ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ: ಕಾಂತರಾಜ್

ರಾಜ್ಯ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು, ಅವರ ಪಕ್ಷದ ಮುಖಂಡರಿಗೆ ಇಷ್ಟವಿರಲಿಲ್ಲ, ಆದ್ದರಿಂದ ಬಿಜೆಪಿ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.‌ಕಾಂತರಾಜ್ ಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಚುನಾವಣೆಯಲ್ಲಿ ಕೆಲಸ ಮಾಡಲು ಕಾಲಾವಕಾಶ ಕಡಿಮೆ ಇದ್ದು, ಆದರೂ ಗೆಲುವು ಸಾಧಿಸಿದ್ದೇವೆ. ಮೈತ್ರಿ ಅಭ್ಯರ್ಥಿ ಕಾರಜೋಳ ಅವರ ಗೆಲುವು ಜೆಡಿಎಸ್, ಭಜರಂಗದಳ, ಆರ್ ಎಸ್ ಎಸ್ ಹಾಗೂ ಮೋದಿ ಅಭಿಮಾನಿಗಳ ಕೆಲಸದಿಂದ ಆಗಿದೆ ಎಂದರು. ಈ ಗೆಲುವು ನಮಗೆ ಅತ್ಯಂತ ಸಂತೋಷ ತಂದಿದೆ. ಇದರಿಂದ ರಾಜ್ಯದಾದ್ಯಂತ ಮೈತ್ರಿಯಾಗಿದ್ದರಿಂದ ಯಾವ ಲಾಭ ಜೆಡಿಎಸ್ ಗೆ ಸಿಕ್ಕಿದೆ ಎಂದು ತಿಳಿದಿದೆ.ನಾವು ಮೈತ್ರಿ ಅಭ್ಯರ್ಥಿ ಕಾರಜೋಳ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಹೇಳಿದ್ದೆವು, ಅದರೆ ಲೋಕಸಭಾ ಕ್ಷೇತ್ರದ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಮಗೆ ತಿಳಿದ ಸತ್ಯ ಏನೆಂದರೆ ಸ್ವತಃ ಬಿಜೆಪಿ ಮುಖಂಡರಿಗೆ ಕಾರಜೋಳ ಗೆಲುವು ಇಷ್ಟ ಇರಲಿಲ್ಲ. ಅವರು ಗೆದ್ದರೆ ನಮ್ಮ ಪ್ರತಿಷ್ಟೆ ಕಡಿಮೆ ಆಗುತ್ತದೆ ಎಂದು ಬಿಜೆಪಿ‌ ಮುಖಂಡರು ಕೆಲಸ ಮಾಡಿಲ್ಲ. ಆದರೆ ಅವರ ಗೆಲುವಿಗೆ ಜೆಡಿಎಸ್, ಭಜರಂಗದಳ, ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಮೋದಿ‌ ಅಭಿಮಾನಿಗಳಿಂದ ಗೆಲುವು ಸಿಕ್ಕಿದೆ. ಆದರೆ ಯಾರೂ ಇದನ್ನು ಹೇಳಲು ಮುಂದೆ ಬರಲಿಲ್ಲ. ನಾವೂ ಕೂಡ ಚುನಾವಣೆಯಲ್ಲಿ ಇಳಿಯದೇ ಹೋಗಿದ್ದರೆ, ಬಿಜೆಪಿ ಗೆಲುವು ಸಾಧ್ಯವಿರಲಿಲ್ಲ. ಆದ್ದರಿಂದ ಪಕ್ಷದಲ್ಲಿರುವ ಕುತಂತ್ರಿಗಳನ್ನು ಹೊರಗೆ ಹಾಕಿದರೆ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ಸಮಾಧಾನವಾಗುತ್ತದೆ. ಕಾರಜೋಳ ಅವರಿಗೆ ಪ್ರತಿಯೊಂದು ಮಾಹಿತಿ ಲಭ್ಯವಿದೆ. ನಮ್ಮ ಪಕ್ಷದ ಅಸ್ತಿತ್ವವೂ ಇದೆ. ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಿದ್ದೇವೆ ಅದರ ಸಮಾಧಾನವಿದೆ.

 

 

ಮದಕರಿ‌ನಾಯಕ‌ ಥೀಮ್ ಪಾರ್ಕ್ ಅಪ್ಪರ್ ಭದ್ರಾ ಯೋಜನೆಗೆ ಆದ್ಯತೆ‌ ನೀಡಿ: ಗೋವಿಂದ ಕಾರಜೋಳ ಅವರು, ಮದಕರಿ ನಾಯಕ ಥೀಮ್ ಪಾರ್ಕ್, ಅಪ್ಪರ್ ಭದ್ರಾ ಯೋಜನೆ ಗೆ ಆದ್ಯತೆ ನೀಡಬೇಕು ಎಂದರು.
ಇಲ್ಲಿ ಕಾರಜೋಳ ಗೆಲುವಿಗೆ ಆಭ್ಯರ್ಥಿ ಹಾಗೂ ಅವರ ಮನಸ್ಥಿತಿ ಕಾರಣವಾಗಿದೆ. ಪಕ್ಷ ಚನ್ನಾಗಿದ್ದು, ಅಭ್ಯರ್ಥಿ ಸರಿಯಿಲ್ಲದಿದ್ದರೆ, ಗೆಲುವು ಸಾಧ್ಯವಿಲ್ಲ. ಅನುಭವುವುಳ್ಳ ಅಭ್ಯರ್ಥಿ ಬಂದರೆ ಜಿಲ್ಲೆಯ ಅಭಿವೃದ್ದಿಗೆ ಕಾರಣವಾಗುತ್ತದೆ. ಬಿಜೆಪಿಯಿಂದ ರಾಜಕೀಯ ಲಾಭ ಪಡೆದವರ್ಯಾರು ಕೂಡ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿಲ್ಲ ಎಂದರು. ಇನ್ನು ಸ್ಥಳೀಯ ಬಿಜೆಪಿ‌ ಮುಖಂಡರು ಯಾರೂ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಕರೆದಿಲ್ಲ. ಆದರೆ ಕಾರಜೋಳ ಅವರೇ ಸ್ವತಃ ಮೈತ್ರಿಯಾಗಿದೆ ಬನ್ನಿ‌ ಕೆಲಸ ಮಾಡೋಣ ಎಂದು ಕರೆದಿದ್ದರು. ಅದಕ್ಕಾಗಿ ಬಂದು ಕೆಲಸ ಮಾಡಿದ್ದೇವೆ. ಮೈತ್ರಿ ಮುಂದುವರೆಯುತ್ತದೆ. ಇಬ್ಬರು ಒಂದಾದರೆ ಕಾಂಗ್ರೆಸ್ ನ್ನು ಕಟ್ಟಿ ಹಾಕಬಹುದು ಎಂದು‌ ನಮ್ಮ ನಾಯಕರಿಗೆ ಮನವರಿಕೆ ಆಗಿದೆ ಎಂದರು. ಈ‌ಸಮಯದಲ್ಲಿ ಜೆಡಿಎಸ್ ಮಹಾ ಪ್ರಧಾನ‌ ಕಾರ್ಯದರ್ಶಿ ಗೋಪಾಲಸ್ವಾಮಿ‌ನಾಯಕ, ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮಣ್ಣ ಮುಖಂಡರಾದ ವೀರಣ್ಣ ಹಾಗೂ ಪ್ರತಾಪ್ ಜೋಗಿ ಇದ್ದರು.

ಈ‌ಸಮಯದಲದಲಿ

Leave a Reply

Your email address will not be published. Required fields are marked *