ಚಿತ್ರದುರ್ಗ : ಅಂಬುಲೆನ್ಸ್ ಮತ್ತು ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ನಗರದ ವರವಲಯದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಅಪಘಾತ ನಡೆದಿದೆ.
ಒಂದೇ ಸ್ಕೂಟಿಯಲ್ಲಿ ತ್ರಿಬಲ್ ರೈಡಿಂಗ್ ಮೂವರು ಯುವಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಪಟ್ಟ ಮೂರು ಜನ ಯುವಕರು ಚಿತ್ರದುರ್ಗದವರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.