ಮುರುಘಾ ಶ್ರೀಗಳ ಕಾನೂನು ಸಲಹೆಗಾರರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ

ರಾಜ್ಯ

ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ ಸಲ್ಲಿಸಿದ್ದಾರೆ. ಶ್ರೀಗಳ ಪರ ವಕೀಲರು ಚಿತ್ರದುರ್ಗಕೋರ್ಟ್‌ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲವು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್‌ 1 ರಂದು ನಡೆಸುವುದಾಗಿ ತಿಳಿಸಿದೆ.

 

 

ಈ ನಡುವೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, ನಾವೆಲ್ಲರೂ ಒಟ್ಟಾಗಿ, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

ಇದೇನು ಹೊಸತು ಅಲ್ಲ, ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದ್ದು, ಅದರೆ ಅದು ಹೊರಕ್ಕೆ ಬಂದಿರಲಿಲ್ಲ, ಇದಕ್ಕೆ ಈಗ ತಾರ್ಕಿಕ ಅಂತ್ಯ ಬೇಕಾಗಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಯಾರು ಆತಂಕಕ್ಕೆ ಒಳಗಾಗ ಬೇಡಿ, ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಹೆದರಿಸಬೇಕು. ನಾವೆಲ್ಲರೂ ನೆಲದ ಕಾನೂನನ್ನು ಗೌರವಿಸುತ್ತೇವೆ ಎಂದು ಹೇಳಿದರು. ಆರೋಪಕ್ಕೆ ಬೇಕಾದ ಕಾನೂನು ಸಹಕಾರವನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮಠದ ಭಕ್ತರು ಗಾಳಿ ಸುದ್ದಿಗಳನ್ನು ನಂಬಬಾರದು. ಇನ್ನೂ ನಾವು ನ್ಯಾಯಕ್ಕೆ ತಲೆ ಬಾಗುತ್ತೇವೆ. ಇವತ್ತಿಗೂ ನಾವು ಕಾನೂನಿಗೆ ಬೆಲೆ ನೀಡುತ್ತೇವೆ ಎಂದು ತಿಳಿಸಿದರು. ಸದ್ಯದ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಗೆ ಬರುತ್ತೇವೆ ಹೇಳಿದರು. ಎಲ್ಲರಿಗೂ ಒಳ್ಳೆಯದಾಗಲಿ, ಮಠದ ಭಕ್ತರು ನಮ್ಮ ಜೊತೆ ಇರುವುದು ನಮಗೆ ಧೈರ್ಯ ತಂದಿದೆ. ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ಅಭಿಮಾನದ ಚಿಲುಮೆಯನ್ನು ಚಿಮ್ಮಿಸುವವರಿಗೆ ಕೂಡ ಧನ್ಯವಾದವನ್ನು ತಿಳಿಸುತ್ತೇವೆ ಅಂತ ವಿರೋಧಿಗಳಿಗೆ ಟಾಂಗ್ ನೀಡಿದರು.

Leave a Reply

Your email address will not be published. Required fields are marked *