ಪಕ್ಷ ಭೇದ ಮರೆತು ನಗರದ ಅಭಿವೃದ್ಧಿಗೆ ಎಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡಿ

ಜಿಲ್ಲಾ ಸುದ್ದಿ

ಪಕ್ಷ ಭೇದ ಮರೆತು ನಗರದ ಅಭಿವೃದ್ಧಿಗೆ ಎಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ನಗರಸಭೆ ಸದಸ್ಯರಿಗೆ ಸಲಹೆ ನೀಡಿದರು.

ನಗರದ ನಗರಸಭೆ ಆವರಣದಲ್ಲಿ ನೂತನ ನಗರಸಭೆ ಕೌನ್ಸಿಲ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ ನಗರಸಭೆಯಲ್ಲಿ 1.50 ಕೋಟಿ ವೆಚ್ಚದಲ್ಲಿ ನಗರಸಭೆಯ ಸಭಾಂಗಣ ನಿರ್ಮಾಣ ಮಾಡಲಾಗಿದೆ.ಸಾಮಾನ್ಯ ಸಭೆಗಳನ್ನು ಮಾಡಲು ಅಧಿಕಾರಿಗಳಿಗೆ ಮತ್ತು ಎಲ್ಲಾ ಸದಸ್ಯರಿಗೆ ಸಭೆ ನಡೆಸಲು ನೂತನ ಸಭಾಂಗಣ ಅನುಕೂಲವಾಗಲಿದೆ. ಈ ಸಭಾಂಗಣದಲ್ಲಿ ನಗರ ಅಭಿವೃದ್ಧಿ ಕುರಿತು ಸದಸ್ಯರು ಚರ್ಚೆಗಳನ್ನು ಮಾಡುವ ಮುಖಾಂತರ ನಗರ ಅಭಿವೃದ್ಧಿಗೆ ಕೆಲಸ ಮಾಡಿ ಎಂದರು.

ನಗರದಲ್ಲಿ ಸಾಕಷ್ಟು ಅನುದಾನ ತರುವ ಮೂಲಕ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪಾರ್ಕ್ ಗಳಿಗೂ ಮತ್ತು ಬೀದಿ ದೀಪಗಳಿಗೆ ಸಹ ಸಾಕಷ್ಟು ಅನುದಾನ ನೀಡಲಾಗಿದೆ. ನಗರಸಭೆ ಸದಸ್ಯರು ಅಚ್ಚುಕಟ್ಟಾಗಿ ತಮ್ಮ ವ್ಯಾಪ್ತಿಯ ವಾರ್ಡ್ ಗಳನ್ನು ನಿರ್ವಹಣೆ ಮಾಡಿ ಎಂದು ಹೇಳಿದರು.

 

 

ನೂತನವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಬೇರೆ ಹುದ್ದೆಗಳನ್ನು ಉತ್ತಮ ಕೆಲಸವನ್ನು ಮಾಡಿದ್ದಾರೆ. ಆದ ಕಾರಣ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ‌ ವರ್ಗಾವಣೆ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸಹ ಉತ್ತಮ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಮಾತನಾಡಿ ಶಾಸಕರು ಪ್ರೋತ್ಸಾಹದಿಂದ ಉತ್ತಮ ಸಭಾಂಗಣ ನಿರ್ಮಾಣವಾಗಿದೆ.ನಗರಕ್ಕೆ ನಗರಸಭೆ ಅತಿ ಮುಖ್ಯವಾದ ಕಚೇರಿ ಆಗಿದ್ದು ಸಭಾಂಗದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಚರ್ಚಿಸಿ ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತು ನೀಡಬೇಕಿದೆ‌. ನಿಗದಿತ ಸಮಯದಲ್ಲಿ ಸರ್ಕಾರ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ನಗರಸಭೆಯಲ್ಲಿ ಜನಪರ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದರು. ಚಿತ್ರದುರ್ಗಕ್ಕೆ ಇದಕ್ಕಿಂತ ಮೊದಲು ಸಾಕಷ್ಟು ಬಾರಿ ಬಂದಿದ್ದೆ ಆದರೆ 2-3 ವರ್ಷದಲ್ಲಿ ನಗರ ಸಾಕಷ್ಟು ಅಭಿವೃದ್ಧಿ ಮೂಲಕ‌ ಸುಂದರವಾಗಿದೆ.ವಿಸ್ತಾರವಾದ ರಸ್ತೆಗಳು, ಪಾರ್ಕ್ ಗಳು, ಶಾಲೆಗಳು ಉತ್ತಮವಾಗಿ ನಿರ್ಮಾಣವಾಗಿವೆ. ಮುಂದಿನ ದಿನದಲ್ಲಿ ಸಹ ಜನಸ್ನೇಹ ವ್ಯವಸ್ಥೆಗಳನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಯುಕ್ತ ಹನುಂಮತರಾಜು,ನಗರಸಭೆ ಅಧ್ಯಕ್ಷ ತಿಪ್ಪಮ್ಮ ವೆಂಕಟೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಸದಸ್ಯರಾದ ಸುರೇಶ್, ವೆಂಕಟೇಶ್, ರಮೇಶ್, ಹರೀಶ್, ಬಾಲಮ್ಮ, ಅನುರಾಧ ರವಿಕುಮರ್,ಶ್ರೀದೇವಿ ಚಕ್ರವರ್ತಿ, ಶ್ವೇತಾ ವೀರೇಶ್ ಮತ್ತು ಆರ್ಓ ಚಂದ್ರಶೇಖರ್, ಇಂಜಿನಿಯರ್ ಕಿರಣ್ ಇದ್ದರು.

ಅಂಬೇಡ್ಕರ್ ನಿಗಮದಿಂದ ಪಂಪ್ ಸೆಟ್ ವಿತರಣೆ: ನಗರಸಭೆ ಆವರಣದಲ್ಲಿ ಅಂಬೇಡ್ಕರ್ ನಿಗಮದ 31 ಫಲಾನುಭವಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಮತ್ತು ನಗರಸಭೆ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *