BREAKING NEWS
ಕಾಂಗ್ರೆಸ್ ಅಧ್ಯಕ್ಷೀಯ ಹುದ್ದೆಗೆ ನಾಯಕ ಖರ್ಗೆ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಅಂತಿಮ ಸಭೆ ನಡೆಸಲಿದ್ದಾರೆ. ಅಧ್ಯಕ್ಷೀಯ ಸ್ಥಾನ ಚುನಾವಣೆಯಲ್ಲಿ ಶಶಿ ತರೂರ್ ಮತ್ತು ದಿಗ್ಚಿಜಯ ಸಿಂಗ್ ಜೊತೆಗೆ ಖರ್ಗೆ ಮೂರನೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.