ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ?

ದೇಶ

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆ ಅರ್ಜಿ‌ ಬಂದಿತ್ತು. ಕಂದಾಯ ‌ಇಲಾಖೆ ವರದಿ ಬಂದ ಮೇಲೆ ನ್ಯಾಯ ಸಮ್ಮತವಾದ ತೀರ್ಮಾನ‌ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಡಿಯೂರಪ್ಪ ಅವರು ಮುರುಘಾ ಶ್ರೀ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರಿಗೆ ತಕ್ಕ‌ಶಿಕ್ಷೆ ಆಗಬೇಕು ಎಂದಿದದ್ದಾರೆ ಎನ್ನುವ ಪ್ರಶ್ನೆಗೆ ಸಿಎಂ ಉತ್ತರಿಸಲು ನಿರಾಕರಿಸಿ‌ ಅದು ಕೋರ್ಟ್ ಆವರಣದಲ್ಲಿ‌ ಇರುವುದರಿಂದ ಅದರ ಬಗ್ಗೆ ವ್ಯಾಖ್ಯಾನ‌ ಮಾಡುವುದಿಲ್ಲ ಎಂದರು.
ಹಿಂದೂ ವಿಚಾರಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಹಿಂದೂಗಳ ಸಂಪ್ರದಾಯ ನಂಬಿಕೆಗಳಿಗೆ ಘಾಸಿಗೊಳಿಸಿದ್ದಾರೆ. ಅದರ ಬಗ್ಗೆ ಚರ್ಚೆಯೂ ಬೇಡ ಅವರ ಕ್ಷಮೆಯೂ ಬೇಡ ಮುಂದಿನ‌ ದಿನಗಳಲ್ಲಿ ಅವರಿಗೆ ಜನತೆ ಪಾಠ ಕಲಿಸಿದ್ದಾರೆ. ಜನ ಸಂಕಲ್ಪ‌ ಯಾತ್ರೆಗೆ ಜನರೇ ಬರುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ ಮಾತಿಗೆ ತಿರುಗೇಟು ನೀಡಿದ ಸಿಎಂ ಬಂದು ನೋಡಲು ಹೇಳಿ ಅವರಿಗೇನು ಆಹ್ವಾನ ಮಾಡಬೇಕೆ ದಿನ ದಿನವೂ ಜನ ಸಂಖ್ಯೆ ಜಾಸ್ತಿಯಾಗಿದೆ.ಇದು ಮುಂದೆ ವಿಜಯ ಸಂಕಲ್ಪ ಯಾತ್ರೆ ಆಗಲಿದೆ ಎಂದು‌ ಹೇಳಿದರು. ಈ ಸಯಮದಲ್ಲಿ ಶಿಕ್ಷಣ ಸಚಿವ ನಾಗೇಶ್, ಚಿತ್ರದುರ್ಗ ಶಾಸಕ ಜಿ‌ ಹೆಚ್ ತಿಪ್ಪಾರೆಡ್ಡಿ, ಹೊಸದುರ್ಗ ಶಾಸಕ‌ ಗೂಳಿಹಟ್ಟಿ ಶೇಖರ್ ಮತ್ತಿತರರು ಇದ್ದರು.

 

 

Leave a Reply

Your email address will not be published. Required fields are marked *