ಋತುಚಕ್ರದ ಸಮಯದಲ್ಲಿ ನೈರ್ಮಲ್ಯಾಭ್ಯಾಸಗಳನ್ನು ರೂಢಿಸಿಕೊಳ್ಳಿ

ಆರೋಗ್ಯ

ಋತುಚಕ್ರ ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಋತುಸ್ರಾವ ಸಮಯದಲ್ಲಿ ಸುರಕ್ಷಿತ ನೈರ್ಮಲ್ಯಾಭ್ಯಾಸಗಳು, ಮುಟ್ಟಿನ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗಾಗಿ ಇನ್ಸಿನರೇಟರ್ ಬಳಕೆಯನ್ನು ಮಾಡಬೇಕು ಎಂದು ಸಾನಿಟೇಷನ್ ಹೈಜಿನ್ ಸಮಾಲೋಚಕಿ ಶ್ರೀಮತಿ ಪ್ರಮೀಳ ಹೇಳಿದರು.
ಅವರು ಚಳ್ಳಕೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಋತುಚಕ್ರ ನೈರ್ಮಲ್ಯ ದಿನಾಚರಣೆಯ ಅಂಗವಾಗಿ “ಮುಟ್ಟಿನ ಒಗ್ಗಟ್ಟು” (Its My Day) ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ‌ ಶಿಕ್ಷಣ ಸಂವಹನ ಘನ ತ್ಯಾಜ್ಯ ವಿಲೇವಾರಿಯ ಬಗ್ಗೆ ಅಭ್ಯಾಸ ಮಾಡಿಕೊಳ್ಳಬೇಕು ಎಂದರು‌ ಹೇಳಿದರು. ಇದರ ಜೊತೆ ವೈಯಕ್ತಿಕ ಶುಚಿತ್ವ ಮತ್ತು ನೈರ್ಮಲ್ಯದ ಕುರಿತು ಕೂಡ ಸಭೆಗೆ ಮಾಹಿತಿ ನೀಡಿದರು. ಇದೇ ಸಮಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಐಇಸಿ ಸಮಾಲೋಚಕರಾದ ನಾಗರಾಜ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಘಟಕಾಂಶಗಳು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಶಾ ಮೇಲ್ವಿಚಾರಕರು ರಶ್ಮಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ತಾಲ್ಲೂಕು ಅರೋಗ್ಯ ಮೇಲ್ವಿಚಾರಕರು ತಿಪ್ಪೀರಮ್ಮ, ತಾಲ್ಲೂಕು ಅಂಗನವಾಡಿ ಮೇಲ್ವಿಚಾರಕರು ‌ಮಲಕಮ್ಮ ತಾಲ್ಲೂಕಿನ ಎಲ್ಲಾ ಆಶಾ/ಅಂಗನವಾಡಿ ಕಾರ್ಯಕರ್ತೆಯರು, ತಾಲ್ಲೂಕಿನ ಸಹಾಯಕ ನಿರ್ದೇಶಕರಾದ ಸಂಪತ್ ರವರು,(ಪಂ.ರಾ) ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *