ಗೌರಸಮುದ್ರ ಮಾರಮ್ಮನ ಕಾಣಿಕೆ ಹುಂಡಿ ಎಣಿಕೆ 27 ಲಕ್ಷ ಕಾಣಿಕೆ ಸಂಗ್ರಹ: ತಹಶೀಲ್ದಾರ್ ರಘುಮೂರ್ತಿ

ರಾಜ್ಯ

ಚಳ್ಳಕೆರೆ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆ ಹಾಗೂ ಇತ್ತೀಚಿನ ದಿನಗಳಲ್ಲಿ ಸಂಗ್ರಹವಾಗಿದ್ದ ದೇವಿಯ ಕಾಣಿಕೆ ಹುಂಡಿಗಳನ್ನು ಒಡೆದು ಏಣಿಕೆ ಮಾಡಲಾಗಿದ್ದು, 27, 7,110 ರೂಗಳು ಸಂಗ್ರಹವಾಗಿದೆ,ಜಗನ್ಮಾತೆ ಗೌರ ಸಮುದ್ರ ಮಾರಮ್ಮ ದೇವಿಯ ತಿಂಗಳ ಪೂಜೆಯ ಮರಿ ಪರಿಷೆ ಯಾವುದೇ ವಿಜ್ಞಗಳಿಲ್ಲದಂತೆ ಸಾಂಗವಾಗಿ ಸಾಗಿದೆ ಬರುವ ಭಕ್ತಾದಿಗಳೆಲ್ಲರೂ ಕೂಡ ಭಕ್ತಿ ಮತ್ತು ಭಾವದಲ್ಲಿ ದೇವಿಯ ಅನುಗ್ರಹ ಪಡೆದಿದ್ದಾರೆ ದೇವಿಯ ಕೃಪೆಯಿಂದ ಈ ವರ್ಷ ಈ ನಾಡಿನಲ್ಲಿ ಸಮೃದ್ಧವಾದಂತ ಮಳೆ ಬೆಳೆ ಆಗಿದೆ ಎಂದು‌ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.ಅವರು ಕಾಣಿಕೆ ಹುಂಡಿ‌ ಎಣಿಕೆಯ ನಂತರ   ಮಾತನಾಡಿದರು.ದೇವಿಯನ್ನು ಅರಸಿ ಬರುವಂತಹ ಭಕ್ತರ ಅಭಿಕ್ಷೆಗಳನ್ನು ಈಡೇರಿಸುವಂತಹ ಜಗನ್ಮಾತೆ ಗೌರಸಮುದ್ರ ಮಾರಮ್ಮ ದೇವಿಯ ಮರು ಪರೀಶೆ ಇಂದು ನಡೆದಿದ್ದು ಲಕ್ಷಾಂತರ ಭಕ್ತರು ಭಕ್ತಿ ಭಾವ ಪರವಶರಾಗಿ ಆರಾಧ್ಯ ದೇವಿಯ ದರ್ಶನ ಪಡೆದರು, ಇಂದು ಬೆಳಗ್ಗೆ 8 ಗಂಟೆಯಿಂದಲೇ ಸಾಗರೋಪಾದಿಯಲ್ಲಿ ಆಂಧ್ರಪ್ರದೇಶದ ಗಡಿ ಮತ್ತು ರಾಜ್ಯದ ಮೂರು ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ಭಕ್ತಿ ಭಾವ ಪರವಶರಾಗಿ ದೇವಿಯ ದರ್ಶನ ಪಡೆದು ಸಾಗರೋಪಾದಿಯಲ್ಲಿ ತುಮಲಿಗೆ ಆಗಮಿಸಿ ಜಗನ್ಮಾತೆಯ ದರ್ಶನ ಪಡೆದರು ಯಾವುದೇ ಪೊಲೀಸ್ ಪಹರೆ ಇಲ್ಲದಿದ್ದರೂ ಕೂಡ ಅಚ್ಚುಕಟ್ಟಾಗಿ ಸರದಿಯಲ್ಲಿ ನಿಂತು ದೇವಿಯ ಕೃಪೆಗೆ ಪಾತ್ರರಾದರು, ಇನ್ನು ಕಂದಾಯ ಇಲಾಖೆಯ ತಾಲೂಕಿನ ಎಲ್ಲ ಸಿಬ್ಬಂದಿಗಳು ಕೂಡ ಹಾಜರಾಗಿದ್ದರು. ಇದೇ ಆರಕ್ಷಕ ಉಪನಿರೀಕ್ಷಕರಾದ ಮಾರುತಿ ಉಪತಾಶಿಲ್ದಾರ್ ಅಬ್ದುಲ್ ಅಜೀದ್ ರಾಜ್ಯಸ್ವಾನಿ ರಿಕ್ಷಕ ತಿಪ್ಪೇಸ್ವಾಮಿ ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *