ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪರೀಕ್ಷೆ ಬರೆದು ಬರುವುದರೊಳಗೆ ಮೊಬೈಲ್ ಕಳವು ವಿದ್ಯಾರ್ಥಿಗಳು ಕಂಗಾಲು

ಕ್ರೈಂ

ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ, ದಿನೇದಿನೇ ಮೊಬೈಲ್ ಕಳ್ಳತನ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಲೆನೋವಾಗಿದೆ. ಸಿ.ಸಿ. ಕ್ಯಾಮೆರಾ ಇಲ್ಲದ ಪ್ರಯುಕ್ತ, ಹೊರಗಿನ ಕಳ್ಳರೋ ಅಥವಾ ಒಳಗಿನವರೇ ಕಳ್ಳತನ ಮಾಡುತ್ತಿದ್ದಾರೋ ಎಂಬುದು ತಿಳಿಯದಾಗಿದೆ .ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು, ತಮ್ಮ ಬ್ಯಾಗ್‍ಗಳನ್ನು ಹೊರಗಿರಿಸಿ, ಒಳಗೆ ಪರೀಕ್ಷೆ ಬರೆದು ಹೊರಬರುವುದರೊಳಗೆ, ತಮ್ಮ ಬ್ಯಾಗ್‍ನಲ್ಲಿರುವ ಮೊಬೈಲ್‍ಗಳ ಕಳ್ಳತನವಾಗುತ್ತಿವೆ.

 

 

ವಿದ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು , ತಮ್ಮ ಬ್ಯಾಗ್‍ಗಳಲ್ಲಿ ಇಟ್ಟು, ಪರೀಕ್ಷೆ ಬರೆಯಲು ಒಳ ಹೋದ ತಕ್ಷಣ, ಕಳ್ಳರು ಕಾಯುತ್ತಿದ್ದು, ಬ್ಯಾಗ್‍ಗಳನ್ನ ಸ್ವಲ್ಪ ದೂರ ತೆಗೆದುಕೊಂಡು ಹೋಗಿ, ಮೊಬೈಲ್ ಕದ್ದು, ಬ್ಯಾಗನ್ನು ಅಲ್ಲೇ ಇಟ್ಟು ಹೋಗಿರುವ ಉದಾಹರಣೆ ಇದೆ.ಕಳ್ಳತನವಾದ ಮೊಬೈಲ್‍ಗಳನ್ನ ಪೆÇಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಕೊಡಿ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಕಳ್ಳತನ ನಿಯಂತ್ರಿಸಲು ಸಿ,ಸಿ, ಕ್ಯಾಮೆರಾಗಳನ್ನು ಅಳವಡಿಸಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಮೊಬೈಲ್ ಬಗ್ಗೆ ಗಮನ ಇರಿಸಿ ಎಂದು ಕೆಲವು ಕಡೆ ಎಚ್ಚರಿಕೆ ಮಾಹಿತಿಯನ್ನಾದರೂ ಹಾಕಬೇಕು,
ದಿನನಿತ್ಯ 2 ಅಥವಾ 3 ಮೊಬೈಲ್ ಕಳವಾಗುತ್ತಿವೆ. ಆದಷ್ಟು ಈ ಕಟ್ಟಡಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸಿ, ಮೊಬೈಲ್ ಕಳ್ಳತನ ತಡೆಯಬೇಕೆಂದು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *