ಬಿಜೆಪಿ ರಾಜಕೀಯ ಷಡ್ಯಂತರ ಮಾಡುತ್ತಿದೆ: ಡಾ. ಯೋಗೀಶ್ ಬಾಬು

ರಾಜ್ಯ

 

ವಾಲ್ಮೀಕಿ ನಿಗಮ ಅಧಿಕಾರಿ ಚಂದ್ರಶೇಖರ್ರವರ ಆತ್ಮಹತ್ಯೆಗೆ ಸಚಿವ ನಾಗೇಂದ್ರ ರವರು ಕಾರಣರಲ್ಲ, ಬಿಜೆಪಿ ಕುತಂತ್ರದಿಂದ ರಾಜಕೀಯ ಷಡ್ಯಂತ್ರದಿಂದ ಇವರ ರಾಜಿನಾಮೆಯನ್ನು ಕೇಳುತ್ತಿದ್ದಾರೆ. ಯಾವುದೆ ಕಾರಣಕ್ಕೂ ಸಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬಾರದೆಂದು ಕರ್ನಾಟಕ ದ್ರಾಕ್ಷರಸ ಮಂಡಳಿಯ ರಾಜ್ಯಾಧ್ಯಕ್ಷರಾದ ಡಾ.ಬಿ.ಯೋಗಿಶ್ ಬಾಬು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ  ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾಲ್ಮಿಕೀ ನಿಗಮ ಮಂಡಳಿಯ ಆಧಿಕಾರಿ ಚಂದ್ರಶೇಖರ್ ರವರು ತಮ್ಮ ಡೆತ್ನೋಟ್ ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ನನ್ನ ಸಾವಿಗೆ ನನ್ನ ಮೇಲಿನ ಅಧಿಕಾರಿಗಳು ಕಾರಣರಾಗಿದ್ದಾರೆ ಇದರಲ್ಲಿ ಸಚಿವರ ಪಾತ್ರ ಇಲ್ಲ ಎಂದು ತಿಳಿಸಿದ್ದರು ಸಹಾ ಬಿಜೆಪಿ ಸಚಿವರು ಇದರಲ್ಲಿ ಬಾಗಿಯಾಗಿದ್ದಾರೆ ರಾಜೀನಾಮೆಯನ್ನು ನೀಡುವಂತೆ ರಾಜ್ಯಾಧ್ಯಕ್ಷರಾದ ವಿಜೇಯೇಂದ್ರ ರವರು ಆಗ್ರಹಿಸಿದ್ದಾರೆ ಇಲ್ಲಿ ಸಚಿವರ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿರುವಾಗ ಬಿಜೆಪಿ ರಾಜಕೀಯ ಷಡ್ಯಂತ್ರದಿಂದ ಸಚಿವರ ರಾಜೀನಾಮೆಯನ್ನು ಕೇಳುತ್ತಿರುವುದು ದುರಾದೃಷ್ಟಕರ ಎಂದರು.

ಪ್ರಕರಣ ಸಂಭವಿಸುತ್ತಿದ್ದಯೇ ಮಂಡಳಿಯ ಅಧಿಕಾರಿಗಳನ್ನು ಸರ್ಕಾರ ಅಮಾನತ್ತು ಮಾಡಿದೆ, ಅಲ್ಲದೆ ನಿಗಮದಿಂದ ಹೋದ ಹಣವನ್ನು ಸಹಾ ವಾಪಾಸ್ಸು ಮಾಡಲು ಸೂಚನೆಯನ್ನು ಸಹಾ ನೀಡಲಾಗಿದ್ದು ಇಷ್ಠಾದರೂ ಸಹಾ ಬಿಜೆಪಿ ರಾಜೀನಾಮೆಯನ್ನು ಕೇಳುತ್ತಿರುವುದು ರಾಜಕೀಯ ದೃಷ್ಟಿಯಿಂದ ಮಾತ್ರವಾಗಿದೆ. ನಾಗೇಂದ್ರರವರು ನಮ್ಮ ನಾಯಕ ಜನಾಂಗದಲ್ಲಿ ಇರುವ ಯುವ ನಾಯಕರಾಗಿದ್ದರೆ. ಇವರು ತಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಕಳಂಕ ಇಲ್ಲದೆ ನಡೆಸುತ್ತಿದ್ದಾರೆ ಆದರೆ ಇದು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಆದ ಪ್ರಕರಣವಾಗಿದೆ ಹಿನ್ನಲೆಯಲ್ಲಿ ಸರ್ಕಾರವೂ ಸಹಾ ಇದರ ಬಗ್ಗೆ ತನಿಖೆಯನ್ನು ನಡೆಸಲು ಸೂಚನೆಯನ್ನು ನೀಡಿದೆ ತನಿಖಾ ವರದಿ ಬರುವವರೆಗೂ ಸಹಾ ಬಿಜೆಪಿಗೆ ತಾಳ್ಮೆ ಇಲ್ಲ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ದೂರಿದರು.

ಮೃತ ಚಂದ್ರಶೇಖರ್ ರವರ ಪತ್ನಿಯೂ ಸಹಾ ಪ್ರಕರಣದಲ್ಲಿ ಸಚಿವರ ಪಾತ್ರ ಯಾವುದು ಇಲ್ಲ ನಿಗಮದ ಮೇಲಿನ ಆಧಿಕಾರಿಗಳು ಒತ್ತಡದಿಂದ ರೀತಿ ಮಾಡಲಾಗಿದೆ ಎನ್ನಲಾಗಿದೆ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಶಿಕ್ಷೆಯನ್ನು ಕೊಡಿ ಎಂದಿದ್ದಾರೆ ಹೊರೆತು ಸಚಿವರ ರಾಜೀನಾಮೆಯನ್ನು ಕೇಳಿಲ್ಲ. ಚಂದ್ರಶೇಖರ್ ಆತ್ಮಹತ್ಯೆಗೆ ಸರ್ಕಾರ ಮತ್ತು ಸಚಿವರು ಸಾಂತ್ವಾನ ಹೇಳಿದ್ದಾರೆ. ಬಿಜೆಪಿ ಸಚಿವರ ರಾಜೀನಾಮೆಗೆ ಮುಂದುವರೆದರೆ ನಮ್ಮ ಜನಾಂಗ ಮತ್ತು ಪಕ್ಷದವತಿಯಿಂದ ರಾಜೀನಾಮೆ ನೀಡಬೇಡಿ ಎಂದು ನಾವು ಸಹಾ ಹೋರಾಟವನ್ನು ಮಾಡಲಾಗುವುದು ಎಂದು ಯೋಗೀಶ್ ಬಾಬು ತಿಳಿಸಿದರು

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಆರೋಪ ಕೇಳಿ ಬಂದ ತಕ್ಷಣ ಸಚಿವ ನಾಗೇಂದ್ರ ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಘಟನೆಗೆ ಕಾರಣರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಬೇರೆಯವರನ್ನು ನೇಮಕ ಮಾಡಿದ್ದಾರೆಎಂದು ತಿಳಿಸಿದ ಅವರು ರಾಜ್ಯದಲ್ಲಿ ೫೦ ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿಯ ನಾಯಕ ಸಮಾಜವನ್ನು ಗುರಿಯಾಗಿಸಿಕೊಂಡಿದ್ದಾರೆ. ಸಚಿವರ ವಿರುದ್ಧ ಹೀಗೆ ಆರೋಪ ಮಾಡುತ್ತಿರುವುದನ್ನು ಸಹಿಸುವುದಿಲ್ಲಎಂದು ಎಚ್ಚರಿಸಿದ್ದಾರೆ.

 

 

 

ಪಂಚಾಯತ್ ಮಾಜಿ ಸಚಿವರಾದ ಈಶ್ವರಪ್ಪ ರವರ ಮೇಲೆ ಬಂದಿದ್ದ ಆರೋಪ ಸಂತೋಷರವರ ಸಾವಿಗೆ ಈಶ್ವರಪ್ಪರವರ ಕಾರಣ ಎಂದು ಮೃತ ಸಂತೋಷ ಡೆತ್ನೋಟ್ ನಲ್ಲಿ ತಿಳಿಸಿದ್ದ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಯಿತು ಆದರೆ ಪ್ರಕರಣದಲ್ಲಿ ಸಚಿವ ನಾಗೇಂಧ್ರ ರವರ ಹೆಸರು ಬಂದಿಲ್ಲ, ಬಂದಿರುವುದು ನಿಗಮದ ಅಧಿಕಾರಿಗಳ ಹೆಸರು ಅವರ ಮೇಲೆ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ ಸಚಿವರ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ

ಗೋಷ್ಟಿಯಲ್ಲಿ ಕೆಪಿಸಿಸಿ  ವಕ್ತಾರ ಬಾಲಕೃಷ್ಣ ಯಾದವ್, ಮಧುಪಾಲೇ ಗೌಡ, ಜಯ್ಯಣ್ಣ, ಮಂಜುನಾಥ್, ಪ್ರಶಾಂತ್, ಸುನೀಲ್, ಸಂದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.  

 

 

 

Leave a Reply

Your email address will not be published. Required fields are marked *