ಹೊಸ ಸಂತೇ ಮೈದಾನದಲ್ಲಿ ಮನೆ ನಿರ್ಮಾಣಕ್ಕೆ ಹಣ ಬಂದಿದೆ: ಶಾಸಕ ತಿಪ್ಪಾರೆಡ್ಡಿ

ಜಿಲ್ಲಾ ಸುದ್ದಿ

 ಹೊಸಸಂತೆ ಮೈದಾನ ಸೇರಿ ಘೋಷಣೆಯಾದ  ಎಲ್ಲಾ  ಸ್ಲಂ ಗಳಲ್ಲಿ 2300 ಮನೆ ‌ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಹೊಸಸಂತೆ ಮೈದಾನ ಬಡಾವಣೆಯಲ್ಲಿ  ಕೊಳಚೆ ಪ್ರದೇಶದ 92 ನಿವಾಸಿಗಳಿಗೆ  ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಸುಮಾರು 30-40 ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ  ಜನರಿಗೆ ಹಕ್ಕಪತ್ರ ಮತ್ತು ಖಾತೆಗಳು ಆಗಿರಲಿಲ್ಲ. ಅಂತಹ ನಗರದ ಎಲ್ಲಾ ಕೊಳಚೆ ಪ್ರದೇಶಗಳನ್ನು ಗುರುತಿಸಿ ಸ್ಲಂ ಬೋರ್ಡ್ ನಿಂದ ಘೋಷಣೆ ಮಾಡಿದ್ದೇವೆ.
ನಗರದಲ್ಲಿ ಮನೆಗಾಗಿ  18 ಸಾವಿರ ಅರ್ಜಿಗಳು ಬಂದಿದ್ದು 8 ಸಾವಿರ ಮನೆ ಇರುವವರೆ ಮರಳಿ  ಅರ್ಜಿ ಸಲ್ಲಿಸಿರುವುದನ್ನು ನಗರದಾದ್ಯಂತ ಹುಡುಕಿ ವಿಲೇವಾರಿ ಮಾಡಲಾಗಿದೆ.
ಕಾವಡಿಗರಹಟ್ಟಿ, ಸಿ.ಕೆ.ಪುರ, ಜೆ.ಜೆ.ಹಟ್ಟಿ, ಜಟ್ ಪಟ್ ನಗರ,ಸ್ವಾಮಿ ವಿವೇಕಾನಂದ ನಗರ, ವೆಂಕಟೇಶ್ ಬಡಾವಣೆ, ಹಿಮ್ಮತ್ ನಗರ ಸೇರಿ ಅನೇಕ ಸ್ಲಂ ಗಳು ಎಂದು ಘೋಷಣೆ ಮಾಡಲಾಗಿದೆ ಎಂದರು.
ಹೊಸಸಂತೆ ಮೈದಾನದಲ್ಲಿ 105 ಮನೆಗಳು ಜಿ ಪ್ಲಸ್ 2 ನಿರ್ಮಾಣಕ್ಕೆ ಹಣ ಬಂದಿದೆ. ಸ್ಥಳಾವಕಶ
ಗುರುತಿಸಿ ಎಲ್ಲಾರೂ ಒಗ್ಗಟ್ಟಿನಿಂದ ಸ್ಥಳ ನಿಗದಿ ಮಾಡಿದರೆ ಮನೆ ನಿರ್ಮಾಣ ಮಾಡಲಾಗುತ್ತದೆ.
ಸ್ಲಂ ಬೊರ್ಡ್ ನಿಗದಿಯಂತೆ  ಎಸ್ಸಿ ಮತ್ತು ಎಸ್ಟಿ ಜನಾಂಗದವರು 75 ಸಾವಿರ, ಇತರೆ ಜನಾಂಗದವರು  1 ಲಕ್ಷ 10 ಸಾವಿರ  ವಂತಿಕೆಯನ್ನು  ಎಲ್ಲಾ ಅರ್ಹ ಫಲಾನುಭವಿಗಳು ಕಟ್ಟಬೇಕು ಎಂದರು.
ನಗರದ ಎಲ್ಲಾ ಮನೆಗಳಿಗೆ   24 /7   ಗಂಟೆಗಳ ಕಾಲ  ನೀರಿನ ಸಂಪರ್ಕ  ಮತ್ತು ಪ್ರತಿ ಮನೆಗೆ ಪೈಪ್ ಲೈನ್ ಮೂಲಕ  ಗ್ಯಾಸ ಸಂಪರ್ಕವನ್ನು  ಒಂದೆರಡು ವರ್ಷಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಮನೆಗಳಿಗೆ ಒದಗಿಸಿ ಮೀಟರ್ ಅಳವಡಿಸಲಾಗಿದೆ.ನಗರದಲ್ಲಿ  ಸ್ಥಳದ ಕೊರತೆ ಇದ್ದು ಸಾರ್ವಜನರ ಬಳಿ ಸ್ಥಳ  ಇದ್ದರೆ ಮನೆ ಕಟ್ಟಲು ಕೂಡಲೇ ಮನೆ ಕಟ್ಟಬಹದು  ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಮಂಜುಳ ವೇದಾ ಪ್ರಕಾಶ್, ನಗರಸಭೆ ಸದಸ್ಯರಾದ ಸರ್ದಾರ್ ಅಹಮ್ಮದ್ ಪಾಷಾ, ಸುರೇಶ್,ಹರೀಶ್, ಶ್ವೇತಾ ವೀರೇಶ್,
ನಗರಸಭೆ ಆಯುಕ್ತ ಸಿ.ವಾಸಿಂ,
ಮುಖಂಡರಾದ ರವಿಕುಮಾರ್, ಪರಮೇಶ್, ದಾವೂದ್  ಮತ್ತು ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *