ಹಿರಿಯೂರು ನಗರಸಭೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ; ಬಿಜೆಪಿಗೆ ಸ್ಪರ್ಧೆಗೆ ಅಭ್ಯರ್ಥಿಯೇ ಇಲ್ಲ.

ಜಿಲ್ಲಾ ಸುದ್ದಿ

ಹಿರಿಯೂರು ನಗರಸಭೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ; ಬಿಜೆಪಿಗೆ ಸ್ಪರ್ಧೆಗೆ ಅಭ್ಯರ್ಥಿಯೇ ಇಲ್ಲ.

ಚಿತ್ರದುರ್ಗ,ನ04(ಸಂವಾ)-  ಜಿಲ್ಲೆಯ ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು  ಅಧ್ಯಕ್ಷರಾಗಿ 08 ನೇ ವಾರ್ಡ್ ಸದಸ್ಯೆ ಶಂಶುನ್ಸಿಸಾ  ಹಾಗೂ ಉಪಾಧ್ಯಕ್ಷರಾಗಿ 18 ನೇ ವಾರ್ಡ್ ಸದಸ್ಯ ಬಿ.ಎನ್. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದು ನಗರಸಭೆಯಲ್ಲಿ  ಕಾಂಗ್ರೆಸ್ ನ ಮಾಜಿ ಸಚಿವ ಡಿ. ಸುಧಾಕರ್ ಬೆಂಬಲಿಗರು ಅಧಿಕಾರ ಹಿಡಿದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ  ಶಾಸಕರಿದ್ದು,  ಬಿಜೆಪಿಗೆ  ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥೀಯೇ ಇಲ್ಲದಂತಾಗಿದ್ದು, ಇದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.Chitradurga hiriyur municipality power has got congress

ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿದ್ದು 13 ರಲ್ಲಿ ಕಾಂಗ್ರೆಸ್,09 ರಲ್ಲಿ ಪಕ್ಷೇತರ, 06 ರಲ್ಲಿ ಬಿಜೆಪಿ ಹಾಗೂ 03 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. 31 ಸದಸ್ಯರಲ್ಲಿ ಓರ್ವ ಜೆಡಿಎಸ್ ಹಾಗೂ ಓರ್ವ ಕಾಂಗ್ರೆಸ್ ಸದಸ್ಯ ಮೃತಪಟ್ಟಿದ್ದಾರೆ.  ಅಧ್ಯಕ್ಷ ಸ್ಥಾನ ಬಿಸಿಎ  ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜಿ ಪುರುಷರಿಗೆ ಮೀಸಲಾಗಿತ್ತು.

 

 

Chitradurga hiriyur municipality power has got congress
ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 08 ನೇ ವಾರ್ಡ್ ನ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಶಂಶುನ್ನಿಸಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 18 ನೇ ವಾರ್ಡ್ ನ ಬಿ.ಎನ್. ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿದ್ದರಿಂದ ಚುನಾವಣಾ ಅಧಿಕಾರಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಪ್ರಸನ್ನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಭೆಯಲ್ಲಿ ಕಾಂಗ್ರೆಸ್ ಪಕ್ಷದ 13 ಸದಸ್ಯರು ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ ಸೇರ್ಪಡೆ ಆದ ಇಬ್ಬರು ಸದಸ್ಯರು, ಬಿಜೆಪಿ ಬೆಂಬಲಿತ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆ ಆದ ಓರ್ವ ಸದಸ್ಯೆ  ಹಾಗೂ ಪಕ್ಷೇತರ 08 ಸದಸ್ಯರು ಸೇರಿ 23 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಗೆಲುವು ಸಾಧಿಸುತಿದ್ದಂತೆ ಪಕ್ಷದ ನಾಯಕರು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *