ಮಾತನಾಡದ ದೇವರ ದೇವಸ್ಥಾನಗಳಿಗಿಂತ ಶಾಲೆಗಳನ್ನು ಕೇಳಿ

ರಾಜ್ಯ

1800 ಶಾಲಾ‌ ಕೊಠಡಿಗಳನ್ನು ಒಂದೇ ಸಾರಿ ಕೊಟ್ಟಿರುವ ಉದಾಹರಣೆಗಳು ಯಾವುದೇ ಸರ್ಕಾರಗಳ‌ ಇತಿಹಾಸದಲ್ಲಿಲ್ಲ ಎಂದು ಹಿರಿಯೂರು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಅವರು ಹಿರಿಯೂರಿನಲ್ಲಿ‌ಶಾಲಾ ಕೊಠಡಿಗಳ‌ ಭೂಮಿ‌ಪೂಜೆ ನೆರವೇರಿಸಿ‌ ಮಾತನಾಡಿದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಸಿಎಂ ಬಸವರಾಜ‌ ಬೊಮ್ಮಾಯಿ‌ ಹಾಗೂ ಶಿಕ್ಷಣ ಸಚಿವ ನಾಗೇಶ್ ತೆಗೆದುಕೊಂಡಿದ್ದು, ಅವರಿಗೆ ಧನ್ಯವಾದಗಳನ್ನು‌ ಅರ್ಪಿಸೋಣ,ಯಾವುದೇ ಗ್ರಾಮಾಂತರ ಪ್ರದೇಶಗಳಿಗೆ ಹೋದರೂ‌ ಕೂಡ ಅಲ್ಲಿ‌ ಕೊಠಡಿಗಳನ್ನು‌ ನೀಡುವಂತೆ ಮನವಿ‌ ಮಾಡುತ್ತಿದ್ದರು, ಯಾವುದೇ ಸರ್ಕಾರ ಇದುವರೆಗೂ ಎರಡೂ ಅಥವ ಮೂರು ಕೊಠಡಿಗಳನ್ನು‌ತಾಲೂಕಿಗೆ ನೀಡುತ್ತಿತ್ತು, ಆದರೆ ಈ‌ ಬಾರಿ ತಾಲೂಕಿಗೆ 34 ಕೊಠಡಿಗಳನ್ನು‌ ಕಟ್ಟಲು‌ ಹಣ ಬಿಡುಗಡೆ ಮಾಡಿದೆ ಎಂದರು. ತಾಲೂಕಿನಲ್ಲಿ ನಾನೂ ಕೂಡ ಶಿಕ್ಷಣಕ್ಕೆ ಹೆಚ್ಚಿನ ಗಮನವನ್ನು ಕೊಡುತ್ತಾ ಬಂದಿದ್ದೇನೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ದೇವಸ್ಥಾನಗಳಿಗೆ ಹಣ ಕೊಡುವಂತೆ ಕೇಳುತ್ತಾರೆ. ಆದರೆ ಅದರ ಬದಲು ಶಾಲೆಗಳನ್ನು ಕೇಳಬೇಕು.ನಮ್ಮಲ್ಲಿ ಎಲ್ಲಾ ಜಾತಿಗಳಿಗೂ ಒಂದೊಂದು ದೇವಸ್ಥಾನ ಮಾಡುತ್ತೇವೆ ಆದರೆ ಅದೆಲ್ಲಕ್ಕಿಂತ ಎಲ್ಲಾ ಜಾತಿಗಳಿಗೂ ಸೇರಿ ಒಂದೇ ದೇವಸ್ಥಾನ ಮಾಡಬೇಕು, ಈ ಮನಸ್ಥಿತಿಯನ್ನು‌ ಜನರು ಬೆಳೆಸಿಕೊಳ್ಳಬೇಕು, ಆದರೆ ಜನರು ಇದನ್ನು ಒಪ್ಪಲ್ಲ, ಆದರೆ ಇದೆಲ್ಲಕ್ಕಿಂತ ಮಾತನಾಡದೆ ಇರುವ ದೇವರ ದೇವಸ್ಥಾನಕ್ಕಿಂತ ಮಕ್ಕಳಿಗೆ ಶಾಲೆಗಳನ್ನು‌ ಕಟ್ಟಿಕೊಂಡರೆ ಅದು ಮಕ್ಕಳ‌ ಜೊತೆಗೆ ಗ್ರಾಮಗಳ ಅಭಿವೃದ್ದಿಗೆ ದಾರಿಯಾಗುತ್ತದೆ ಎಂದು‌ ಹೇಳಿದರು.

 

 

Leave a Reply

Your email address will not be published. Required fields are marked *