ತಾಳ್ಮೆಯಿಂದ ಸಮಸ್ಯೆಗಳನ್ನು ಎದುರಿಸಬೇಕು : ಡಾ.ಆರ್.ರಂಗನಾಥ್

ಜಿಲ್ಲಾ ಸುದ್ದಿ

ತಾಳ್ಮೆಯಿಂದ ಸಮಸ್ಯೆಗಳನ್ನು ಎದುರಿಸಬೇಕು : ಡಾ.ಆರ್.ರಂಗನಾಥ್

ಕೊರೊನಾ ರೋಗವನ್ನು ಯೋಧರಂತೆ ಎದುರಿಸಿ ನಿಭಾಯಿಸಿದ್ದೀರಿ. ಇಷ್ಟಕ್ಕೆ ನಿಮ್ಮ ಹೋರಾಟ ನಿಂತಿಲ್ಲ. ಮುಂಬರುವ ದಿನಗಳಲ್ಲಿ ಸಾವಿರ ಸಮಸ್ಯೆಗಳು ಎದುರಾದರೂ ತಾಳ್ಮೆಯಿಂದ ಎದುರಿಸುವ ಸಾಮಥ್ರ್ಯ ನಿಮಗೆ ಲಭಿಸಲಿ. ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಎಲ್ಲಾ ವಿಭಾಗದ ನೌಕರರು ಒಟ್ಟಾಗಿ ನಡೆಯೋಣ ಎಂದು ಡಾ.ಆರ್.ರಂಗನಾಥ್ ತಿಳಿಸಿದರು.

 

 


ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ 76ನೇ ಸ್ವಾತಂತ್ರ್ಯ ಉತ್ಸವಕ್ಕೆ ಧ್ವಜಾರೋಹಣ ಮಾಡಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರೇಣುಪ್ರಸಾದ್, ಡಾ.ರೂಪ, ಡಾ.ಸುಧಾ, ಡಾ.ಕಾಶಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಸಹಾಯಕ ಆಡಳಿತಾಧಿಕಾರಿ ಅಸ್ಲಾಂ, ವಾಹನ ವಿಭಾಗದ ಮುಖ್ಯಸ್ಥರಾದ ಶಶಿಧರ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ನಂದಿನಿ ಕಡಿ, ಕೃಷ್ಣನಾಯ್ಕ್, ಆರ್.ಗೌರಮ್ಮ, ಎನ್.ಎಸ್.ಮಂಜುನಾಥ್, ಮೂಗಪ್ಪ.ಬಿ, ಹನುಮಂತಗೌಡ ಪೂಜಾರ್, ಜಾನಕಿ,   ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹನುಮಂತಪ್ಪ, ಮಲ್ಲಿಕಾರ್ಜುನ್, ಮಳಲಿ ಶ್ರೀನಿವಾಸ, ಗಂಗಾಧರ್, ರಂಗನಾಥ ರೆಡ್ಡಿ ತಿಪ್ಪೇಸ್ವಾಮಿ, ಸಿದ್ದೇಶ್, ಇತರೆ ವಿಭಾಗಗಳ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *