ಚಿತ್ರದುರ್ಗ: ದೀಪಾವಳಿ ಹಬ್ಬದ ದಿನವೇ ಜವರಾಯ ಕಾದು ಕುಳಿತಿದ್ದು, ಹಿರಿಯೂರಿನ ಪಟ್ರಹಳ್ಳಿ ಬಳಿ ಸರಣಿ ಅಪಘಾತದಲ್ಲಿ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ೪ ರ ವೇಳೆಯಲ್ಲಿ ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಬಸ್ ಇಂಡಿಕಾ ಕಾರು, ಓಮಿನಿ ಕ್ಯಾಂಟರ್ ಟಾಟಾ ಏಸ್ ನಡುವೆ ಸರಣಿ ಅಪಘಾತವಾಗಿದೆ. ಇದರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಅವರನ್ನು ಹಾವೇರಿ ಮೂಲದ ಲತಾ(28) ಶಶಿಕುಮಾರ್(26) ಎಂದು ಗುರುತಿಸಲಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ