ಮಹಿಳೆಯರಿಗೆ ಸ್ತ್ರೀ ಸಾಮಥ್ರ್ಯ, ಯುವಕರಿಗೆ ಯುವ ಶಕ್ತಿ ಯೋಜನೆ ಜಾರಿ

ರಾಜ್ಯ

 ಮಹಿಳೆಯರಿಗೆ ಸ್ತ್ರೀ ಸಾಮಥ್ರ್ಯ, ಯುವಕರಿಗೆ ಯುವ ಶಕ್ತಿ ಯೋಜನೆ ಜಾರ
ಸ್ವಾವಲಂಬಿ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಮಹಿಳೆಯರಿಗಾಗಿ ಸ್ತ್ರೀ ಸಾಮಥ್ರ್ಯ ಯೋಜನೆ ಹಾಗೂ ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯನ್ನು ಬರುವ ನವೆಂಬರ್ ತಿಂಗಳಿನಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸದುರ್ಗ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ಸಾಗುವಳಿ ಪತ್ರ ಹಾಗೂ ಹಕ್ಕುಪತ್ರ, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳಲ್ಲಿ ಬಹಳ ಸಾಮಥ್ರ್ಯವಿದೆ. ಅವರ ಸಾಮಥ್ರ್ಯ ಬಳಕೆ ಮಾಡುವ ಉದ್ದೇಶದಿಂದ ಸ್ತ್ರೀಶಕ್ತಿ ಸಾಮಥ್ರ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ರಾಜ್ಯದ ಪ್ರತಿಯೊಂದು ಗ್ರಾಮದ ಎರಡು ಸ್ತ್ರೀ-ಶಕ್ತಿ ಸಂಘಗಳಿಗೆ ತಲಾ ರೂ.5ಲಕ್ಷ ನೆರವು ನೀಡುವ ಯೋಜನೆ ರೂಪಿಸಿ, ಅವರಿಂದ ಉತ್ಪಾದನೆ ಮಾಡಿಸಿ, ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಅದೇ ರೀತಿ ಯುವಕರ ಕೈಗೆ ಕೆಲಸ ನೀಡುವ ದೃಷ್ಟಿಯಿಂದ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ರಾಜ್ಯದ ಪ್ರತಿಯೊಂದು ಗ್ರಾಮದ ಎರಡು ಯುವಕ ಸಂಘಗಳಿಗೆ ತಲಾ ರೂ.5 ಲಕ್ಷ ರೂಪಾಯಿಗಳ ನೆರವು ನೀಡುವ ಯೋಜನೆಗೆ ನವೆಂಬರ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗುವುದು ಎಂದರು.
ರಾಜ್ಯದ ಅಭಿವೃದ್ಧಿ, ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು, ರಾಜ್ಯದ ಸಂಪತ್ತು ಹೆಚ್ಚಳ ಮಾಡುವ ಜೊತೆಗೆ ಸಾಮಾಜಿಕವಾಗಿ ತೀರ ಅಸಮಾನತೆ ತೊಲಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಸುಗ್ರೀವಾಜ್ಞೆಗೆ ರಾಜ್ಯಪಾಲರು ಇನ್ನೂ ಎರಡು-ಮೂರು ದಿನದಲ್ಲಿ ಅಂಕಿತ ಹಾಕಲಿದ್ದಾರೆ, ಬಳಿಕ ಇದು ಜಾರಿಗೆ ಬರಲಿದೆ. ಹೀಗಾಗಿ 50 ವರ್ಷಗಳ ಬೇಡಿಕೆ ಈಡೇರಿಸಲಾಗುತ್ತಿದೆ,. ಜನಪರ ಆಡಳಿತ ನೀಡಿ ರಾಜ್ಯವನ್ನು ಬಲಿಷ್ಟವಾಗಿಸುವುದರ ಜೊತಗೆ ದುಡಿಯುವ ವರ್ಗಕ್ಕೆ ಅವಕಾಶ ಕೊಟ್ಟು, ಎಲ್ಲರಿಗೂ ನ್ಯಾಯ ನೀಡಿ ರಾಜ್ಯವನ್ನು ಮುನ್ನೆಡೆಸಲಾಗುತ್ತಿದ್ದು, ನವ ಭಾರತದಿಂದ ನವ ಕರ್ನಾಟಕ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ತುಮಕೂರು-ದಾವಣಗೆರೆ ನೇರ ರೈಲ್ವೆ ಯೋಜನೆಯ ಭೂಸ್ವಾಧೀನಕ್ಕೆ 100 ಕೋಟಿ ರಊ. ಅಗತ್ಯವಿದೆ ಎಂಬುದಾಗಿ ತಿಳಿಸಿದ್ದು, ಕೂಡಲೆ ರೂ.100 ಕೋಟಿ ಅನುದಾನ ಒದಗಿಸುವುದರ ಜೊತೆಗೆ ಇದೇ ವರ್ಷದಲ್ಲಿ  ನೇರ ರೈಲ್ವೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಸಿಎಂ ಭರವಸೆ ನೀಡಿದರು.
ವಾಣಿ ವಿಲಾಸ ಸಾಗರ ನೀರನ್ನು ಅರ್ಥಪೂರ್ಣವಾಗಿ ಬಳಕೆ ಮಾಡಲು ವಿಶೇಷವಾದ ಯೋಜನೆ ರೂಪಿಸಲಾಗುವುದು. ಜೊತಗೆ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ರಾಷ್ಟ್ರೀಯ ಯೋಜನೆಯಾಗಲಿದ್ದು, 13 ಸಾವಿರ ಕೋಟಿ ರೂಪಾಯಿಗಳ ಅನುದಾನ ಲಭ್ಯವಾಗಲಿದೆ ಎಂದರು.
ವಾಣಿವಿಲಾಸ ಸಾಗರ ಹಿನ್ನೀರಿನಿಂದ ಬೆಳೆ ನಷ್ಟ ಅನುಭವಿಸಿರುವ ಜಮೀನುಗಳ ಸರ್ವೇ ಮಾಡಿಸಿ, ರೈತರಿಗೆ ಸರ್ಕಾರದಿಂದ  ಪರಿಹಾರ  ನೀಡಲು ಕ್ರಮ ವಹಿಸಲಾಗುವುದು. ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ರೂ. 593 ಕೋಟಿ ರೂಪಾಯಿಗಳಿಗೆ ಇತ್ತೀಚೆಗಷ್ಟೇ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ ಎಂದರು.  ಹೊಸದುರ್ಗದಲ್ಲಿನ ಹಕ್ಕಿಪಿಕ್ಕಿ, ಅಲೆಮಾರಿ ಜನಾಂಗದವರು ಶೆಡ್‍ಗಳಲ್ಲಿ ವಾಸಿಸುತ್ತಿದ್ದು, ಅವರಿಗಾಗಿಯೇ 700 ಮನೆಗಳನ್ನು ಮಂಜೂರು ಮಾಡಿ, ಈಗಾಗಲೆ ನಿರ್ಮಾಣವೂ ನಡೆಯುತ್ತಿದೆ.  ಹೊಸದುರ್ಗ ಕ್ಷೇತ್ರಕ್ಕೆ ಹೊಸದಾಗಿ 01 ಸಾವಿರ ಮಹೆಗಳನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮುಂಬೈ-ಚೆನ್ನೈ ಕೈಗಾರಿಕಾ ಕಾರಿಡಾರ್‍ನಡಿ ಚಿತ್ರದುರ್ಗ ಜಿಲ್ಲೆಯಲ್ಲಿ  ಇಂಡಸ್ಟ್ರೀಯಲ್ ಟೌನ್ ಶಿಫ್‍ಗಾಗಿ ಜಿಲ್ಲೆಯಲ್ಲಿ 1 ಸಾವಿರ ಎಕೆರೆ  ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಕೈಗಾರಿಕಾ ಕ್ರಾಂತಿ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಜನರ ಸಂಕಷ್ಟ ದೂರ ಮಾಡುವುದರಲ್ಲಿ ರಾಜಕಾರಣಿಗಳು ತಮ್ಮ ಸಾಮಥ್ರ್ಯ ತೋರಬೇಕು, ಬರೀ ಬಾಯಿ ಮಾತಿನಲ್ಲಿ ಸಾಧನೆ ತೋರುವುದಲ್ಲ, ಈ ನಿಟ್ಟಿನಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ನೀರಾವರಿ ಸೇರಿದಂತೆ ಹಲವಾರು ಅಭಿವೃದ್ಧಿಪರ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವ ಮೂಲಕ ಜನೋಪಯೋಗಿ ಶಾಸಕರಾಗಿ ಹೊರಹೊಮ್ಮಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಮಾತನಾಡಿ, ಹೊಸದುರ್ಗ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವೇ ಹರಿದಿದೆ.  ಅಭಿವೃದ್ಧಿ ಮೂಲಕ ಕ್ಷೇತ್ರದ ಶಾಸಕರು ಜನರ ಪ್ರೀತಿ ಗಳಿಸಿದ್ದಾರೆ.  ನಮ್ಮ ಸರ್ಕಾರ ಪ.ಜಾತಿಯವರಿಗೆ ಮೀಸಲಾತಿಯನ್ನು ಶೇ. 15 ರಿಂದ 17 ಕ್ಕೆ ಹಾಗೂ ಪರಿಶಿಷ್ಟ ವರ್ಗದವರಿಗೆ ಶೇ. 03 ರಿಂದ ಶೇ. 07 ಕ್ಕೆ ಹೆಚ್ಚಿಸಿ ಅವರಿಗೆ ನ್ಯಾಯ ಒದಗಿಸಿಕೊಟ್ಟಿದೆ.  ರೈತ ಶಕ್ತಿ ಯೋಜನೆಯಡಿ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣ ಬಳಸುವ ರೈತರಿಗೆ ಗರಿಷ್ಟ 5 ಎಕರೆವರೆಗೆ 1250 ರೂ. ಗಳವರೆಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ, ಅಲ್ಲದೆ ಹನಿ ನೀರಾವರಿ ಉಪಕರಣಗಳಿಗೂ ಸಬ್ಸಿಡಿ ನೀಡುತ್ತಿದ್ದೇವೆ.  ರೈತರ ಮಕ್ಕಳಿಗಾಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ ಕಳೆದ ವರ್ಷ ರಾಜ್ಯದ 14 ಲಕ್ಷ ಮಕ್ಕಳಿಗೆ ರೂ.639 ಕೋಟಿ ನೀಡಲಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಇದರಿಂದ 6 ಲಕ್ಷ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.  ರೈತಶಕ್ತಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ರೈತರಿಗೆ ಡೀಸೆಲ್ ಸಬ್ಸಿಡಿ ದೊರೆಯಲಿದೆ. ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲಸ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾನಿಯಾದ ಜಿಲ್ಲೆಯ ರೈತರಿಗೆ ಈವರೆಗೆ 99.23 ಕೋಟಿ ಪರಿಹಾರ ನೀಡಲಾಗಿದೆ ಎಂದರು.
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಿಯುಗದ ಹಾಗೂ ಆಧುನಿಕ ಬಸವಣ್ಣನವರಾಗಿದ್ದಾರೆ.  ಹಿಂದೆಂದೂ ನೀಡದಷ್ಟು ಅನುದಾನವನ್ನು ಕ್ಷೇತ್ರಕ್ಕೆ ಒದಗಿಸಿದ್ದಾರೆ.   ಹೊಸದುರ್ಗ-ಹೊಳಲ್ಕೆರೆ ಚತುಷ್ಪಥ ರಸ್ತೆಯನ್ನಾಗಿಸಲು 110 ಕೋಟಿ ರೂ. ಅನುದಾನ ಒದಗಿಸಲಾಗಿದೆ,  ಟೆಂಟ್‍ಗಳಲ್ಲಿ ವಾಸಿಸುವ ಹಕ್ಕಿಪಿಕ್ಕಿ, ಅಲೆಮಾರಿ ಜನಾಂಗದವರಿಗೆ 700 ಮನೆಗಳನ್ನು ಮಂಜೂರು ಮಾಡಿದ್ದು, 600 ನಿವೇಶನಗಳನ್ನು ಒದಗಿಸಲಾಗಿದೆ.  ಹೊಸದುರ್ಗ ತಾಲ್ಲೂಕಿನ ಇಂಡಿದೇವರಹಟ್ಟಿಯಲ್ಲಿ ರೂ.136 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಪ್ರಾರಂಭಿಸಲಾಗಿದ್ದು, ಇದರಿಂದ ಕಸಬ, ಮಾಡದಕರೆ ಹಾಗೂ ಮತ್ತೋಡು ಹೋಬಳಿಗಳಿಗೆ ಅನುಕೂಲವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, 1500 ಕೋಟಿ ರೂ. ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಜಮೀನುಗಳಿಗೆ ನೀರೊದಗಿಸುವ ಕಾಮಗಾರಿ ಈಗಾಗಲೆ ಪ್ರಾರಂಭವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ, ಉಪವಿಭಾಗಾಧಿಕಾರಿ ಚಂದ್ರಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 02 ಕೋಟಿ ರೂ. ವೆಚ್ಚದಲ್ಲಿ ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, 94 ಸಿಸಿ, 94 ಸಿ ಹಾಗೂ ಬಗರ್‍ಹುಕುಂ ಸಾಗುವಳಿ ಚೀಟಿ ವಿತರಣೆ, ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು.

 

 

Leave a Reply

Your email address will not be published. Required fields are marked *