ಬಸ್ ಸಂಚಾರಕ್ಕೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ ಚಾಲನೆ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಬಸ್ ಸಂಚಾರದ ವ್ಯವಸ್ಥೆಯೇ ಇಲ್ಲದ ಸೀಗೆಹಳ್ಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಆದ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ . ಚಂದ್ರಪ್ಪ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಿತ್ಯ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

 

 

 

Chitradurga bus  running  starts

ಇಂದು ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರ ಹಾಗೂ ಚಿತ್ರದುರ್ಗ ತಾಲೂಕಿನ ಸಿಗೇಹಳ್ಳಿಯಲ್ಲಿ ಕಂದಾಯ ಇಲಾಖೆಯ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಪಶು ಆರೋಗ್ಯ ತಪಾಸಣೆಯನ್ನು ನಡೆಸಿ ಸುಮಾರು 62 ರಾಸುಗಳಿಗೆ ಗರ್ಭ ತಪಾಸಣೆ, ಜಂತು ನಾಶಕ ಔಷಧಿ ವಿತರಣೆ, ಹಾಗೂ ಲವಣಾಂಶದ ಲಸಿಕೆಯನ್ನು ನೀಡಲಾಯಿತು. ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಔಷಧಿ ವಿತರಿಸಲಾಯಿತು. ಗ್ರಾಮದ ಎಸ್ಸಿ ಎಸ್ಟಿ ಕಾಲೋನಿ ಸೇರಿದಂತೆ ಇತರೇ ಕಾಲೋನಿಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲು ಆಗುವಂತಹ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಕ್ರಮ ಜರುಗಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿಯರಿಗೆ ನೀಡುವ ಪೌಷ್ಠಿಕಾಂಶದ ಬಗ್ಗೆ ಪರಿಶೀಲಿಸಲಾಯಿತು. ಸೋಲಾರ್ ಲ್ಯಾಂಪ್, ಉದ್ಯೋಗ ಖಾತರಿ ಫಲಾನುಭವಿಗಳಿಗೆ ಕಾರ್ಯಾದೇಶ ಹಾಗೂ ಶವ ಸಂಸ್ಕಾರಕ್ಕೆ ಧನಾದೇಶ ನೀಡಲಾಗಿದೆ. ಕಂದಾಯ ಇಲಾಖೆಯ ಸಮಾಜಿಕ ಭದ್ರತೆ ಯೋಜನಯಡಿ ಸುಮಾರು 19 ಜನ ಫಲಾನುಭವಿಗಳಿಗೆ ಅದೇಶ ಪತ್ರಗಳನ್ನು ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಆಹಾರದ ಕಿಟ್, ಭಾಗ್ಯ ಲಕ್ಷ್ಮಿ ಬಾಂಡ್ ಗಳನ್ನು ನೀಡಲಾಗಿದೆ. ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಪರಿಹರಿಸಲಾಯಿತು. ಎಂದು ತಹಶೀಲ್ದಾರ್ ವೆಂಕಟೇಶಯ್ಯ ತಿಳಿಸಿದ್ದಾರೆ.

ಸಂಯುಕ್ತ ವಾಣಿ

Leave a Reply

Your email address will not be published. Required fields are marked *