ಪ್ರವಾಹ ಇಳಿಯುವವರೆಗೂ ಓಡಾಡಬೇಡಿ

ಜಿಲ್ಲಾ ಸುದ್ದಿ

ಒಬಳಾಪುರ ಮತ್ತು ದೊಡ್ದುಳಾರ್ತಿ ರಸ್ತೆ ಸಂಪೂರ್ಣ ಸ್ಥಗಿತ ನದಿ ಪಾತ್ರದ ಜನರಿಗೆ ಎಚ್ಚರಿಕೆಯಂದಿರಲು ಸೂಚನೆ.

 

 

ಚಳ್ಳಕೆರೆ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಬಾರಿ ಮಳೆಯಿಂದ ಕಲ್ಯಾಣದುರ್ಗವನ್ನು ಸಂಪರ್ಕಿಸುವ ಓಬಳಾಪುರ ರಸ್ತೆ ಸಂಪೂರ್ಣ ಸಂಪರ್ಕ ಕಡಿತ ಗೊಂಡಿರುವುದರಿಂದ ಯಾವುದೇ ವಾಹನಗಳು ಓಡಾಡದೆಪರದಾಡುವಂತಾಗಿದೆ ಇಂದು ಬೆಳಗ್ಗೆ ಚಳ್ಳಕೆರೆ ತಹಶೀಲ್ದಾರ್ ರಘು ಮೂರ್ತಿ ರೇಣುಕಾಪುರ ಮತ್ತು ಬೂದಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಆವಲೋಕಿಸಿ ರಸ್ತೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿರುವುದರಿಂದ ಯಾವುದೇ ದ್ವಿಚಕ್ರ ವಾಹನ ನಾಲ್ಕು ಚಕ್ರಗಳ ವಾಹನಗಳು ಓಡಾಡುವುದನ್ನು ನಿರ್ಬಂಧಿಸಿದರು. ಪೊಲೀಸರಿಂದ ಪಹರೆಯನ್ನು‌ ಹಾಕಲಾಗಿದೆ ಹಾಗೆಯೇ ಈ ಪ್ರವಾಹದಿಂದ ಬಾಧಿತರಾಗಿರುವ ರೈತರ ತೋಟಗಾರಿಕೆ ಹಾಗೂ ಕೃಷಿ ಪ್ರವಾಹದಿಂದ ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಅಂದಾಜಿಸಲಾಯಿತು ಕೆಲವು ಮನೆಗಳಿಗೆ ನೀರು ನುಗಿದೆ. ಇದೇ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ಈ ಕ್ಷೇತ್ರದ ಮಂತ್ರಿಗಳು ಕೇಂದ್ರ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಹಲವಾರು ಮನೆಗಳು ಜಖಂಗೊಂಡಿವೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿವೆ ಸಾರ್ವಜನಿಕ ರಸ್ತೆಗಳು ಹಾಳಾಗಿವೆ ಇವೆಲ್ಲವುಗಳ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಯಾವುದೇ ಕಾರಣಕ್ಕೂ ನದಿ ಪಾತ್ರದ ಜನರು ಪ್ರವಾಹ ಇಳಿಯುವವರೆಗೆ ನದಿಯನ್ನು ಆಶ್ರಯಿಸಕೊಡದು ಸಾರ್ವಜನಿಕ ಸ್ವತ್ತುಗಳು ನಷ್ಟವಾಗಿರುವ ಬಗ್ಗೆ ಬೇರೆ ಬೇರೆ ಇಲಾಖೆಗಳಿಂದ ಅಂದಾಜು ತಯಾರಿಸಲಾಗುವುದು ನಂತರ ರೇಣುಕಾಪುರ ಗ್ರಾಮದಲ್ಲಿ ಪ್ರವಾಹ ನಗ್ಗಿ ಗ್ರಾಮದ ಸಾರ್ವಜನಿಕ ರಸ್ತೆಗಳು ಶಾಲಾ ಕಟ್ಟಡಗಳು ಜಖಂಗೊಂಡಿದ್ದು ಇವುಗಳ ಅಂದಾಜನ್ನು ಕೂಡ ತಯಾರಿಸಲಾಗುತ್ತಿದೆ  ಎಂದು ಹೇಳಿದರು. ಈ ಸಂದರ್ಭದಲ್ಲಿ ಬೂದಿಹಳ್ಳಿ ಮತ್ತು ರೇಣುಕಾ ಪರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಬೂದಿಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯರಾಜು ತಿಮ್ಮರಾಜು ಯಜಮಾನಪ್ಪ ರಾಜು ರಾಜೇಶ್ವ ನಿರೀಕ್ಷಕರದಂತ ತಿಪ್ಪೇಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಹರೀಶ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *