ಶಿಕ್ಷಣ ಜ್ಞಾನಾರ್ಜನೆ ಇಲ್ಲದೆ ಯಾವುದೇ ದೇಶದ ಅಭಿವೃದ್ದಿ ಸಾಧ್ಯವಿಲ್ಲ

ರಾಜ್ಯ

ಮೋದಿ ಅವರ ಸಾಧನೆಯ ಮೋದಿ @20 ಪುಸ್ತಕವನ್ನು ರಾಜಕಾರಣಿಗಳು ಬರೆದಿದ್ದಲ್ಲ ವಾಸುದೇವ್, ಅನುಪಮ್ ಖೇರ್, ನಂದನ್ ನಿಲೇಖಿಣಿ, ಸುಧಾಮೂರ್ತಿ ಅಂತವರು ಬರೆದಿದ್ದಾರೆ ಎಂದು ಕೇಂದ್ರರಾಜ್ಯ ಯುವ ಸಬಲೀಕರಣ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು. ಅವರು ಚಿತ್ರದುರ್ಗದ ಜಿ ಆರ್ ಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಮೋದಿ @ 20 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಇಂತಹ ಬರಹಗಳನ್ನು ಯುವ ಪೀಳಿಗೆ ವಿಮರ್ಶೆ ಮಾಡಬೇಕು ಎನ್ನುವ ಉದ್ದೇಶದಿಂದ ಸ್ನಾತಕೋತ್ತರ ಕೇಂದ್ರದಲ್ಲಿ ಬಿಡುಗಡೆಗೊಳಿಸಲಾಗಿದೆ. ಯಾವ ದೇಶ ಮೋದಿಗೆ ಪ್ರವೇಶವಿಲ್ಲ ಎಂದು ಹೇಳಿತ್ತು. ಆದರೆ ಒಬ್ಬ ಪ್ರಧಾನಿಗೆ ಡಿಪ್ಲೋಮ್ಯಾಟಿಕ್ ಪಾಸ್ ಇರುತ್ತದೆ. ಯಾವಾಗ ಯಾವ ದೇಶಕ್ಕೆ ಬೇಕಾದರೂ ಹೋಗಬಹುದು, ಆದರೆ ಮೋದಿಯವರು ಇದ್ಯಾವುದಕ್ಕೂ ಪ್ರತಿಕ್ರಿಯೇ ನೀಡಲಿಲ್ಲ.ಅಂತಹ ದೇಶ ಇಂದು ಮೋದಿಯವರಿಗೆ ಸ್ವಾಗತ ನೀಡಿದೆ ಇದನ್ನು ಅರಿತುಕೊಳ್ಳಬೇಕು ಎಂದು‌ ಹೇಳಿದರು. ಶಿಕ್ಷಣಕ್ಕೆ ಯಾವ ದೇಶ ಆದ್ಯತೆ ನೀಡುತ್ತದೆಯೋ ಆ‌ದೇಶವನ್ನು‌ಶಿಕ್ಷಣ ಮೇಲಕ್ಕೆತ್ತುತ್ತದೆ, ಶಿಕ್ಷಣ ಜ್ಞಾನಾರ್ಜನೆ ಇಲ್ಲದೆ ಯಾವ ದೇಶವು ಮುಂದುವರೆಯಲು ಸಾಧ್ಯವಿಲ್ಲ, ದೇಶದ ಪ್ರಾಥಮಿಕ‌ ಹಾಗೂ ನನ್ನ ಆದ್ಯತೆ ಶಿಕ್ಷಣಕ್ಕೆ ಶಿಕ್ಷಣ ಮೂಲಕ ಈ‌ ದೇಶದ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ ಎಂದು‌ ಹೇಳಿದ್ದರು, ಶಿಕ್ಷಣದ ಕ್ಷೇತ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ತಾಂತ್ರಿಕ‌ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು, ತಾಂತ್ರಿಕ‌ಜ್ಞಾನವಿಲ್ಲದ ಶಿಕ್ಷಣ ಶಿಕ್ಷಣವಲ್ಲ, ಎಂದು ಹೇಳಿದರು. ಈ‌ ಸಮಯದಲ್ಲಿ ಸರ್ಕಾರದ ಮಾಜಿ‌ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ,ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.‌ಮುರುಳಿ, ಕೂಡಾ ಅಧ್ಯಕ್ಷ ಸುರೇಶ್, ಸಂಪತ್, ಮೋಹನ್, ಹಾಗೂ ದಾವಣಗೆರೆ ಕುಲಪತಿ ಕುಂಬಾರ್ ಅವರು‌ಇದ್ದರು.

 

 

Leave a Reply

Your email address will not be published. Required fields are marked *