ಉಗ್ರಪ್ಪ ಮೋದಿಯೊಬ್ಬರು ಭಸ್ಮಾಸುರ ಅಂದಿದ್ಯಾಕೆ ?

ಜಿಲ್ಲಾ ಸುದ್ದಿ ರಾಜಕೀಯ ರಾಜ್ಯ

ಚಿತ್ರದುರ್ಗ: ಮೋದಿ ಆಧುನಿಕ ದುರ್ಯೋಧನ , ಭಸ್ಮಾಸುರನಿದ್ದ ಹಾಗೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಕಿಡಿ ಕಾರಿದ್ದಾರೆ.

Chitradurga ugrappa kidi

 

 

ಅವರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ಮಾತ‌ನಾಡಿ, ದುರಂಹಕಾರ ದೇಶದ ಪ್ರಧಾನಿ ಮೋದಿಗಿದೆ. ಅವರೊಬ್ಬ ಆಧುನಿಕ ದುರ್ಯೋಧನ ಇವರಿಂದಾಗಿ ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ಉದ್ಯೋಗ ಸೃಷ್ಠಿ ಎಲ್ಲವೂ ಹಾಳಾಗಿದೆ. ಇದೀಗ ದೇಶದ ರೈತನ ಬದುಕನ್ನು ಹಾಳು‌ ಮಾಡುತ್ತಿದ್ದಾರೆ. ಮೋದಿಯವರೇ ಅಧಿಕಾರ ಶಾಶ್ವತವಲ್ಲ ಎಂದರು. ದೇಶದಲ್ಲಿ‌ ಮೋದಿ ತೊಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಇಂದು‌ ರಾಜ್ಯದಲ್ಲಿ ಯಡಿಯೂರಪ್ಪ ಕೂಡ ಅವರ ದಾರಿಯನ್ನೆ ತುಳಿದಿದ್ದಾರೆ. ಭೂ ಪರಿವರ್ತನಾ ಕಾಯ್ದೆ ತಿದ್ದುಪಡಿಯಲ್ಲಿ ಯಡಿಯೂರಪ್ಪ ಅವರಿಗೆ ಸಾವಿರಾರು ಕೋಟಿ ಕಿಕ್ ಬ್ಯಾಕ್ ಬಂದಿದೆ ಎಂದು ಅರೋಪಿಸಿದರು. ಮೋದಿಯವರೇ ನಿಮಗೆ ದಮ್ಮಿದ್ದರೆ ತಾಕತ್ತಿದ್ದರೆ ಗುಜರಾತ್ ನಲ್ಲಿ ಗೋ‌ಮಾಂಸ ರಫ್ತನ್ನು‌ ನಿಲ್ಲಿಸಿ ಬ್ಯಾನ್ ‌ಮಾಡಿ, ಇದನ್ನು ಬಿಟ್ಟು ಕೇಸರಿ‌ಶಾಲು ಹಾಕಿಕೊಂಡು ಗೋಪೂಜೆ ಮಾಡಿ ಸಿಹಿ ಹಂಚಿದರೆ ಸಮಸ್ಯೆ ಬಗೆ ಹರಿಯಲ್ಲ. ರೈತರನ್ನು ಸಮಾಧಿ‌ ಮಾಡುವಂತಹ ಕಾನೂನುಗಳನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಆದರೆ ಕುಮಾರಸ್ವಾಮಿ ಹೇಳಿಕೆ‌ ನೋಡಿದರೆ ಅವರ ಮೇಲೆ ಬಿಜೆಪಿ ಪ್ರಭಾವವಾಗಿದೆ. ಕುಮಾರಸ್ವಾಮಿ ತಾವು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾದರೆ ವಾಚಾಮಗೋಚರ ಬೈದಿದ್ದರು. ಆದರೆ ಇದೀಗ ಕಾಂಗ್ರೆಸ್ ಗಿಂತ ಬಿಜೆಪಿ ಉತ್ತಮ ಎಂದು ಹೇಳುತ್ತಾರೆ. ಸಿಎಂ ಭೇಟಿಯಾಗುತ್ತಾರೆ ಅಂದರೆ ಎಲ್ಲೊ ಒಂದು ಕಡೆ ಅಂಡರ್ ಸ್ಟಾಂಡಿಂಗ್ ಆಗಿದೆ ಎಂದೆನಿಸುತ್ತದೆ. ಇಲ್ಲವೇ ಅಧಿಕಾರ ಕಳೆದುಕೊಂಡು ರಾಜಕೀಯ ವಾಗಿ ಹತಾಶರಾಗಿದ್ದಾರೆ. ಇಲ್ಲವೇ ಬಿಜೆಪಿಯವರು ಒತ್ತಡ ಹಾಕುತ್ತಿದ್ದಾರೆ. ಅಂದೆನಿಸುತ್ತದೆ. ಇದರಿಂದ ಕುಮಾರಸ್ವಾಮಿ ನಿಲುವುಗಳಲ್ಲಿ‌ ಬದಲಾಗುತ್ತಿದೆ ಕುಮಾರಸ್ವಾಮಿ ಅವರ ಹೇಳಿಕೆಗಳು ಸಮಂಜಸವಲ್ಲ ಎಂದು ಹರಿ ಹಾಯ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *