ಆಡಳಿತಾಧಿಕಾರಿ ಬಸವರಾಜನ್ ಗೆ ಗೇಟ್ ಪಾಸ್

ರಾಜ್ಯ

ಎಸ್.ಕೆ. ಬಸವರಾಜನ್ ಇವರನ್ನು ಈ ಹಿಂದೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅಧಿಕಾರ ಸ್ಥಾನದ ಮತ್ತು ಆಸ್ತಿಗಳ ದುರುಪಯೋಗ ಹಾಗೂ ಇನ್ನಿತರೆ ಕಾರಣಗಳಿಗಾಗಿ ನಿಮ್ಮನ್ನು 2007ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ ಸದರಿ ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿರುತ್ತದೆ. ನಂತರದಲ್ಲಿ ಸದರಿ ವಿಚಾರಗಳಿಗೆ ಸಂಬಂಧಿಸಿದಂತೆ ಶ್ರೀಮಠ ಹಾಗು ಬಸವರಾಜನ್ ನಡುವೆ ಕೆಲ ಕಾನೂನಾತ್ಮಕ ಪ್ರಕ್ರಿಯೆಗಳೂ ಸಹ ನಡೆದಿರುತ್ತವೆ.
ಇತ್ತೀಚೆಗೆ ಶ್ರೀ ಬೃಹನ್ಮಠದ ಭಕ್ತರ, ಲಿಂಗಾಯತ-ವೀರಶೈವ ಮತ್ತು ವಿವಿಧ ಸಮಾಜಗಳ ಪದಾಧಿಕಾರಿಗಳ, ಮುಖಂಡರ ಹಾಗೂ ಗಣ್ಯರ ಒತ್ತಾಸೆಯಂತೆ ಶ್ರೀ ಬೃಹನ್ಮಠಕ್ಕೆ ಸಂಬಂಧಿಸಿದಂತೆ ಉಭಯತರ ನಡುವಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸಿ, ಶ್ರೀ ಬೃಹನ್ಮಠದ ಪರವಾಗಿ ಖರೀದಿಸಿದ ಬಸವರಾಜನ್ ಹೆಸರಿನಲ್ಲಿರುವ ಆಸ್ತಿಗಳನ್ನು ಶ್ರೀ ಬೃಹನಠಕ್ಕೆ ಹಿಂದಿರುಗಿಸುವ ವಾಗ್ದಾನ ಮತ್ತು ಮೌಖಿಕ ಒಪ್ಪಂದಗಳಂತೆ ಕೆಲ ಷರತ್ತುಗಳೊಂದಿಗೆ ಅವರನ್ನು ಪುನಃ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿಯಾಗಿ ದಿನಾಂಕ: 07-03-2022ರಂದು ನೇಮಕ ಮಾಡಲಾಯಿತು. ಬಸವರಾಜನ್ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡ ನಂತರ ಅವರ ಕೋರಿಕೆಯಂತೆ ಮೊದಲ ಹೆಜ್ಜೆಯಾಗಿ ಕಾವೇರಿ ಸ್ಟೋರ್ಸ್‍ಗೆ ಸಂಬಂಧಿಸಿದಂತೆ ಶ್ರೀ ಬೃಹನ್ಮಠದ ವತಿಯಿಂದ ಚಿತ್ರದುರ್ಗದ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಪ್ರಕರಣ ಸಂಖ್ಯೆ: ಎಕ್ಸಿಕ್ಯೂಷನ್.2/2020ನ್ನು ಮಾರ್ಚ್ ತಿಂಗಳಿನಲ್ಲಿ ರಾಜಿಯೊಂದಿಗೆ ಮುಕ್ತಾಯಗೊಳಿಸಿಕೊಳ್ಳಲಾಗಿರುತ್ತದೆ.
ನಂತರದಲ್ಲಿ ಬಸವರಾಜನ್ ಅವರು ನೇಮಕಾತಿಗೆ ಸಂಬಂಧಿಸಿದಂತೆ ಕಾರ್ಯಾಲಯದ ಆದೇಶದಲ್ಲಿನ ನಿಂಧನೆಗಳಲ್ಲಿರುವಂತೆ ಎಂದಿಗೂ ನಡೆದುಕೊಳ್ಳದೆ, ಆಡಳಿತಾತ್ಮಕವಾಗಿ ಯಾವುದೇ ರೀತಿಯಾದ ಸಹಕಾರ ನೀಡದೆ, ನಿಮ್ಮ ಕರ್ತವ್ಯ ನಿರ್ವಹಣೆಯ ಬಗೆಗಿನ ಯಾವುದೇ ವರದಿಯನ್ನು/ವಿಚಾರಗಳನ್ನು ಸಹ ನಮ್ಮ ಗಮನಕ್ಕೆ ತರದೇ ಹಾಗೂ ಶ್ರೀ ಬೃಹನ್ಮಠದ ಪರವಾಗಿ ಬಸವರಾಜನ್ ಅವರು ಹೆಸರಿನಲ್ಲಿ ಖರೀದಿಸಿದ ಆಸ್ತಿಗಳನ್ನು ಹಿಂದಿರುಗಿಸದೇ ಅನೇಕ ವಿಚಾರಗಳಲ್ಲಿ ತೊಡಕುಂಟುಮಾಡಿರುತ್ತಾರೆ. ಮುಂದುವರೆದು, ಪೂಜ್ಯಶ್ರೀಗಳು ಅಮೇರಿಕಾ ಮತ್ತು ಮಾರಿಷಸ್ ದೇಶದ ಪ್ರವಾಸಗಳಲ್ಲಿರುವಾಗ, ಬಸವರಾಜನ್ ಅವರು ಮತ್ತು ಅವರ ಬೆಂಬಲಿಗರೊಂದಿಗೆ ಶ್ರೀ ಬೃಹನ್ಮಠದ ಮತ್ತು ಅದರ ಪೀಠಾಧಿಕಾರಿಗಳಾದ ಹಾಗೂ ವಿದ್ಯಾಪೀಠದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿರುತ್ತದೆ. ಈ ಮೂಲಕ ಬಸವರಾಜನ್ ಅವರು ಶ್ರೀಬೃಹನ್ಮಠದ ಹಾಗೂ ವಿದ್ಯಾಪೀಠದ ಘನತೆ-ಗೌರವಗಳಿಗೆ ಧಕ್ಕೆ ತರಲು ತಮ್ಮ ಬೆಂಬಲಿಗರೊಂದಿಗೆ ಸೇರಿ ಒಳಸಂಚು ನಡೆಸಿ, ಎಸ್.ಜೆ.ಎಂ. ವಿದ್ಯಾಪೀಠದ ವತಿಯಿಂದ ನೂತನವಾಗಿ ಸ್ಥಾಪಿಸಲಾದ ಎಸ್.ಜೆ.ಎಂ. ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ಥಾನ-ಮಾನ ಸಿಗದ ಕಾರಣ ಬೆದರಿಕೆ ಒಡ್ಡುವ ರೀತಿಯಲ್ಲಿ ಹಲವು ಬಾರಿ ಬಸವರಾಜನ್ ಅವರು ಪೂಜ್ಯಶ್ರೀಗಳೊಂದಿಗೆ ಮಾತಿನ ಚಕಮಕಿ ನಡೆಸಿರುತ್ತಾರೆ. ಅನೇಕ ವಿಚಾರಗಳಲ್ಲಿ ಬಸವರಾಜನ್ ಅವರು ನಡೆ ಅನುಮಾನಸ್ಪದವಾಗಿರುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಪೂಜ್ಯರು ಸಾಕಷ್ಟು ಬಾರಿ ಸೂಕ್ತ ತಿಳುವಳಿಕೆ ನೀಡಿದಾಗ್ಯೂ ಸಹ ಬಸವರಾಜನ್ ಅವರು ತಪ್ಪುಗಳನ್ನು ತಿದ್ದಿಕೊಳ್ಳದೆ, ಸಂಸ್ಥೆ ವಿರೋಧಿ ಚಟುವಟಿಕೆಗಳನ್ನು ನಡೆಸುವ ಪ್ರಯತ್ನವನ್ನು ಮುಂದುವರೆಸಿರುತ್ತಾರೆ. ಅಲ್ಲದೆ ಬಸವರಾಜನ್ ಅವರು ಈ ನಡುವೆ ರಾಜಕೀಯ ಚಟುವಟಿಕೆಗಳಲ್ಲಿಯೂ ತೊಡಗಿದ್ದು, ಈಗ್ಗೆ ಸುಮಾರು ಒಂದು ತಿಂಗಳ ಅವಧಿಯಿಂದಲೂ ಸಹ ಬಸವರಾಜನ್ ಅವರು ಕರ್ತವ್ಯಕ್ಕೆ ನಿರಂತರ ಗೈರು ಹಾಜರಾಗಿದ್ದು, ಸದರಿ ಗೈರಿನ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.
ಆದ್ದರಿಂದ ಇನ್ನುಮುಂದೆ ನಿಮ್ಮಿಂದ ಯಾವುದೇ ರೀತಿಯಾದ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲದೇ ಇರುವುದರಿಂದ ಹಾಗೂ ಮೇಲಿನ ಎಲ್ಲ ಕಾರಣಗಳಿಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಸವರಾಜನ್ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಗಳಿಂದ ದಿನಾಂಕ:26-08-2022ರಂದು ಬಿಡುಗಡೆಗೊಳಿಸಲಾಗಿರುತ್ತದೆ.
ಪ್ರಯುಕ್ತ ಎಸ್.ಜೆ.ಎಂ. ವಿದ್ಯಾಪೀಠದ ನೂತನ ಕಾರ್ಯದರ್ಶಿಯನ್ನಾಗಿ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಭವ ಇದೆಯೆಂದು ಆಡಳಿತ ಮಂಡಳಿ ತಿಳಿಸಿರುತ್ತದೆ

 

 

Leave a Reply

Your email address will not be published. Required fields are marked *