ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದಲ್ಲಿ ಸೆ.26 ರಿಂದ ಅ.5 ರವರೆಗೆ ಶರನ್ನವರಾತ್ರಿ ಉತ್ಸವ

ರಾಜ್ಯ

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯಲ್ಲಿರುವ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದಲ್ಲಿ ಸೆ.26 ರಿಂದ ಅ.5 ರವರೆಗೆ ಶರನ್ನವರಾತ್ರಿ ಉತ್ಸವ ಪ್ರತಿದಿನ ಸಂಜೆ ಆರರಿಂದ ಏಳು ಗಂಟೆಯತನಕ ನಡೆಯಲಿದೆ.
ಪ್ರತಿದಿನ ಪ್ರಾತಃಕಾಲ 8-30 ರಿಂದ ಸಂಕಲ್ಪ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಸೂರ್ಯ ಸಮಸ್ಕಾರ, 12-30 ಕ್ಕೆ ಮಹಾಮಂಗಳಾರತಿ. ಪ್ರತಿದಿನ ಸಾಯಂಕಾಲ ಭಜನೆ, ಸೌಂದರ್ಯ ಲಹರಿ ಪಾರಾಯಣ ನಂತರದ ಕಾರ್ಯಕ್ರಮಗಳು ನೆರವೇರಲಿದೆ.
ಲಲಿತಾ ಸಹಸ್ರನಾಮ, ಅರ್ಚನೆ, ಅಷ್ಟಾವಧಾನ ಸೇವೆ, ರಾತ್ರಿ 8-30 ಕ್ಕೆ ಮಹಾಮಂಗಳಾರತಿ. ಸೆ.2 ರ ಭಾನುವಾರ ಸಪ್ತಮಿಯ ದಿನದಂದು ಮೂಲಾ ನಕ್ಷತ್ರವು ದಿನವಿಡಿ ಇರುವುದರಿಂದ ಶಾರದಾ ಸನ್ನಿಧಿಯಲ್ಲಿ ಎರಡು ವರ್ಷ ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುವುದು. 3 ರ ದುರ್ಗಾಷ್ಠಮಿಯಂದು ಪ್ರಾತಃಕಾಲ 8-30 ರಿಂದ ಚಂಡಿಕಾ ಹೋಮ ಆರಂಭಗೊಂಡು ಮಧ್ಯಾಹ್ನ 1-30 ಕ್ಕೆ ಪೂರ್ಣಾಹುತಿ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ. 27 ರ ಇಂದು ಬ್ರಹ್ಮ ಚೈತನ್ಯ ಮಹಿಳಾ ಮಂಡಳಿಯಿಂದ ಭಜನೆ, 28 ರಂದು ಸಪ್ತಗಿರಿ ಮಹಿಳಾ ಮಂಡಳಿಯಿಂದ ಭಜನೆ, 29 ರಂದು ಸತ್ಯಬೋಧ ಭಕ್ತ ಮಂಡಳಿಯಿಂದ ಭಜನೆ, 30 ರಂದು ಶಂಕರಲಿಂಗ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಸೆ.1 ರಂದು ವಿದೂಷಿ ಮೀನಾಕ್ಷಿ ಭಟ್ ಮತ್ತು ಸಂಗಡಿಗರಿಂದ ಸೌಂದರ್ಯ ಲಹರಿ ಪಾರಾಯಣ ಮತ್ತು ಭಕ್ತಿಗೀತೆಗಳ ಗಾಯನ, 2 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಜೆ 5-30 ರಿಂದ 8-30 ರವರೆಗೆ ಶಾರದಾ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ. ಶಾರದ ಶಂಕರ ಭಕ್ತ ಮಂಡಳಿಯಿಂದ ಭಜನೆ. 3 ರಂದು ಪ್ರಾತಃಕಾಲ 8-30 ರಿಂದ ಚಂಡಿಕಾ ಹೋಮ, 1-30 ಕ್ಕೆ ಪೂರ್ಣಾಹುತಿ, ನಂತರ ತೀರ್ಥಪ್ರಸಾದ ವಿನಿಯೋಗ.
ಸಂಜೆ 6 ಕ್ಕೆ ಶೈಲಜಾ ಸುದರ್ಶನ್ ನೇತೃತ್ವದಲ್ಲಿ ಸೌಂದರ್ಯ ಲಹರಿ ಪಾರಾಯಣ. 4 ರಂದು ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ. 5 ರಂದು ಸಂಜೆ 6-30 ಕ್ಕೆ ಮಠದಲ್ಲಿ ಬನ್ನಿಪೂಜೆ.
ಸಚ್ಚಿದಾನಂದ ಪಾಲುಕೇಶ್ವರ ಭಾರತಿ ಮಹಾಸ್ವಾಮಿಗಳವರ ಹಾಗೂ ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ನಡೆಯುವ ಶರನ್ನವರಾತ್ರಿ ಉತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ ಅರ್ಪಿಸಿ ದೇವಿ ಕೃಪೆಗೆ ಪಾತ್ರರಾಗುವಂತೆ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ವ್ಯವಸ್ಥಾಪಕರು ವಿನಂತಿಸಿದ್ದಾರೆ.

 

 

Leave a Reply

Your email address will not be published. Required fields are marked *