ವಿವಾದಿತ ರಸ್ತೆ ಒತ್ತುವರಿ ತೆರವುಗೊಳಿಸಿದ ತಹಶೀಲ್ದಾರ್ ರಘುಮೂರ್ತಿ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿ ಚೆಲ್ಲೂರು ಗ್ರಾಮದ 88, 17 ಕೊನಿಗರಹಳ್ಳಿ 3 ರಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ರಘುಮೂರ್ತಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸರ್ವೇ ರವರಿಂದ ನಕಾಶ ಕಂಡ ದಾರಿ ಅಳತೆ ಮಾಡಿಸಿ ನಕಾಶ ಕಂಡ ಒತ್ತುವರಿಯನ್ನು ತೆರವುಗೊಳಿಸಿದರು.
ನಂತರ ಮಾತನಾಡಿದ ಅವರು, ಒತ್ತುವರಿ ಸ್ವರೂಪವನ್ನು ಗ್ರಾಮಸ್ಥರಿಗೆ ತಿಳಿಸಿ ಸರ್ಕಾರಿ ಸ್ವಾಮ್ಯದ ಕಾಲುದಾರಿ ಕಳ್ಳ ಕರಾಬು ಮತ್ತ ರಾಜು ಕಾಲುವೆ ಮುಂತಾದ ಸ್ವತ್ತುಗಳನ್ನು ಯಾರೂ ಕೂಡ ಒತ್ತುವರಿ ಮಾಡಬಾರದು ಎಂದು ತಿಳಿ‌ಹೇಳಿದರು.
ಪ್ರತಿಯೊಂದು ಗ್ರಾಮಗಳು ವಿವಾದಗಳಿಂದ ಮುಕ್ತವಾದಾಗ ಮಾತ್ರ ನ್ಯಾಯಾಲಯಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಹೊರೆ ಕಮ್ಮಿಯಾಗುತ್ತದೆ ಪ್ರತಿಯೊಂದು ಸಣ್ಣ ಪುಟ್ಟ ವಿವಾದಗಳಿಗೂ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳ ಮೊರೆ ಹೋಗುವುದನ್ನು ಸಾರ್ವಜನಿಕರು ಬಿಡಬೇಕು ಗ್ರಾಮ ಮಟ್ಟದಲ್ಲಿ ರಾಜಿ ಮುಖಾಂತರ ಕೆಲವೊಂದು ಸಿವಿಲ್ ಸ್ವರೂಪದ ವಿವಾದಗಳನ್ನು ಬಗೆಹರಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಈಗಾಗಲೇ ರೈತರು ಬೆಳೆ ನಷ್ಟ ಮತ್ತು ಬೆಲೆ ಏರುಪೇರಿಂದ ಐರಾಣಾಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗೆ ಹೋದರೆ ಮತ್ತಷ್ಟು ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಆದುದರಿಂದ ಪ್ರತಿಯೊಬ್ಬ ಸಾರ್ವಜನಿಕರು ಮಾನವೀಯತೆ ಮತ್ತು ಅಂತಕರಣದಿಂದ ಪುಟ್ಟ ವಿವಾದಗಳಿಗೆ ಗಂಭೀರ ಸ್ವರೂಪ ನೀಡದೆ ಗ್ರಾಮಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕೆಂದರು. ತಾಸಿಲ್ದಾರ್ ಎನ್ ರಘುಮೂರ್ತಿ ಮನವಿ ಮಾಡಿದರು ಸರ್ಜಾರಿ ಸ್ವತ್ತುಗಳನ್ನು ಯಾವುದೇ ಕಾರಣಕ್ಕೂ ಸ್ವಾರ್ಥಕ್ಕೋಸ್ಕರ ಉಪಯೋಗಿಸಿಕೊಳ್ಳಕೂಡದು ರೈತನಿಗೂ ಮತ್ತು ಈ ಸ್ವತ್ತುಗಳಿಗೂ ಭಾವನಾತ್ಮಕವಾದ ಸಂಬಂಧವಿದೆ ನಿಯಮಾವಳಿಗಳಲ್ಲಿ ಕೂಡ ಈ ಸ್ವತ್ತುಗಳನ್ನು ಅತಿಕ್ರಮಿಸಕೂಡದೆಂದು ನಿರ್ದೇಶನ ಇದೆ ಇದರ ನಿಯಮಾವಳಿಗನುಸಾರವಾಗಿ ಕಾನೂನಿನ ಕ್ರಮ ಕೈಗೊಳ್ಳುವ ಬದಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಪರಿಪಾಠವನ್ನು ಕಂದಾಯ ಇಲಾಖೆಮೈಗೂಡಿಸಿಕೊಂಡಿದೆ ಇದರ ಅನುಸಾರ ಈಗಾಗಲೇ 48 ಗ್ರಾಮಗಳಲ್ಲಿಸಾರ್ವಜನಿಕರ ಮನವೊಲಿಸಿ ದಾರಿಗಳನ್ನು ಬಿಡಿಸಲಾಗಿದೆ. ಹಾಗಾಗಿಯಾವುದೇ ಸಾರ್ವಜನಿಕರು ಕಾನೂನನ್ನುಕೈಗೆತ್ತಿಕೊಳ್ಳದೆ ಅತಿಕ್ರಮಿಸಿಕೊಂಡಿರುವ ಇಂತಹ ಸ್ವತ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿ ಸಹಬಾಳ್ವೆಗೆ ದಾರಿಯಾಗಬೇಕು ಎಂದರು. ಅದರಂತೆ ಅತಿಕ್ರಮಿಸಿಕೊಂಡಂತ ಮೂರು ಸ್ವತ್ತುಗಳನ್ನು ಸರ್ಕಾರಕ್ಕೆ ಮುಕ್ತಗೊಳಿಸಿದರು ಈ ಸಂದರ್ಭದಲ್ಲಿ ತಾಲೂಕ್ ಸರ್ವೇಯರ್ ಪ್ರಸನ್ನ ಕುಮಾರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *