ದೇಶದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಬದಲಾವಣೆಗೆ ಮತ್ತು ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಇವರು ಸಮಾಜಕ್ಕೆ ಕೊಡುತ್ತಿರುವ ಸೇವೆ ಅನುಕರಣಿ ಯವಾದುದಂತದ್ದು, ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯ ಪಾನನಿರೋಧ ಮತ್ತು ನೈರ್ಮಲೀಕರಣದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಇವುಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತದೆ. ಸರ್ಕಾರಿ ಆಡಳಿತದ ವ್ಯವಸ್ಥೆಯಲ್ಲೂ ಕೂಡ ನಾವೆಲ್ಲಾ ಅಧಿಕಾರಿಗಳು ಕೂಡ ಇವರ ಜೊತೆಯಲ್ಲಿ ಕೈಜೋಡಿಸಿದರೆ ಮಹಾತ್ಮ ಗಾಂಧೀಜಿಯವರು ಕಂಡಂತ ರಾಮ ರಾಜ್ಯದ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಗಾಂಧಿ ಸ್ಮೃತಿ ಮತ್ತು ಮಧ್ಯ ಮುಕ್ತ ಕರ್ನಾಟಕ ಎಂಬ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು, ಸಮಾಜದಲ್ಲಿ ಅದೆಷ್ಟೋ ಉಳ್ಳವರಿದ್ದಾರೆ ಇವರುಗಳು ತಮ್ಮ ದುಡಿಮೆಯಲ್ಲಿ ಶೇಕಡ 2 ರಿಂದ 3 ರಷ್ಟು ಸಮಾಜಕ್ಕೆ ದಾನ ಮಾಡುವವರು ಇದ್ದಾರೆ ಇವರುಗಳನ್ನು ಪ್ರೇರೇಪಣೆಗೊಳಿಸುವ ಕೆಲಸವನ್ನು ಸಮಾಜದಲ್ಲಿರುವ ನಾವೆಲ್ಲರೂ ಕೂಡ ಮಾಡಬೇಕು ನವ ಭಾರತ ನಿರ್ಮಾಣಕ್ಕಾಗಿ ಶೋಷಿತರ ದಿನ ದಲಿತರ ಮತ್ತು ಅಸಹಾಯಕರ ಪರವಾಗಿ ನಾವು ಕೆಲಸ ಮಾಡಿದಾಗ ಮಾತ್ರ ನಿಜವಾದ ಸಮಾಜದ ಬದಲಾವಣೆ ಸಾಧ್ಯ ಎಂದು ಹೇಳಿದರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಮಾತನಾಡಿ ಈ ಸಂಸ್ಥೆಯು ನಿರಂತರ ಇಪ್ಪತೈದು ವರ್ಷದಿಂದ ಮಧ್ಯ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಲಾಗಿದೆ ಸಂಸ್ಥೆಯ ವತಿಯಿಂದ ಪರಿಣಾಮಕಾರಿ ಆದ ಅಭಿವೃದ್ಧಿ ಕೆಲಸಗಳು ಮತ್ತು ಸಾಮಾಜಿಕ ಕೆಲಸಗಳನ್ನು ನಿರ್ವಹಿಸಲಾಗಿದೆ ಉದಾತ್ತ ಚಿಂತನೆಗಳೊಂದಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ ಈ ಕುಟುಂಬದಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಕೂಡ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗುವಂತೆ ಪೋಷಕರು ಅಣಿಗೊಳಿಸಬೇಕೆಂದು ಮನವಿ ಮಾಡಿದರು ಸಮಾರಂಭದಲ್ಲಿ ಜನಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಷಡಕ್ಷರಪ್ಪ ಪ್ರಾದೇಶಿಕ ನಿರ್ದೇಶಕರಾದ ಜನಾರ್ಧನ್ ಆರಕ್ಷಕ ಉಪನಿರೀಕ್ಷಕ ಶಿವರಾಜ್ ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು