ಹೋಲ್ ಸೆಲ್ ಆಗಿ ಬದಲು ಮಾಡುವ ಕಾಲ ಬಿಜೆಪಿಯವರಿಗೆ ಸಾಧ್ಯವಿಲ್ಲದ ಮಾತು: ಡಿ.‌ಸುಧಾಕರ್

ರಾಜ್ಯ

ಬಿಜೆಪಿಯವರು ಕಾಂಗ್ರೆಸ್ ಸರ್ಕಾರವನ್ನು ಹೋಲ್ ಸೇಲಾಗಿ ಚೇಂಜ್ ಮಾಡುವುದು 2018 ರಲ್ಲಿ‌ ಮಗಿದು ಹೋಯಿತು. ಅದರಲ್ಲಿ ಅವರು ಯಶಸ್ವಿಯಾಗಿದ್ದರು. ಆಗಾ ಯಾರ್ಯಾರು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದರೋ,ಅವರೆಲ್ಲರಿಗೂ ಜನ ಪಾಠ ಕಲಿಸಿದ್ದಾರೆ. ಮತ್ತೆ ಅದು ರಿಪಿಟ್ ಆಗುವುದು ನೂರಕ್ಕೆ ನೂರು ಸಾಧ್ಯವಿಲ್ಲದ ಮಾತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ವಾಲ್ಮೀಕಿ ನಿಗಮದ ನಿವೃತ್ತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಹೇಗೆ ವಾಲ್ಮೀಕಿ‌ ಇಲಾಖೆ ಸಚಿವ ನಾಗೇಂದ್ರ ರಾಜೀನಾಮೆ ನೀಡುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಮಾಧ್ಯಮಗಳೊಂದಿಗೆ ಮಾತಾಡಿದರು.ವಿಜಯೇಂದ್ರ ಅವರು ವಜಾ‌ಮಾಡಿ ಎಂದು‌ಹೇಳುವ ಮುನ್ನ ಅವರ ಪಾರ್ಟಿ ಅವರನ್ನು ಸರಿಯಾಗಿಟ್ಟುಕೊಳ್ಳಲು‌ ಹೇಳಿರಿ, ಅಧಿಕಾರಿಗೆ ಯಾವ ಒತ್ತಡ ಇತ್ತು ನನಗೆ ಮಾಹಿತಿ‌ ಇಲ್ಲ,ಇನ್ನು ಮಧು ಬಂಗಾರಪ್ಪ ಅವರು, ಭಾರತೀಯ ಸಂಸ್ಕೃತಿ ಯ ರೀತಿಯಲ್ಲಿ‌ಉಡುಪು ಧರಿಸಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಕಟಿಂಗ್ ಮಾಡಿಸುವುದು ಅವರ ವೈಯುಕ್ತಿಕ, ಹಾಗಾದರೆ ಅಬ್ದುಲ್ ಕಲಾಂ‌ ಹೇಗಿದ್ದರು. ಅವರೊಬ್ಬ ರಾಷ್ಟ್ರಪತಿಯಾಗಿದ್ದವರು, ಅದು ಅವರ ವೈಯುಕ್ತಿಕ ಅದನ್ನು ಟೀಕೆ ಮಾಡಬಾರದು ಎಂದರು.
ನಾವು ನಮ್ಮ ದೇಶವನ್ನು ಭಾರತ, ಹಿಂದೂಸ್ತಾನ್ ಎಂದೆಲ್ಲಾ ಕರೆಯುತ್ತೇವೆ ಇದೇನು ಹೊಸ ವಿಚಾರವಲ್ಲ, ಅಭಿವೃದ್ದಿ ಪರವಾಗಿ ಮಾತಾಡುವುದು ಬಿಟ್ಟು ಬಿಜೆಪಿಯವರು ಭಾವನಾತ್ಮಕವಾದ ವಿಷಯಗಳಾದ ಹಿಂದುತ್ವ, ರಾಮಂಮದಿರ ಬಗ್ಗೆ ಮಾತಾಡುತ್ತಾರೆ, ಹಿಂದೂ ರಾಷ್ಟ್ರ ಇವರೇನು ಮಾಡೋದು, ಗಾಂಧಿಜಿ ಅವರ ಕಾಲದಿಂದಲೂ‌ ನಾವು ಹಿಂದೂಸ್ತಾನ್ ಎಂದು ಕರೆಯುತ್ತಿದ್ದೇವೆ.ಮುಸಲ್ಮಾನರು ಕೂಡ ನೂರಾರು ವರ್ಷಗಳಿಂದ ಬಾಳಿ ಬದುಕುತ್ತಿದ್ದಾರೆ. ಜಾತಿ ಧರ್ಮಗಳ ಬಗ್ಗೆ ತಂದಿಡುವುದನ್ನು ಸಂವಿಧಾನವಾಗಲಿ, ಭಾರತವಾಗಲಿ ಸಹಿಸುದಿಲ್ಲ. ಬಿಜೆಪಿ ಅಧಿಕಾರ ಕಳೆದುಕೊಂಡಿದ್ದಾರೆ. ಅರೇನೇನೂ ಮಾತಾಡುತ್ತಾರೆ. ಅವರಿಗ್ಯಾಕೆ ಉತ್ತರ ಕೊಡಬೇಕು.‌ಮೊದಲು ಪಾರ್ಲಿಮೆಂಟರಿ‌ ಚುನಾವಣೆ ಏನಾಗುತ್ತೋ ನೋಡಿ ಆಮೇಲೆ ಮಾತಾಡಲಿ, ಸಿಎಂ ಹಾಗೂ ಡಿಸಿಎಂ ಅವರು, ನಾವು 20 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಎಂದರು.

 

 

Leave a Reply

Your email address will not be published. Required fields are marked *