ಮೀಟರ್ ಬಡ್ಡಿ ದಂಧೆಗೆ ಎಫ್ ಡಿ ಎ ಬಲಿ

ಕ್ರೈಂ

ಚಿತ್ರದುರ್ಗ: ಮೀಟರ್ ಬಡ್ಡಿ ದಂಧೆಗೆ ಸರ್ಕಾರಿ ನೌಕರನೊಬ್ಬ ಬಲಿಯಾಗಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಮೀಟರ್ ಬಡ್ಡಿ ದಂಧೆಗೆ ಬಲಿಯಾಗಿರುವ ವ್ಯಕ್ತಿಯನ್ನು ಆರ್ ಟಿ. ನವೀನ್ ಎಂದು ಗುರುತಿಸಲಾಗಿದ್ದು, ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದ ನಿವಾಸಿ, ಜಿಲ್ಲಾ ಖಜಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ ಗೆ ಬಡ್ತಿ ಸಿಕ್ಕ ಮೇಲೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಖಜಾನೆ ಯಲ್ಲಿ ಪ್ರಥಮ‌ದರ್ಜೆ ಸಹಾಯಕನಾಗಿ ಕೆಲಸ‌ ಮಾಡುತ್ತಿದ್ದ, ತಾನು ತನ್ನ ವೈಯುಕ್ತಿಕ ಕಾರಣಕ್ಕಾಗಿ ಸಾಲ ಮಾಡಿಕೊಂಡಿದ್ದು, ಅದು‌ ಲಕ್ಷಾಂತರ ರೂಪಾಯಿಗಳಾಗಿದೆ. ಅದಕ್ಕೆ ಪ್ರತಿಯಾಗಿ ಸಾಲ ಕೊಟ್ಟವರು
ಚಕ್ ಪಡೆದಿದ್ದಾರೆ. ಅದರ ಜೊತೆಗೆ ಮೀಟರ್ ಬಡ್ಡಿಯಂತೆ ಕೊಟ್ಟ ಸಾಲಕ್ಕಿಂತ ಮೂರು ಪಟ್ಟು ಬಡ್ಡಿಯನ್ನು ಕೂಡ ತೆಗೆದುಕೊಂಡಿದ್ದಾರೆ. ಆದರೂ ಚಕ್ ಕಲೆಕ್ಷನ್ ಹಾಕಿ ನಿನ್ನನ್ನು ಕೆಲಸದಿಂದ ತೆಗೆಸುತ್ತೆವೆ ಎಂದು ಪದೇ ಪದೇ ಹೆದರಿಸುತ್ತಿದ್ದರು ಎಂದು ನವೀನ್ ಹೇಳಿಕೊಂಡಿದ್ದಾನೆ. ಇದರಿಂದ ಭಯಗೊಂಡಿದ್ದ ನವೀನ್ 30 ನೇ ತಾರೀಖು ಕಚೇರಿಯಿಂದ ಬಂದವನು ನನಗೆ ರೆಸ್ಟ್ ಬೇಕು ಯಾರೂ ನನ್ನನ್ನು ಮಾತನಾಡಿಸಬೇಡಿ ಮಲಗಬೇಕು ಎಂದು ಹೇಳಿ ರೂಮು ಸೇರಿದವನು ಹೆಣವಾಗಿದ್ದಾನೆ.
ಸುಮಾರು 14 ಜನರ ಬಳಿ ಸಾಲ‌ ಮಾಡಿಕೊಂಡಿದ್ದು, ಅವರಲ್ಲಿ ಯಾರೂ ನನ್ನ ಚಕ್ ನ್ನು ಕಲೆಕ್ಷನ್ ಹಾಕುತ್ತಾರೋ ಅವರೆ ನನ್ನ ಸಾವಿಗೆ ಕಾರಣ ಎಂದು ಬರೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸಾಲಗಾರರ ಬೆದರಿಕೆಗೆ ಎರಡು ಪುಟ್ಟ ಕಂದಮ್ಮಗಳು ಹಾಗೂ ಪತ್ನಿ ಅನಾಥರಾಗಿದ್ದಾರೆ.
ನನಗೆ ಸಾಲ ಕೊಟ್ಟವರು ನನ್ನ‌ ಮಕ್ಕಳು ಹಾಗೂ ಪತ್ನಿಗೆ ತೊಂದರೆ ಕೊಡುತ್ತಾರೆ ಅವರನ್ನು ಬಿಡಬೇಡಿ‌ ನನ್ನ ಮಕ್ಕಳು‌ ಮತ್ತು ಪತ್ನಿಗೆ ಭದ್ರತೆಯನ್ನು ಕೊಡಿ ಎಂದು ಪೋಲಿಸ್ ಇಲಾಖೆಯನ್ನು‌ ಮನವಿ ಮಾಡಿದ್ದಾನೆ. ಅಪ್ಪಿ‌ ನನ್ನನ್ನ ಕ್ಷಮಿಸಿ ಬಿಡು ನಾನು‌ ನಿನಗೆ ತುಂಬಾ ತೊಂದರೆ ಕೊಟ್ಟಿದಿನಿ ಎಂದು ಪತ್ನಿಯನ್ನು ಕ್ಷಮೆಯಾಚಿಸಿದ್ದಾನೆ. ನನಗಾಗಿರುವ ಅನ್ಯಾಯ ಮತ್ಯಾರಿಗೂ ಆಗಬಾರದು ಅವರನ್ನು ಬಿಡಬೇಡಿ ಎಂದು ಪದೇ ಪದೇ ಪೋಲಿಸ್ ಇಲಾಖೆಯನ್ನು ಬೇಡಿಕೊಂಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೋಲಿಸರು ತನಿಖೆ ಆರಂಭಿಸಿದ್ದಾರೆ.

 

 

ಸಂಯುಕ್ತವಾಣಿ

Leave a Reply

Your email address will not be published. Required fields are marked *