ಸಂತ್ರಸ್ತರಿಗೆ ₹ 1.36ಕೋಟಿ ಪರಿಹಾರ : ಶಾಸಕಿ ಪೂರ್ಣಿಮಾ ಶ್ರೀನಿವಾಸ್

ರಾಜ್ಯ

ಸಂತ್ರಸ್ತರಿಗೆ ₹ 1.36ಕೋಟಿ ಪರಿಹಾರ : ಶಾಸಕಿ ಪೂರ್ಣಿಮಾ ಶ್ರೀನಿವಾಸ್

 

 

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ
ಕುಟುಂಬಗಳಿಗೆ 1ಕೋಟಿ36ಲಕ್ಷ ರೂ ಪರಿಹಾರವಿತರಣೆ

ಹಿರಿಯೂರು ತಾಲ್ಲೂಕಿನಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ಮನೆಹಾನಿ, ದವಸಧಾನ್ಯ, ದೈನಂದಿನ ವಸ್ತುಗಳು ಸೇರಿದಂತೆ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಒಟ್ಟು 1 ಕೋಟಿ 36 ಲಕ್ಷ 50 ಸಾವಿರ ರೂಗಳ ಪರಿಹಾರವನ್ನು ತಹಶೀಲ್ದಾರ್ ಕಚೇರಿಯಿಂದ ನೇರವಾಗಿ ವಿತರಿಸಲಾಗಿದೆ ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.
ತಾಲ್ಲೂಕಿನಲ್ಲಿ ಮನೆಯಿಂದ ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ ಬಿ2 ಕೆಟಗರಿಗೆ-1 ಮನೆಗೆ 5 ಲಕ್ಷ ರೂಗಳು, ಬಿ1 ಕೆಟಗರಿಯ 3 ಮನೆಗಳಿಗೆ ತಲಾ 3ಲಕ್ಷ ರೂಗಳು, ಸಿ ಕೆಟಗರಿಯ 250 ಮನೆಗಳಿಗೆ ತಲಾ 50 ಸಾವಿರ ರೂಗಳಂತೆ 1 ಕೋಟಿ 28ಲಕ್ಷದ 50 ಸಾವಿರ ರೂಗಳು ಒಟ್ಟು 1 ಕೋಟಿ 36 ಲಕ್ಷದ 50 ಸಾವಿರ ರೂಗಳು ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವಿತರಿಸಲಾಗಿದೆ.
ಇದೇ ಸಂದರ್ಭದಲ್ಲಿ ಅತಿಹೆಚ್ಚು ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯ ಸೇರಿದಂತೆ ದೈನಂದಿನ ವಸ್ತುಗಳು ಹಾನಿಗೊಳಗಾಗಿರುವ ಸುಮಾರು 99 ಕುಟುಂಬಗಳಿಗೆ ತಲಾ 10 ಸಾವಿರ ರೂಗಳಂತೆ ಒಟ್ಟು 9 ಲಕ್ಷ 90 ಸಾವಿರ ರೂಗಳನ್ನು ನೊಂದ ಫಲಾನುಭವಿ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಹೇಳಿದರು.
ತಾಲ್ಲೂಕಿನಲ್ಲಿ ಸುಮಾರು 16.487 ಹೆಕ್ಟೇರ್ ನಲ್ಲಿನ ಕೃಷಿ ಬೆಳೆಗಳು ಹಾಗೂ ಸುಮಾರು 2.265 ಹೆಕ್ಟೇರ್ ನಲ್ಲಿನ ತೆಂಗು, ಅಡಿಕೆ, ಬಾಳೆ, ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಶೇಂಗಾ, ಈರುಳ್ಳಿ ಕೃಷಿ ಬೆಳೆಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದು, ಪ್ರತಿ ಹೆಕ್ಟೇರ್ ಗೆ 13 ಸಾವಿರದ 600 ರೂಗಳಂತೆ ಸುಮಾರು 18 ಕೋಟಿ ರೂಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂಬುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ್ ಗೌಡ ಪಾಟೀಲ್ ಮಾತನಾಡಿ, ಕೃಷಿಕರ ಬ್ಯಾಂಕ್ ಖಾತೆಗಳಿಗೆ ವಿತರಿಸುವ ಬೆಳೆ ಪರಿಹಾರ ಹಣವನ್ನು ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ರೈತರ ಬೇರೆಬೇರೆ ಬ್ಯಾಂಕ್ ಸಾಲದ ಖಾತೆಗೆ ಅಡ್ಜೆಸ್ಟ್ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಬಂದಿದ್ದು, ಇದರಿಂದ ಕೃಷಿಕರಿಗೆ ತೊಂದರೆಯಾಗುತ್ತಿದ್ದು, ಯಾರೂ ಸಹ ಸರ್ಕಾರದ ಈ ಬೆಳೆಪರಿಹಾರದ ಹಣವನ್ನು ಬ್ಯಾಂಕ್ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಾರದು ಎಂಬುದಾಗಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *