ಊಟ ಕೇಳಿದರೆ ಹೊಡಿತಾರೆ ಮರ್ಮಾಂಗ ಹಿಚುಕುತ್ತಾರೆ

ರಾಜ್ಯ

ಕೋಟೆ ನಾಡಿನ ಒನಕೆ ಓಬವ್ವ ಕ್ರೀಡಾ ವಸತಿ ನಿಲಯದ ಸಿಬ್ಬಂದಿಯಿಬ್ಬರು ವಸತಿ‌ನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಕೇಳಿದ ಪೋಷಕರಿಂದ ಸಿಬ್ಬಂದಿಗಳಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆಯಿತು.

 

 

ಕೋಟೆ ನಾಡು ಚಿತ್ರದುರ್ಗದ ಒನಕೆ ಓನವ್ವ ಕ್ರೀಡಾ ವಸತಿ ನಿಲಯದಲ್ಲಿ ಕ್ರೀಡಾ ವಿದ್ಯಾರ್ಥಿಗಳನ್ನು ಶಿಕ್ಷಣದ ಜೊತೆಗೆ ಕ್ರೀಡಾ ತರಬೇತಿಯನ್ನು ಕೊಡಲಾಗುತ್ತದೆ. ಇದಕ್ಕಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಮಕ್ಕಳನ್ನು ಪೋಷಕರು ಸೇರಿಸಿದ್ದಾರೆ. ಇಂತಹ ಮಕ್ಕಳಿಗೆ ಇಲ್ಲಿನ ಉದಯ್ ಮತ್ತು ವೆಂಕಟೇಶ್ ಎನ್ನುವ ಸಿಬ್ಬಂದಿಗಳು ಮಕ್ಕಳಿಗೆ ಹೊಡೆಯುವುದು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡಿದ್ದಾರೆ.‌ಇದು ಸುಮಾರು ಒಂದು ತಿಂಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಬಾಲಕರಷ್ಟೆ ಅಲ್ಲ‌ ಬಾಲಕಿಯರು ಇದ್ದಾರೆ ಇವರುಗಳ ವಿಡಿಯೋ ಮಾಡಿ ಕ್ರೀಡಾ ಅಧಿಕಾರಿಗೆ ಕಳುಹಿಸಿಕೊಡಲಾಗುತ್ತದೆ. ಮಕ್ಕಳು ಆಟವಾಡಿದರೆ, ಊಟಕ್ಕೆ ಕೇಳಿದರೆ ಟೀವಿ ನೋಡಿದರೆ ಹೊಡೆಯುತ್ತಾರಂತೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಂತೆ, ಅಷ್ಟೆ ಅಲ್ಲದೆ ಮರ್ಮಾಂಗಳನ್ನು ಹಿಜುಕುತ್ತಾರಂತೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಕ್ರೀಡಾ ಸಹಾಯಕ ಅಧಿಕಾರಿ ಮಾತ್ರ ಮಕ್ಕಳ ಗೋಳು ಕೇಳದೆ ಇರುವುದರ ಜೊತೆಗೆ ಮಕ್ಕಳ ಮೇಲ್ವಿಚಾರಕ ಬಾಬು ಅವರು ಮೊದಲೇ ದೂರು ನೀಡಿದ್ದರು, ಯಾಚುದೇ ರೀತಿಯ ಸ್ಪಂದನೆ ಮಾಡಿಲ್ಲ, ಉದಯ್ ಎನ್ನುವ ಯುವಕನನ್ನು ತಾವೇ ಕೆಲಸಕ್ಕೆ ನೇಮಿಸಿಕೊಂಡಿದ್ದು, ಇಲ್ಲಿಯೂ ಕೂಡ ಜಾತಿ ಲೆಕ್ಕಾಚಾರವ‌ನ್ನು ಅಧಿಕಾರಿ ಮಾಡಿದ್ದಾರೆ ಇದರಿಂದ ಉದಯ್ ಎನ್ನುವವನಿಗೆ ಏನೂ ಹೇಳಿಲ್ಲ, ಎಚ್ಚರಿಕೆಯನ್ನು ನೀಡಿಲ್ಲ. ಇದರಿಂದ ಪೋಷಕರ ಆಕ್ರೋಶ ಸ್ಪೋಟಗೊಳ್ಳಲು ಕಾರಣವಾಗಿತ್ರು. ಇಂದು ಘಟನೆ ನಡೆದಾಗ ಮಕ್ಕಳು ಪೋಷಕರ ಬಳಿ ಹೇಳಿಕೊಂಡು ಅಳುತ್ತಾ ನಿಂತಿದ್ದರು, ಇವರ ದೌರ್ಜನ್ಯ ತಾಳಲು ಆಗುವುದಿಲ್ಲ, ನಾವಿರಬೇಕು ಇಲ್ಲವೇ ಅವರಿರಬೇಕು ಎಂದು ಹೇಳುತ್ತಾರೆ. ಊಟ ಸರಿಯಾಗಿ ಕೊಡುವುದಿಲ್ಲ, ಕೇಳಿದರೆ ಹೆಚ್ಚು ಅಂಕಗಳನ್ನು ತೆಗೆಯಿರಿ ಆಗ ಊಟಕ್ಕೆ ಕೊಡುತ್ತೇವೆ ಎಂದು ಹೇಳುತ್ತಾರೆ ಎಂದು ಮಕ್ಕಳು ಹೇಳುತ್ತಾರೆ.‌ಇದೆಲ್ಲವನ್ನು ಕೇಳಿಸಿಕೊಂಡು ಊರುಗಳಿಂದ ಬಂದಿದ್ದ ಮಕ್ಕಳ ಪೋಷಕರು ಉದಯ್ ಮತ್ತು ವೆಂಕಟೇಶ್ ಎನ್ನುವವರನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದರು.

Leave a Reply

Your email address will not be published. Required fields are marked *