ಬಸ್ ಪಲ್ಟಿ ಇಬ್ಬರು ಸಾವು ಆರು ಜನರಿಗೆ ಗಂಭೀರ ಗಾಯ

ಕ್ರೈಂ

ಚಿತ್ರದುರ್ಗ: KSRTC ಬಸ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ
ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಘಟನೆಯಲ್ಲಿ 6
ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.

Chitradurga bus palti two death and 6 injuerd

 

 

ಮೃತರನ್ನು ಯಾದಗಿರಿ ಮೂಲದ ಬಸವರಾಜ್ (32) ಮತ್ತು ಐಶ್ವರ್ಯ (12) ಎಂದು ಗುರುತಿಸಲಾಗಿದೆ.
ಶಹಾಪುರದಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ KSRTC ಬಸ್,​ ಹಿರಿಯೂರು ನಗರದ ಶಿವಮೂರ್ತಿ ಬಡಾವಣೆ ಬಳಿ ಡಿವೈಡರ್​​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್ ಪಲ್ಟಿ ಆಗುತ್ತಿದ್ದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್ ಪರಾರಿಯಾಗಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

Chitradurga bus palti 2 death and 6 injured
ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *