ಶಾಸಕ ತಿಪ್ಪಾರೆಡ್ಡಿಗೆ ರೌಡಿಗಳಿಂದ ಬೆದರಿಕೆ ಹಾಕಿಸಲು ಯತ್ನಿಸಿದ ಗುತ್ತಿಗೆದಾರ

ಜಿಲ್ಲಾ ಸುದ್ದಿ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಹೊಡೆಯಲು ರಸ್ತೆಯನ್ನೆ ಹಾಳು ಮಾಡಿದ್ದನ್ನು ಪ್ರಶ್ನಿಸಿದ ಶಾಸಕ ತಿಪ್ಪಾರೆಡ್ಡಿಗೆ ಧಮ್ಕಿ ಹಾಕಿಸಲು ಬೌನ್ಸರ್ ಗಳನ್ನು ಕರೆ ತಂದಿರುವ ಘಟನೆ ನಡದಿದೆ.

Chitradurga bouncers bedarike for thippareddy
ಚಿತ್ರದುರ್ಗ ಹೊರ ವಲಯದಲ್ಲಿ ನಡೆಯುತ್ತಿರುವ 1,400  ಕೋಟಿ ಅನುದಾನದ  ರಾಷ್ಟ್ರೀಯ ಹೆದ್ದಾರಿಗೆ ಕೆಡಿಆರ್ ಇನ್ಫ್ರಾಟೆಕ್ ಎಂಬ ಕಂಪನಿಯ ಗುತ್ತಿಗೆದಾರ ಮಣ್ಣನ್ನು ಸಾಗಿಸುತ್ತಿದ್ದಾನೆ. ಇದಕ್ಕೆ ಮೈನ್ಸ್ ಅಂಡ ಜೂವಾಲಜಿ, ಅರಣ್ಯ, ಇಲಾಖೆ  ಅನುಮತಿಯನ್ನು ಪಡೆದಿಲ್ಲ.  10ಟನ್ ಭಾರದ ವಾಹನಗಳು ಓಡಾಡುವ ಜಾಗದಲ್ಲಿ 40 ಟನ್ ಭಾರದ ವಾಹನಗಳನ್ನು ಓಡಾಡಿಸಿದ್ದು ನಾಲ್ಕರಿಂದ ಐದು ಕೋಟಿ ರೂಪಾಯಿ  ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಸಂಪೂರ್ಣ ಹಾಳಾಗಿದೆ. ಇದ‌ನ್ನು ಕಳೆದ ನಾಲ್ಕು ದಿನಗಳ ಹಿಂದೆ ಪರಿಶೀಲಿಸಿದ್ದ ಶಾಸಕರು  ಇಂದು ಮತ್ತೆ ಪರಿಶೀಲನೆ ನಡೆಸಲು ಹೋಗಿದ್ದಾರೆ.

 

 

Chitradurga bouncers bedarike for thippareddy

ಈ ಸಮಯದಲ್ಲಿ ಗುತ್ತಿಗೆದಾರ ಖಾಸಗಿ ಭೌನ್ಸರ್ ಗಳನ್ನು  ಧಮ್ಕಿ ಹಾಲಿಸಲು ಬೆದರಿಸಲು ಕರೆ ತಂದಿದ್ದಾನೆ. ಇದನ್ನು ಪ್ರಶ್ನೆ ಮಾಡಿದರೆ ನಿಮಗೆ ಯಾವ ಸಚಿವ ಹಾಗೂ  ಸಚಿವ ಮಕ್ಕಳು, ಯಾವ ಶಾಸಕರಿಂದ ಹೇಳಿಸಲಿ ಎಂದು  ಹೇಳುತ್ತಾನೆ.  ರಸ್ತೆ ಕೆಡಿಸಿಕೊಂಡು ಇವರನ್ನು ಸುಮ್ಮನೆ ಬಿಡಬೇಕಾ? ಬೌನ್ಸರ್ (ರೌಡಿಗಳನ್ನು) ಗಳನ್ನು ಕರೆಸಿಕೊಂಡ ಈ ಗುತ್ತಿಗೆದಾರನಿಗೆ ಸುಮ್ಮನೆ ಬಿಡಬಾರದು ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಶಾಸಕ ತಿಪ್ಪಾರೆಡ್ಡಿ ಒತ್ತಾಯಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *