ನಾನು ತಂದ ಹಣ ಎಲ್ಲಿ ಹೋಯ್ತು? ಡಿ. ಸುಧಾಕರ್ ಮಾಜಿ ಸಚಿವ

ಜಿಲ್ಲಾ ಸುದ್ದಿ ರಾಜಕೀಯ

ನಾನು ತಂದ ಹಣ ಎಲ್ಲಿ ಹೋಯ್ತು ?. ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಮಾಜಿ ಸಚಿವ ಡಿ. ಸುಧಾಕರ್ ಆರೋಪ.

ಚಿತ್ರದುರ್ಗ :,ನ04(ಸಂವಾ)- ನನ್ನ ಅಧಿಕಾರದ ಅವಧಿಯಲ್ಲಿ ತಂದಿದ್ದ ಅನುದಾನ ಎಲ್ಲಿ ಹೋಯ್ತು ?. ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಸಚಿವ ಡಿ. ಸುಧಾಕರ್ ಆರೋಪಿಸಿದರು. ಇಂದು ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ವಿಜೇತರಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ನಂತರ ಸುದ್ದಿಗೊಷ್ಠಿಯಲ್ಲಿ ಮಾತಾನಾಡಿದ ಅವರು ಕಳೆದ 2018 ರ ನಮ್ಮ ಸರ್ಕಾರ ಹಿರಿಯೂರು ತಾಲ್ಲೂಕಿಗೆ ವಿಶೇಷ ಅನುದಾನ 25 ಕೋಟಿ ತರಲಾಗಿತ್ತು. ಮತ್ತೊಂದು ಸೇತುವೆ ಕಾಮಗಾರಿಗೆ 08 ಕೋಟಿ ಅನುದಾನ ತರಲಾಗಿತ್ತು. ಒಟ್ಟು 33 ಕೋಟಿ ಹಣದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನಾನು ತಂದಿದ್ದ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡಿಯುತಿದೆ ಎಂದು ಡಿ. ಸುಧಾಕರ್ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು, ಈಗಿರುವ ಸರ್ಕಾರದಲ್ಲಿ ಹಣ ಇಲ್ಲಂತ ಹೇಳಿ ಅಂದು ಬಿಡುಗೊಂಡಿದ್ದ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ ಎಂದರು.

  1. Where has gone money

ಹುಳಿಯಾರು ರಸ್ತೆ ಅಗಲೀಕರಣ ಹಾಗೂ ಹಿರಿಯೂರು ನಗರದ ಗಾಂಧಿ ವೃತ್ತದಿಂದ ಬಿ.ಟಿ. ಸರ್ಕಲ್ ವರೆಗೆ ಡಬಲ್ ರಸ್ತೆ ಅಗಲೀಕರಣ ಅಂದಿನ ಡಿಸಿಯವರ ಸಮ್ಮುಖದಲ್ಲಿ, ಹಿರಿಯೂರು ಪಟ್ಟಣ ಎಲ್ಲ ವರ್ತಕರು ಸೇರಿ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೇಗೊಂಡಿದ್ವಿ, ರಸ್ತೆ ಅಗಲೀಕರಣ ಕಾಮಗಾರಿ ಆಗುತ್ತಿಲ್ಲ, ಆ ಹಣ ಎಲ್ಲಿ ಹೋಗಿದೆ ಗೊತ್ತಿಲ್ಲ ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಹಾಗೂ ನಡಿಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು. ನನ್ನ ಶಾಸಕನ ಅಧಿಕಾರ ಅವಧಿಯಲ್ಲಿ ಯಾವುದೇ ಕಾಮಗಾರಿಯನ್ನು ಕಳಪೆ ಕಾಮಗಾರಿ ಆಗದಂತೆ, ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ಕೊಟ್ಟಿರುವುದು ಜನರು ಗಮನಿಸಿದ್ದಾರೆ. ತಾಲೂಕಿನಲ್ಲಿ ಇವತ್ತು ಭ್ರಷ್ಟಾಚಾರ ಮುಗಿಲು ಮುಟ್ಟಿರುವುದು ಕಟು ಸತ್ಯ. ಜನಸಾಮಾನ್ಯರು ಕೆಲಸಕ್ಕಾಗಿ ಸರ್ಕಾರಿ ಕಛೇರಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 

 

ಇದರ ಮಧ್ಯೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಹಿರಿಯೂರು ಪಟ್ಟದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಆಯ್ಕೆಮಾಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಮ್ಮ ಪಕ್ಷದ ಎಲ್ಲ ನಗರಸಭೆಯ ಸದಸ್ಯರುಗಳು ಉತ್ತಮ ಕೆಲಸ ನಿರ್ವಹಿಸುವ ವಿಶ್ವಾಸ ಗಳಿಸಿ, ನಮ್ಮ ಸರ್ಕಾರ ಇಲ್ಲದಿದ್ದರೂ ಸಹ ಸ್ವಚ್ಚ ಮತ್ತು ದಕ್ಷ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ನಮ್ಮ ಕಾಂಗ್ರೆಸ್ ಸರ್ಕಾರದಿಂದ ಅನುಷ್ಠಾನ ಗೊಂಡು ಕುಂಠಿತವಾಗಿರುವ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರ ಇಲ್ಲದಿದ್ದರೂ ಸಹ
ವಿಶೇಷವಾಗಿ ಮಾರಿಕಣಿವೆಯಿಂದ ಹಿರಿಯೂರು ನಗರಕ್ಕೆ 48 ಕೋಟಿ ರೂಪಾಯಿ ವೆಚ್ಚದಲ್ಲಿ ಹಿರಿಯೂರು ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಲಾಗಿತ್ತು ಎಂದು ತಿಳಿಸಿದರು. ಇನ್ನು
ಈಗ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪೂರ್ಣ ಅವಧಿ ಅಧಿಕಾರ ನಡೆಸುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪಕ್ಷ ಮತ್ತು ಸದಸ್ಯರು ತಿರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ತಾಜ್ ಫೀರ್, ಜಿ.ಪ. ಸದಸ್ಯರಾದ ಪಾಪಣ್ಣ, ಗೀತ ನಾಗಕುಮಾರ್, ಖಾದಿ ರಮೇಶ್, ಸೇರಿದಂತೆ ನಗರಸಭೆ ಸದಸ್ಯರು, ಮುಖಂಡರು ಹಾಜರಿದ್ದರು.

 

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *