ಬೆಳೆ ಹಾನಿ ಬಗ್ಗೆ ಕೂಡಲೇ ವರದಿ ಸಲ್ಲಿಸಿ : ಪೂರ್ಣಿಮಾ ತಾಕೀತು

ರಾಜ್ಯ

ಶಾಸಕರ ತುರ್ತು ಸಭೆ

ಹಿರಿಯೂರು ತಾಲೂಕಿನಲ್ಲಿ ಅತಿಯಾದ ಮಳೆ ಗಾಳಿಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆಗಳನ್ನು ಶೀಘ್ರದಲ್ಲೇ ಸರ್ವೇ ಮಾಡಿ ಸರ್ಕಾರದ ಪರಿಹಾರಕ್ಕೆ ವರದಿ ಸಲ್ಲಿಸುವಂತೆ ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಅಧಿಕಾರಿಗಳಿಗೆ ಸೂಚಿಸಿದರು.

 

 

ರೈತರು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವುದರಿಂದ ಅಧಿಕಾರಿಗಳು ನೆಪ ಹೇಳದೆ ಹಗಲು ರಾತ್ರಿ ರಜಾದಿನಗಳಲ್ಲೂ ಕರ್ತವ್ಯ ನಿರ್ವಹಿಸಿ ರೈತರಿಗೆ ಪರಿಹಾರ ಕೊಡಿಸುವಂತೆ ಕೆಲಸ ಮಾಡುವಂತೆ ಶಾಸಕರು ತಾಕೀತು ಮಾಡಿದರು. ತಾಲ್ಲೂಕಿನಲ್ಲಿ ಅಡಿಕೆ, ತೆಂಗು, ಬಾಳೆ, ಈರುಳ್ಳಿ ಹತ್ತಿ, ದಾಳಿಂಬೆ, ಪಪ್ಪಾಯಿ, ಶೇಂಗಾ ಮುಂತಾದ ಬೆಳೆಗಳು ಮಳೆಯಿಂದ ಹಾನಿಯಾಗಿದ್ದು ಹೋಬಳಿವಾರು ಸರ್ವೇ ವರದಿ ನೀಡಲು ಶಾಸಕರು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಆರನಕಟ್ಟೆ ಶಿವಕುಮಾರ್, ಸಿದ್ದರಾಮಣ್ಣ, ಸುರೇಶ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈಶ್ವರ ಪ್ರಸಾದ್ , ಕೃಷಿ ಸಹಾಯಕ ನಿರ್ದೇಶಕಿ ಜೈಬ, ತೋಟಗಾರಿಕೆ ಅಧಿಕಾರಿ ಗುರುಸಿದ್ದಪ್ಪ, ಅರಣ್ಯಾಧಿಕಾರಿ ರಾಜಶೇಖರ್, ಎಇಇ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *