ಮುರುಘಾಶ್ರಿಗಳಿಗೆ ಮತ್ತೊಂದು ಸಂಕಷ್ಟ ಎದುರು ಎಸ್ಪಿಗೆ ನೋಟೀಸ್ ಜಾರಿ

ರಾಜ್ಯ

ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈಗಾಗಲೇ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿಯ ಪ್ರಕರಣಗಳು ಸೇರಿ‌ದಂತೆ ಒಟ್ಟು ಎರಡು ದೂರು ದಾಖಲಾಗಿದ್ದವು. ಇದರ ಜೊತೆಗೆ ಇದೀಗ ಮಕ್ಕಳ‌ ಆಯೋಗವು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದೆ. ಇದರಿಂದ ಶ್ರೀಗಳ ಮೇಲೆ ಮೂರು ಪ್ರಕರಣಗಳು ದಾಖಲಾದಂತಾಗಿದೆ.
ಕಳೆದ ಎರಡು ‌ಮೂರು ದಿನಗಳ ಹಿಂದೆ ಮಕ್ಕಳ‌ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಸ್ಥಳಕ್ಕರ ಭೇಟಿ ನೀಡಿದ್ದರಹ. ಬಾಲಕಿಯರ ಹೇಳಿಕೆಯನ್ನು ಪಡೆದುಕೊಂಡಿದ್ದರು.

 

 

ಇದರ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಆಯೋಗವು ಚಿತ್ರದುರ್ಗ ಎಸ್ಪಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಮಾಹಿತಿ ಕೊಡಬೇಕು. ಹಾಗೂ ಏಳು ದಿನಗಳ ಒಳಗೆ ನೋಟಿಸ್ ಗೆ ಉತ್ತರ ಕೊಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ಮುರುಘಾ ಶ್ರಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ

Leave a Reply

Your email address will not be published. Required fields are marked *