ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ: ತಹಶೀಲ್ದಾರ್ ರಘುಮೂರ್ತಿ

ಜಿಲ್ಲಾ ಸುದ್ದಿ

ಚುನಾವಣೆಗೆ ಪೂರಕವಾದಂತ ಎಲ್ಲ ಕೆಲಸ ಕಾರ್ಯಗಳು ಸೇರಿದಂತೆ ರಾಜ್ಯದ ಮತ್ತು ರಾಷ್ಟ್ರದ ಕಲ್ಯಾಣ ಕೆಲಸಗಳನ್ನು ಸಮರ್ಪಕವಾಗಿ ರಾಜ್ಯದ ಶಿಕ್ಷಕರು ಮಾಡುತ್ತಿರುವುದರಿಂದ ಇವರು ಮಾಡುವ ಕೆಲಸಗಳು ನೈಪುಣ್ಯತೆ ಮತ್ತು ಪರಿಪೂರ್ಣತೆ ಇರುವುದರಿಂದ ಶೇಕಡ 100ರಷ್ಟು, ಈ ಕೆಲಸಗಳು ಯಶಸ್ಸನ್ನು ಪಡೆಯುತ್ತವೆ ಆದುದರಿಂದ ಶಿಕ್ಷಕರುಗಳ ಮೇಲೆ ಭರವಸೆ ಇಟ್ಟು ಕೇಂದ್ರ ಚುನಾವಣೆ ಆಯೋಗ ಮತ್ತು ರಾಜ್ಯ ಸರ್ಕಾರ ಗುರುತರವಾದ ಜವಾಬ್ದಾರಿಯನ್ನು ನೀಡಿರುತ್ತದೆ ಈ ಜವಾಬ್ದಾರಿಯನ್ನು ಗೌರವಿಸಿ ಎಲ್ಲ ಶಿಕ್ಷಕರುಗಳು ಕೂಡ ಮತದಾರ ಪಟ್ಟಿಯ ಪರಿಷ್ಕರಣೆಯನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಚಿತ್ರದುರ್ಗ ಉಪ ವಿಭಾಗ ಅಧಿಕಾರಿ ಚಂದ್ರಯ್ಯ ಹೇಳಿದರು ಅವರು ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಮತದಾರರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಲಹೆ ಮತ್ತು ಸೂಚನೆಯನ್ನು ನೀಡುತ್ತಾ ಮುಂಬರುವಂತಹ ಪರಿಷ್ಕರಣೆ ಸಮಯದಲ್ಲಿ ಯಾವುದೇ ವ್ಯೆಯವಾಗದಂತೆ 18 ವರ್ಷವಯಮಾನದ ಹೊಸ ಮತದಾರರನ್ನು ಕೈ ಬಿಡದಂತೆ ಎಚ್ಚರಿಕೆಯಿಂದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಲಹೆ ನೀಡಿದರು ಸಮಾರಂಭದಲ್ಲಿ ಉಪಸ್ಥಿತರಿದ್ದಂತ ಚಳ್ಳಕೆರೆ ತಾಶಿಲ್ದಾರ್ ರಘುಮೂರ್ತಿ ಮಾತನಾಡಿ ಮತದಾರ ಪಟ್ಟಿ ಪರಿಷ್ಕರಣಿ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಪ್ರತಿನಿಧಿಗಳು ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಉಪಯುಗ ಅಧಿಕಾರಿಗಳು ಮತ್ತು ತಹಸಿಲ್ದಾರ್ ಒಳಗೊಂಡಂತ ಯಾವುದೇ ಅಧಿಕಾರಿಗಳು ಬಂದಂತ ಸಂದರ್ಭದಲ್ಲಿ ನಿಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಎಪಿಕ್ ರೇಶಿಯೋ ಜೆಂಡರ್ ರೇಶ್ಯೂ ಮತ್ತು ಹೊಸ ಮತದಾರರ ರೇಶಿಯೋ ಹಾಗೂ ಇದಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳತಕ್ಕದ್ದು ಮೇಲಾಧಿಕಾರಿಗಳು ಕೇಳಿದ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯವಿಲ್ಲದಂತೆ ಈ ಮಾಹಿತಿಯನ್ನು ನೀಡತಕ್ಕದ್ದು ಮತ್ತು ನಿಮ್ಮ ಮತಗಟ್ಟೆ ವ್ಯಾಪ್ತಿಯ ಯಾವುದೇ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳತಕ್ಕದ್ದು ಮೃತಪಟ್ಟ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮತಪಟ್ಟಿಯಲ್ಲಿರಕೊಡದು ಸ್ಥಳಾಂತರ ಗೊಂಡಂತ ಯಾವುದೇ ಮತದಾರರು ಕೂಡ ಮತಪಟ್ಟೆಯಲ್ಲಿರ ಕೂಡದು ಇದಕ್ಕೆ ಸಂಬಂಧಿಸಿದಂತ ದಾಖಲೆಗಳನ್ನು ಕ್ರೂಢೀಕರಿಸಿ ಮನೆ ಮನೆಗೆ ಸಂಪರ್ಕಿಸಿ ಈ ಒಂದು ಮತದಾರರ ಪಟ್ಟಿಯ ಪರಿಷ್ಕರಣ ಕಾರ್ಯ ಸತ್ಕಾರ್ಯವಾಗಿರುವುದರಿಂದ ಎಲ್ಲಾ ಗೌರವಾನ್ವಿತ ಶಿಕ್ಷಕರುಗಳು ಈ ಒಂದು ಕೆಲಸವನ್ನು ನಿಗದಿತ ಅವಧಿ ಒಳಗೆ ಪೂರ್ಣಗೊಳಿಸತಕ್ಕದ್ದು ಎಂದು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು ತದನಂತರ ಉಪ ವಿಭಾಗ ಅಧಿಕಾರಿಗಳಾದಂತ ಚಂದ್ರಯ್ಯ ತಹಸೀಲ್ದಾರಾದಂತ ಎನ್ ರಘುಮೂರ್ತಿ ಬಾಪೂಜಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ಇರುವಂತಹ 18 ವರ್ಷ ವಯಾಮಾನ ಮೀರಿದಂತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಎಲ್ಲಾ ಈ ವಯೋಮಾನದ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ತಕ್ಷಣವೇ ನೋಂದಣಿ ಮಾಡಿಕೊಳ್ಳುವಂತೆ ಮನವರಿಕೆ ಮಾಡಿ ಕೊಟ್ಟು ಎಲ್ಲ ವಿದ್ಯಾರ್ಥಿಗಳಿಂದ ದೀಕ್ಷೆ ಪಡೆಯಲಾಯಿತು ಇದೇ ಸಂದರ್ಭದಲ್ಲಿ ಬಾಪೂಜಿ ಕಾಲೇಜಿನ ಪ್ರಾಂಶು ಪಾ ಲರಾದಂತ ಶ್ರೀ ಬಾಲರೆಡ್ಡಿ ಮತ್ತು ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು ಮತ್ತು ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಶಿಕ್ಷಣ ಇಲಾಖೆಯ ಮತ್ತು ಎಲ್ಲ ಮತಗಟ್ಟೆಯ ಪರಿಷ್ಕರಣೆಗೆ ಭಾಗಿಯಾಗಿರುವಂತ ಎಲ್ಲ ಶಿಕ್ಷಕರುಗಳು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *