ದಾರಿ ವಿವಾದ ಬಗೆಹರಿಸಿ ವಿವಾದ ಹುಟ್ಟು ಹಾಕಿದವರಿಗೆ ಚಾಟಿ‌ ಬೀಸಿದ ತಹಶೀಲ್ದಾರ್

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನ ದಾರಿ ವಿವಾದ ಸ್ಮಶಾನ ಮುಂತಾದ ಯಾವುದೇ ಸಮಸ್ಯೆಗಳು ಬಂದಲ್ಲಿ ಪರಸ್ಪರ ಸಮನ್ವಯ ಮಾಡಿಕೊಂಡು ಯಾವುದೇ ಗಲಭೆ ಅಥವಾ ಹಿಂಸೆ ಉಂಟಾಗದಂತೆ ಅನ್ಯೂನ್ಯವಾಗಿ ಬಗೆಹರಿಸಿಕೊಳ್ಳಬೇಕೆಂದು ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಮನವಿ ಮಾಡಿದರು. ಕಾಲ್ವೇಹಳ್ಳಿ ಗ್ರಾಮದ ಸರ್ವೆ ನಂಬರ್ 195ರಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದ ಸಮಸ್ಯೆಗೆ ಕುರಿತಂತೆ ಇಂದು ಗ್ರಾಮಕ್ಕೆ ರಾಜಸ್ವ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿ ಮತ್ತು ತಾಲೂಕು ಸರ್ವೆಯರ್ ಅವರೊಂದಿಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಉಭಯ ನಾಗರೀಕರನ್ನು ಕರೆಸಿ ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ರೈತರಿಗೆ ಮತ್ತು ಸಾರ್ವಜನಿಕರಿಗೆ ನಮ್ಮ ಜಮೀನಿನಲ್ಲಿ ಓಡಾಡುವ ದಾರಿ ಕುರಿತಂತೆ ಭಾವನಾತ್ಮಕವಾದ ಸಂಬಂಧವಿದೆ ಕೆಲವೊಂದು ಸರ್ವೇ ನಂಬರ್ ಗಳಲ್ಲಿ ನಕಾಶ ಕಂಡ ದಾರಿ ಇದೆ ಕೆಲವೊಂದು ಸರ್ವೆ ನಂಬರ್ ಗಳಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದಂತಹ ಕರಾಬು ಜಮೀನಿರುತ್ತದೆ ರೈತನಿಗೆ ಅರಿವಿಲ್ಲದೆ ಇಂತಹ ಸರ್ಕಾರಿ ಬಾಬತ್ತಿನ ಜಮೀನುಗಳು ನನ್ನ ಇಳುವಳಿ ಜಮೀನಿನಲ್ಲಿ ಸೇರಿಕೊಂಡಿರುತ್ತವೆ ಇದರ ಅರಿವನ್ನು ಸಾರ್ವಜನಿಕರಿಗೆ ಕಂದಾಯ ಇಲಾಖೆ ಸಿಬ್ಬಂದಿಗಳು ಮೂಡಿಸಬೇಕಿದೆ. ಮನುಷ್ಯನಿಗೆ ಜೀವನ ಶಾಶ್ವತವಲ್ಲ ಆದರೆ ಇನ್ನೊಬ್ಬರಿಗೆ ಹಿಂಸೆ ಮತ್ತು ಕಿರುಕುಳ ನೀಡಿ ಬದುಕುವುದು ತರವಲ್ಲದ ಕ್ರಮವಾಗಿದೆಸಮಾಜದಲ್ಲಿ ಅದೆಷ್ಟೋ ಮಹನೀಯರು ಶಾಲೆಗಳಿಗೆ ಆಸ್ಪತ್ರೆಗಳಿಗೆ ದೇವಸ್ಥಾನಗಳಿಗೆ ತಮ್ಮ ಇಡುವಳಿ ಜಮೀನನ್ನು ನೀಡಿ ಸಾರ್ಥಕತೆ ನೆರೆದಿದ್ದಾರೆ ಇವರೆಲ್ಲರೂ ಕೂಡ ಸಮಾಜಕ್ಕೆ ಮಾದರಿಯಾಗಿದ್ದಾರೆ ಅದೇ ರೀತಿ ನೀವುಗಳು ಕೂಡ ಅನ್ಯೋನ್ಯತೆಯಿಂದ ಎಂಟು ಅಡಿ ಜಾಗದಲ್ಲಿ ಓಡಾಡಲು ಯಾರು ತಂಟೆ ಮಾಡ ಕೂಡದು ಸಾಮರಸ್ಯದಿಂದ ಬದುಕಬೇಕು ಎಂದು ಉಭಯ ನಾಗರೀಕರಿಗೂ ಮನವಿ ಮಾಡಿ ಒಪ್ಪಿಸಿದರು. ಮುಂದುವರೆದು ಕಂದಾಯ ಇಲಾಖೆಯಿಂದ ಸದರಿ ಜಮೀನಿನ ಪೋಡಿಯನ್ನು ಮುಂದಿನ ಎರಡು ತಿಂಗಳೊಳಗಾಗಿ ನಿರ್ವಹಿಸಿಕೊಡುವಂತೆ ತಾಲೂಕು ಸರ್ವೆರ್ ಮತ್ತು ರಾಜಸುಂದರಿಕ್ಷಕರಿಗೆ ಸೂಚಿಸಿದರು. ಗ್ರಾಮದಲ್ಲಿ ಉಂಟಾಗಿದ್ದಂತ ವಿವಾದಕ್ಕೆ ಸ್ಥಳದಲ್ಲಿಯೇ ತೆರೆ ಎಳೆದರು ಇದೇ ಸಂದರ್ಭದಲ್ಲಿ ಕಾಲುವೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಲಯ್ಯ ಸದಸ್ಯರಾದಂತಹ ಗಾದ್ರಿಪಾಲಯ್ಯ ತಾಲೂಕ್ ಸರ್ವೆರ್ ಪ್ರಸನ್ನ ಕುಮಾರ್ ರಾಜಸ್ಥ ನಿರೀಕ್ಷಕ ತಿಪ್ಪೇಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಸಿರಾಜ್ ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *