ಶಾಸಕ ತಿಪ್ಪಾರೆಡ್ಡಿ ಮುನಿಸು

ಆರೋಗ್ಯ

ಚಿತ್ರದುರ್ಗ: ರಾಜಕೀಯಕ್ಕೆ ಸುಮ್ಮನೆ ಒಂದು ಜನರೇಷನ್ ವೇಸ್ಟ್ ಮಾಡಿದ್ದೇನೆ. ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಎಂದು ನಿರೀಕ್ಷೆ ಮಾಡಿದ್ದೆ, ಆದರೆ ನಿರಾಸೆಯಾಗಿದೆ ಎಂದು ಚಿತ್ರದುರ್ಗ ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

Chitradurga hg thippareddy besara
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನೂರು ವರ್ಷ ಬದುಕುತ್ತೇವೆ ಎಂದರೆ ಏನಾದ್ರೂ ಮಾಡಬಹುದು, ಅಂಗಾರ , ಕತ್ತಿಗೆ ಮಾತ್ರ ಹಿರಿಯರ ಪಟ್ಟಿಯಲ್ಲಿ ಸಿಕ್ಕಿದೆ. ಯೋಗೀಶ್ವರ್ ಗೆ ಸಚಿವ ಸ್ಥಾನ‌ನೀಡಿದ್ದು, ಆಶ್ಚರ್ಯ ತಂದಿದೆ. ಸಹಾಯ ಮಾಡಿದ್ದಾರಂತೆ ಏನೂ ಮಾಡಿದ್ದಾರೋ ಗೊತ್ತಿಲ್ಲ. ಅಪರೇಷನ್ ಕಮಲ ವೇಳೆ ಯೋಗೀಶ್ವರ್ ಕಾಲ್ ಮಾಡ್ತಾ ಇದ್ರು, ಯಾಕೆಂತ ಗೊತ್ತಿಲ್ಲ. ಎಂಟಿಬಿ, ಶಂಕರ್, ಸರ್ಕಾರ ಬರಲು ಸಹಾಯ ಮಾಡಿದ್ರು, ಕರ್ನಾಟಕದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದಿದೆ ಆದರೂ ನನಗೆ ಅವಕಾಶ ಸಿಕ್ಕಿಲ್ಲ. ಬೆಳಗಾವಿ, ಬೆಂಗಳೂರಿನಲ್ಲೆ ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಇದೆ.

Chitradurga h g thippareddy besara

 

 

 

ಚುನಾವಣೆ ವೇಳೆ ಪಕ್ಷಕ್ಕೆ ವಿರೋಧವಾಗಿ ಕೆಲಸ ಮಾಡಿದವರಿಗೆ ಸಂಫುಟದಲ್ಲಿ ಅವಕಾಶ ನೀಡಿರುವುದು ಆಶ್ಚರ್ಯ ಮೊದಲಿಂದ ಎಲ್ಲರನ್ನೂ ಗುರುತಿಸುವ ಕೆಲಸ ಮಾಡಿ ಅವಕಾಶ ಕೊಡುತ್ತಿದ್ದರು. ಈ ಬಾರಿ ಸಚಿವ ಸಂಪುಟದಲ್ಲಿ ಆ ರೀತಿಯ ಸಮಾನತೆ ಕಾಣುತ್ತಿಲ್ಲ. 51 ವರ್ಷ ರಾಜಕೀಯದಲ್ಲಿ ಕಳೆದು ಸಾರ್ವಜನಿಕ ಜೀವನದಲ್ಲೆ ಮುಗಿಯುತ್ತದೆ. ಕೇವಲ ಶಾಸಕನಾಗಿ ಕ್ಷೇತ್ರದ ಜನರ ಸೇವೆ ಮಾಡಿದೆ. ರಾಜ್ಯ ಹಾಗೂ ಜಿಲ್ಲೆ ಜನರ ಸೇವೆ ‌ಮಾಡಲು ಅವಕಾಶ ಸಿಗಲಿಲ್ಲ. ಕೇವಲ ಶಾಸಕನಾಗಿ ಅಧಿಕಾರ ಸಿಗದೇ ಇರೋದು ಬೇಸರ ತಂದಿದೆ. ಜಾತಿ ರಾಜಕೀಯ ಟೂ ಮಚ್ ಆಗಿದೆ. ಎರಡೇ ಜಾತಿಯ 25 ಜನ ಇದ್ದಾರೆ ಕ್ಯಾಬಿನೆಟ್ ನಲ್ಲಿ, ನಗೆ ಪಾಟಲಾಗಿ ಬಿಡ್ತು. ಎಂದು ಮುನಿಸಿನ ಜೊತೆ ಬೇಸರವ‌ನ್ನು ಹೊರ ಹಾಕಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *