೆ ಹೊತ್ತಿದ್ದಾನೆ.Chitradurga different harake from cricket abhimani

 

 

“ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ” ಮೇಲೆ “ಜೈ ಆರ್.ಸಿ.ಬಿ.” ಎಂದು ಬರೆದು ದೇವರಿಗೆ ಅರ್ಪಿಸಿದ್ದಾನೆ.  ಶ್ರೀ ತೇರುಮಲ್ಲೇಶ್ವರ ರಥೋತ್ಸವದ ವೇಳೆ ಆಟ್ಟಿಕಾ ಗೋಲ್ಡ್ ಪ್ಯಾಲೇಸ್ ಬೊಮ್ಮನಹಳ್ಳಿ ಬಾಬು ಅವರು ಹರಕೆ ತಿರಿಸಲು ಹೆಲಿಕ್ಯಾಪ್ಟರ್ ಮೂಲಕ ಹೂ ಸುರಿಮಳೆ ಸುರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಹೆಲಿಕಾಪ್ಟರ್ ಮೂಲಕ ಬಂದ ಬೊಮ್ಮನಹಳ್ಳಿ ಬಾಬು ಎರಡು ಬಾರಿ ಹಿರಿಯೂರು ನಗರವನ್ನು ಸುತ್ತುವರಿದು ನಂತರ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು. ಸ್ವಾಮಿಯ ಮುಕ್ತಿ ಬಾವುಟವನ್ನು ಹರಾಜಿನಲ್ಲಿ 5 ಲಕ್ಷಕ್ಕೆ  ಪಡೆದುಕೊಂಡರು. ರಾಜ್ಯದ ವಿವಿಧ ಕಡೆ ನಡೆಯುವ ರಥೋತ್ಸವದ ಜಾತ್ರೆಗಳಲ್ಲಿ ಭಕ್ತರು ವಿಶಿಷ್ಟವಾಗಿ ಹರಕೆ ತಿರಿಸುತ್ತಿರುವುದು ಆಗಾಗ ಕಾಣಬಹುದು. ಜಾತ್ರೆಯ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ ಮೇಲೆ ಜೈ ಆರ್.ಸಿ.ಬಿ. ಎಂದು ಬರೆದು ದೇವರಿಗೆ ಅರ್ಪಿಸಿರುವುದು ಜಾತ್ರೆಯ ವಿಶೇಷವಾಗಿತ್ತು.

ಸಂಯುಕ್ತವಾಣಿ

Leave a Reply

Your email address will not be published. Required fields are marked *